ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅನ್ವಯ ಹೊಸ ದಂಡದಿಂದ ಬಚಾವಾಗಲು ಲಕ್ಷಾಂತರ ಜನರು ಹೆಲ್ಮೆಟ್ ಖರೀದಿಗೆ ಮುಗಿ ಬಿದ್ದಿದ್ದರೆ ಇತ್ತ ಪುದುಕೊಟ್ಟೈ ಜಿಲ್ಲೆಯ ಸಾವಿರ ಪುರುಷರು ಎಂದಿನಂತೆ ಇದ್ದಾರೆ.
ಈ ಪುರುಷರುರು Meivazhi Sabha ಎಂಬ ಸಂಪ್ರದಾಯದ ಹಿಂಬಾಲಕರಾಗಿದ್ದು ಪೇಟಾ ಧರಿಸುವುದು ಕಡ್ಡಾಯ. ಈ ಸಮುದಾಯ ಹೆಲ್ಮೆಟ್ ಧರಿಸುವಿಕೆಯಿಂದ 2007 ರಲ್ಲಿ ಸರ್ಕಾರ ವಿನಾಯಿತಿ ನೀಡಿದೆ.
ಈ ಹಿಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಗೆ ನಮ್ಮ ವಿರುದ್ಧ ಒಂದು ಪ್ರಕರಣ ದಾಖಲಿಸಿದ್ದರು. ಅನಂತರ ಸರ್ಕಾರ ಇದನ್ನು ಹಿಂಪಡೆದು ಈ ಕುರಿತು ವಿನಾಯಿತಿ ನೀಡಿ ಆದೇಶವನ್ನು ಮಾಡಿದೆ ಎಂದು ಕನಕರಾಜು ಎಂಬವರು ಹೇಳಿದ್ದಾರೆ.
ನಿಮ್ಮ ವೋಟರ್ ಐಡಿಯಲ್ಲಿರೋ ವಿವರಗಳನ್ನೇನಾದ್ರೂ ಬದಲಾಯಿಸಬೇಕು ಅಂದುಕೊಂಡಿದ್ರೆ ಇನ್ಮೇಲೆ ಯಾವುದೇ ಕಚೇರಿಗೆ ಅಲೆಯಬೇಕಾಗಿಲ್ಲ. ನಿಮ್ಮ ಮೊಬೈಲ್ ಮೂಲಕವೇ ಮಾಡಬಹುದು.
ಇದಕ್ಕಾಗಿಯೇ ಚುನಾವಣಾ ಆಯೋಗ ವೋಟರ್ ಆಪ್ ಅನ್ನು ಪರಿಚಯಿಸಿದೆ. ಈ ಆಪ್ ಮೂಲಕ ಮತದಾರರು ತಮ್ಮ ಹೆಸರಿನಲ್ಲೇನಾದರೂ ತಪ್ಪಾಗಿದ್ರೆ ಅದನ್ನು ಸರಿಪಡಿಸಬಹುದು. ಇಲ್ಲವೇ ವಿಳಾಸ ಬದಲಾವಣೆಯನ್ನೂ ಮಾಡಬಹುದು.
ಇದಕ್ಕಾಗಿ ಚುನಾವಣಾ ಆಯೋಗದ ವೋಟರ್ಸ್ ಹೆಲ್ಪ್ ಲೈನ್ ಅನ್ನೋ ಆಪ್ ಅನ್ನು ಡೌನ್ಲೋಡ್ ಮಾಡಿ.
ಬಳಿಕ ವೋಟರ್ಸ್ ಹೆಲ್ಪ್ ಲೈನ್ ಥಂಬ್ ನೇಲ್ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮಗೆ 3 ಆಯ್ಕೆಗಳಿವೆ. ಸರ್ಚ್ ಬೈ ಬಾರ್ ಕೋಡ್ ನಲ್ಲಾದ್ರೆ ನಿಮ್ಮ ವೋಟರ್ ಐಡಿಯಲ್ಲಿರೋ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಸರ್ಚ್ ಬೈ ಡಿಟೇಲ್ಸ್ ಕೂಡ ಬಳಸಬಹುದು. ಅಥವಾ ವೋಟರ್ ಐಡಿಯಲ್ಲಿರೋ EPIC ನಂಬರ್ ಮೂಲಕವೂ ಸರ್ಚ್ ಮಾಡಲು ಅವಕಾಶವಿದೆ.
ಸರ್ಚ್ ರಿಸಲ್ಟ್ ಬಂದ ಬಳಿಕ ಅಲ್ಲಿ ನಿಮಗೆ ಬೇಕಾದ ತಿದ್ದುಪಡಿಗಳನ್ನ ಮಾಡಿಕೊಳ್ಳಿ. ಸರ್ಚ್ ರಿಸಲ್ಟ್ ಮೇಲ್ಭಾಗದಲ್ಲಿರೋ ಆ್ಯಕ್ಷನ್ ಬಾರ್ ಮೇಲೆ ಕ್ಲಿಕ್ ಮಾಡಿದ್ರೆ ನೇರವಾಗಿ ಕರೆಕ್ಷನ್ ಪೇಜ್ ಓಪನ್ ಆಗುತ್ತದೆ.
ನಿಮಗೆ ಬೇಕಾದ ಬದಲಾವಣೆ ಹಾಗೂ ತಿದ್ದುಪಡಿಗಳನ್ನು ಮಾಡಿ ಸಬ್ ಮಿಟ್ ಮಾಡಿ.
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಆಗ್ಲೇ ರಾಖಿ ನೋವುಣ್ಣುತ್ತಿದ್ದಾಳೆ. ರಾಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರುವ ವಿಡಿಯೋಗಳು, ಮದುವೆ ನಂತ್ರವೂ ರಾಖಿ ಖುಷಿಯಾಗಿಲ್ಲ ಎಂಬುದನ್ನು ಹೇಳ್ತಿದೆ.
ರಾಖಿ ಪತಿ ಲಂಡನ್ ನಲ್ಲಿ ವಾಸವಾಗಿದ್ದಾರೆ. ಹಾಗಾಗಿ ರಾಖಿ ಪತಿ ಜೊತೆ ಕಡಿಮೆ ಸಮಯ ಕಳೆದಿದ್ದಾಳೆ. ಇದು ರಾಖಿ ಬೇಸರಕ್ಕೆ ಕಾರಣವಾಗಿದೆ. ಹಾಗಾಗಿ ಒಂದೊಂದೇ ನೋವಿನ ವಿಡಿಯೋಗಳನ್ನು ಹಂಚಿಕೊಳ್ತಿದ್ದಾಳೆ. ಮದುವೆಯಾದ ಕೆಲ ದಿನಗಳಾದ್ಮೇಲೆ ರಾಖಿ ಈ ಡ್ರಾಮಾ ಶುರುವಾಗಿದೆ.
ರಾಖಿ ಮದುವೆಯಾಗಿದ್ದಾಳೆ ಎಂಬುದನ್ನೇ ಅಭಿಮಾನಿಗಳು ನಂಬಲು ಸಿದ್ಧವಿಲ್ಲ. ರಾಖಿ ಪತಿ ಫೋಟೋವನ್ನು ಹಂಚಿಕೊಳ್ಳದೆ ಇರುವುದು ಇದಕ್ಕೆ ಕಾರಣ. ಬಿಗ್ ಬಾಸ್ ಸೇರಿದಂತೆ ಎರಡು ಶೋಗಳಲ್ಲಿ ಪತಿ ಮುಖ ತೋರಿಸ್ತೇನೆ ಎಂದಿರುವ ರಾಖಿ ನೋವಿನ ವಿಡಿಯೋ ಹಾಕೋದನ್ನು ಬಿಟ್ಟಿಲ್ಲ. ರಾಖಿ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬ ಪ್ರಶ್ನೆಗೆ ರಾಖಿಯೇ ಉತ್ತರ ನೀಡಬೇಕು.
ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಮಹಿಳೆಯೊಬ್ಬಳು ಅವಳಿ ಮಕ್ಕಳನ್ನು ಕೊಳದಲ್ಲಿ ಎಸೆದಿದ್ದಾಳೆ. ಪತಿಯೊಂದಿಗೆ ಜಗಳವಾಡಿಕೊಂಡು ಕೋಪದಲ್ಲಿ ಈ ಕೃತ್ಯ ಎಸಗಿದ ಮಹಿಳೆ, ನಂತರ ಮಕ್ಕಳನ್ನು ಯಾರೋ ಅಪಹರಿಸಿದ್ದಾರೆಂದು ನಾಟಕವಾಡಿದ್ದಾಳೆ.
ಪತಿ-ಪತ್ನಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕ್ರೂರ ತಾಯಿಯ ಕೃತ್ಯದಿಂದ ಪ್ರಾಣ ಕಳೆದುಕೊಂಡ ಅವಳಿ ಕಂದಮ್ಮಗಳು ಜನಿಸಿ ಕೇವಲ 20 ದಿನಗಳಾಗಿತ್ತು.
ನಜ್ಮಾಳ ಪತಿ ವಸೀಂಗೆ ಕೆಲಸ ಸಿಕ್ಕಿರಲಿಲ್ಲ. ಹಾಗಾಗಿ ಅವಳಿ ಮಕ್ಕಳನ್ನು ಸಾಕುವುದು ಹೇಗೆ ಅನ್ನೋ ಚಿಂತೆ ನಜ್ಮಾಗೆ ಶುರುವಾಗಿತ್ತು. ಇದೇ ವಿಚಾರಕ್ಕೆ ನಜ್ಮಾ ಹಾಗೂ ವಸೀಂ ಮಧ್ಯೆ ಜಗಳವೂ ಆಗಿದೆ. ಕೋಪದಲ್ಲಿ ನಜ್ಮಾ ಹಸುಗೂಸುಗಳನ್ನು ಕೊಳಕ್ಕೆ ಎಸೆದುಬಿಟ್ಟಿದ್ದಾಳೆ.
ನಂತರ ಆಕೆಗೆ ತಾನು ಮಾಡಿದ ಕೃತ್ಯದ ಅರಿವಾಗಿದೆ. ಮಕ್ಕಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ಗ್ರಾಮಸ್ಥರ ಬಳಿ ಸುಳ್ಳು ಹೇಳಿದ್ದಾಳೆ. ಈ ಬಗ್ಗೆ ದಂಪತಿ ಪೊಲೀಸರಿಗೂ ದೂರು ನೀಡಿದ್ರು. ವಿಚಾರಣೆ ವೇಳೆ ನಜ್ಮಾ ತಾನೇ ಶಿಶುಗಳನ್ನು ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ತಮ್ಮ ಮನೆಯಲ್ಲಿ ನಗದು ಕದ್ದಿದ್ದಾರೆ ಎಂಬ ಅನುಮಾನದ ಮೇಲೆ ಬಾಡಿಗೆದಾರ ವಿಧವೆಯನ್ನು ಮನೆ ಮಾಲೀಕ ಹೊಡೆದು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮಾಲಿಕ ಸತೀಶ್ ಹಾಗೂ ಅವರ ಪತ್ನಿ ಮತ್ತು ಪುತ್ರ ಪಂಕಜ್, ಸೇವಕ ಕಮಲೇಶ್ ಸೇರಿ ಬಾಡಿಗೆದಾರರಾದ 44 ವರ್ಷದ ಮಂಜು ಗೋಯಲ್ ಗೆ ಹೊಡೆದಿದ್ದಾರೆ. ಬಳಿಕ ಆಕೆಯ ಸಹೋದರನಿಗೆ ಕರೆ ಮಾಡಿ, ಮಂಜು ಅನಾರೋಗ್ಯದ ಬಗ್ಗೆ ಹೇಳಿದ್ದಾರೆ.
ಆಕೆಯ ಸಹೋದರ ಮಹೇಶ್ ಜಿಂದಾಲ್, ಸತೀಶ್ ಮನೆಗೆ ಭೇಟಿ ಕೊಟ್ಟಾಗ ಗಾಯಗೊಂಡಿದ್ದ ಮಂಜು ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ, ತನ್ನ ಮನೆಗೆ ಕರೆದುಕೊಂಡು ಹೋದನು. ನಂತರ ಆಕೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಇರದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುತ್ತಾರೆ ಮಾತ್ರವಲ್ಲ ಇತರ ವಿದ್ಯಾರ್ಥಿಗಳಿಗಿಂತ ಮಾನಸಿಕವಾಗಿ ಹೆಚ್ಚು ಆರೋಗ್ಯವಾಗಿರುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಯುನಿವರ್ಸಿಟಿ ಆಫ್ ಜಾರ್ಜಿಯಾದಲ್ಲಿ ನಡೆದ ಅಧ್ಯಯನವೊಂದರಲ್ಲಿ ಈ ವಿಷಯ ಕಂಡು ಬಂದಿದೆ. 600 ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ರೊಮ್ಯಾಂಟಿಕ್ ಸಂಬಂಧ ಹೊಂದಿರದ ವಿದ್ಯಾರ್ಥಿಗಳು ಗಮನ ಸೆಳೆಯುವ ಸಾಮಾಜಿಕ ಕೌಶಲ್ಯ ಹೊಂದಿರುತ್ತಾರೆ ಹಾಗೂ ಅವರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ.
ವಿಶಿಷ್ಟ ರೀತಿಯಲ್ಲಿ ಆಟೋದ ಚಕ್ರ ಬದಲಾಯಿಸೋ ವಿಡಿಯೋ ಒಂದು ವೈರಲ್ ಆಗಿದೆ. ಜಾಲತಾಣದಲ್ಲಿ ಈ ವಿಡಿಯೋವನ್ನು 50 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ವಿಡಿಯೋವನ್ನು ಶೇರ್ ಮಾಡಿರೋ ಉದ್ಯಮಿ ಹರ್ಷ ಗೋಯೆಂಕಾ, ಜೇಮ್ಸ್ ಬಾಂಡ್ ಸ್ಟೈಲ್ ಅಂತಾ ಉದ್ಘರಿಸಿದ್ದಾರೆ. ವಿಚಿತ್ರ ಹಾಗೂ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಈ ಟೈರ್ ಬದಲಾವಣೆ ನಡೆದಿದೆ.
ಎರಡೇ ಚಕ್ರದಲ್ಲಿ ಆಟೋ ಚಲಿಸ್ತಾ ಇದ್ರೆ, ಹಿಂದೆ ಕುಳಿತ ಆಸಾಮಿ ಟೈರ್ ಚೇಂಜ್ ಮಾಡಿದ್ದಾನೆ. ಹಳೆಯ ಟೈರ್ ತೆಗೆದು, ನಿರಾಯಾಸವಾಗಿ ಹೊಸದನ್ನು ಜೋಡಿಸಿದ್ದಾನೆ. ಈ ವಿಡಿಯೋ ನೋಡಿದ್ರೆ ಎಂಥವರ ಎದೆಯೂ ಅರೆಕ್ಷಣ ಝಲ್ಲೆನ್ನೋದ್ರಲ್ಲಿ ಅನುಮಾನವೇ ಇಲ್ಲ.
ನಿಜಕ್ಕೂ ಇಂತಹ ಸಾಹಸವನ್ನು ನಾವ್ ನೋಡೋದು ಹಾಲಿವುಡ್ ಸಿನೆಮಾಗಳಲ್ಲಿ. ಆದ್ರೆ ರಿಯಲ್ಲಾಗೇ ಇಂತಹ ದುಸ್ಸಾಹಸವನ್ನು ಮಾಡಿರೋದು ಅಚ್ಚರಿ ಹುಟ್ಟಿಸಿದೆ. ಹಲವರು ಅಪಾಯಕಾರಿಯೆಂದು ಉದ್ಘರಿಸಿದ್ರೆ, ಇನ್ನು ಕೆಲವರು ಬಾಂಡ್ ಸ್ಟೈಲ್ ಅನ್ನೋದನ್ನು ಒಪ್ಪಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ ಲಾರೆನ್ ಬುಲೆನ್ ಪ್ರವಾಸಿ ಬ್ಲಾಗರ್. ಇನ್ಸ್ಟ್ರಾಗ್ರಾಮ್ ನಲ್ಲಿ ತಲಾ 27 ಲಕ್ಷ ಹಾಗೂ 21 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಈ ಜೋಡಿ ಬಾಲಿಯಲ್ಲಿ ಐಷಾರಾಮಿ ಮನೆ ನಿರ್ಮಿಸಿದ್ದಾರೆ. ಎರಡು ಅಂತಸ್ತಿನ ಈ ಮನೆ ನಿರ್ಮಾಣಕ್ಕೆ ಇನ್ಸ್ಟ್ರಾಗ್ರಾಮ್ ಗಳಿಕೆಯನ್ನು ಬಳಸಲಾಗಿದೆ. ಮನೆ ನಿರ್ಮಾಣಕ್ಕೆ ದಂಪತಿ ಒಂದು ವರ್ಷಗಳ ಹಿಂದೆ ಜಮೀನು ಖರೀದಿ ಮಾಡಿದ್ದರಂತೆ.
ನನ್ನ ಮನೆಯಿಂದ 7000 ಮೈಲಿ ದೂರದಲ್ಲಿ ತನ್ನ ಕನಸಿನ ಹುಡುಗಿ ಜೊತೆ ನನ್ನದೇ ಮನೆಯಲ್ಲಿ ವಾಸವಾಗ್ತೇನೆಂದು ಎಂದೂ ಎಣಿಸಿರಲಿಲ್ಲ. ಇನ್ಸ್ಟ್ರಾಗ್ರಾಮ್ ಪ್ರಯೋಜಕತ್ವ ಹಾಗೂ ಬ್ರಾಂಡ್ ಪ್ರಚಾರದಲ್ಲಿ ಇಷ್ಟೊಂದು ಹಣ ಗಳಿಸಿದ್ದೇನೆಂದು ಜ್ಯಾಕ್ ಹೇಳಿದ್ದಾನೆ. ಜ್ಯಾಕ್ ಒಂದು ಪೋಸ್ಟ್ ಗೆ 6 ಲಕ್ಷ ಪಡೆದ್ರೆ, ಲಾರೆನ್ 5 ಲಕ್ಷ ರೂಪಾಯಿ ಪಡೆಯುತ್ತಾಳೆ.
ಭಾರತದ ಜನಪ್ರಿಯ ಸಿಹಿ ತಿನಿಸುಗಳಲ್ಲಿ ಜಿಲೇಬಿ ಕೂಡ ಒಂದು. ಜಿಲೇಬಿ ಹುಟ್ಟಿದ್ದು ಉತ್ತರಭಾರತದಲ್ಲಿ ಆದ್ರೆ, ದೇಶಾದ್ಯಂತ ಜನರು ಇದನ್ನು ಇಷ್ಟಪಡ್ತಾರೆ. ಜಿಲೇಬಿ ತಿನ್ನಲು ನೀವು ಬೇಕರಿಗೋ ಅಥವಾ ಹೋಟೆಲ್ ಗೋ ಹೋಗಬೇಕಿಲ್ಲ. ಮನೆಯಲ್ಲೇ ಆರಾಮಾಗಿ ನೀವೇ ಇನ್ ಸ್ಟಂಟ್ ಜಿಲೇಬಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿ : ಅರ್ಧ ಕಪ್ ಮೈದಾ ಹಿಟ್ಟು, ಒಂದು ಚಮಚ ಕಾರ್ನ್ ಫ್ಲೋರ್, ಕಾಲು ಚಮಚ ಬೇಕಿಂಗ್ ಸೋಡಾ, ಅರ್ಧ ಚಮಚ ವಿನಿಗರ್, ಒಂದು ಚಮಚ ಮೊಸರು, 5 ಚಮಚ ನೀರು, ಚಿಟಿಕೆ ಅರಿಶಿನ, ಒಂದು ಕಪ್ ಸಕ್ಕರೆ, ಕಾಲು ಕಪ್ ನೀರು, ಕಾಲು ಚಮಚ ಕೇಸರಿ, ಒಂದು ಚಮಚ ತುಪ್ಪ, ಕರಿಯಲು ಎಣ್ಣೆ.
ಮಾಡುವ ವಿಧಾನ : ಮೊದಲು ಸಕ್ಕರೆ ಪಾಕ ತಯಾರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ, ಕಾಲು ಕಪ್ ನೀರು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ. ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಅರ್ಧ ಚಮಚ ನಿಂಬೆ ರಸ ಬೆರೆಸಿ.
ಜಿಲೇಬಿ ಹಿಟ್ಟು ತಯಾರಿಸಲು ಒಂದು ಬೌಲ್ ನಲ್ಲಿ ಅರ್ಧ ಕಪ್ ಮೈದಾಹಿಟ್ಟು, ಒಂದು ಚಮಚ ಕಾರ್ನ್ ಫ್ಲೋರ್, ಒಂದು ಚಮಚ ಮೊಸರು ಹಾಕಿ ಚಮಚದ ಸಹಾಯದಿಂದ ಮಿಕ್ಸ್ ಮಾಡಿ. ಅದಕ್ಕೆ ಅರ್ಧ ಚಮಚ ವಿನಿಗರ್ ಹಾಗೂ 5-6 ಚಮಚ ನೀರು ಬೆರೆಸಿ. ಸುಮಾರು 4 ನಿಮಿಷಗಳವರೆಗೆ ವೃತ್ತಾಕಾರವಾಗಿ ತಿರುಗಿಸುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕಾಲು ಚಮಚ ಬೇಕಿಂಗ್ ಸೋಡಾ ಬೆರೆಸಿ ಇನ್ನೊಮ್ಮೆ ನಿಧಾನವಾಗಿ ಮಿಕ್ಸ್ ಮಾಡಿ. ರೆಡಿಯಾದ ಹಿಟ್ಟನ್ನು ನಿಧಾನವಾಗಿ ಖಾಲಿಯಾದ ಟೊಮೆಟೋ ಕೆಚಪ್ ಬಾಟಲಿಯಲ್ಲಿ ತುಂಬಿಸಿ.
ನಂತರ ಬಾಣೆಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ತುಪ್ಪ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಕೆಚಪ್ ಬಾಟಲಿಯಲ್ಲಿ ಹಾಕಿದ್ದ ಹಿಟ್ಟನ್ನು ಜಿಲೇಬಿ ಆಕಾರದಲ್ಲಿ ಎಣ್ಣೆಯಲ್ಲಿ ಬಿಡಿ. ಒಂದು ಬದಿಯಲ್ಲಿ ಬೆಂದ ಬಳಿಕ ಜಿಲೇಬಿಯನ್ನು ಮಗುಚಿ ಹಾಕಿ. ಜಿಲೇಬಿಗೆ ತಳುವಾದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯಿಂದ ತೆಗೆದು ಕೂಡಲೇ ತಯಾರಿಸಿಟ್ಟಿದ್ದ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ. ಸಕ್ಕರೆ ಪಾಕದಲ್ಲಿ ಜಿಲೇಬಿಯ ಎರಡೂ ಕಡೆ ಮುಳುಗಿಸಿ. ಗರಮಾ ಗರಂ ಜಿಲೇಬಿಯನ್ನು ಸರ್ವ್ ಮಾಡಿ.
ಲೋಕಸಭೆಯಲ್ಲಿ ಸಂಸದರ ಮುಖಂಡ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗ್ತಾರೆ. ರಾಜ್ಯಗಳ ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕರು ಮುಖ್ಯಮಂತ್ರಿಗಳಾಗ್ತಾರೆ. ದೇಶದಲ್ಲಿ ಪ್ರಧಾನ ಮಂತ್ರಿಗೆ ಸಿಗುವ ಸ್ಥಾನ ರಾಜ್ಯಗಳಲ್ಲಿ ಮುಖ್ಯಮಂತ್ರಿಗೆ ಸಿಗುತ್ತದೆ.ಆದ್ರೆ ಆಶ್ಚರ್ಯಕಾರಿ ಸಂಗತಿಯೊಂದಿದೆ. ಪ್ರಧಾನ ಮಂತ್ರಿಗೆ ಸಿಗುವ ಸಂಬಳಕ್ಕಿಂತ ಕೆಲ ರಾಜ್ಯದ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಸಂಬಳ ಸಿಗುತ್ತದೆ.
ಸದ್ಯ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರ ಮೋದಿಗೆ ತಿಂಗಳಿಗೆ 1 ಲಕ್ಷ 60 ಸಾವಿರ ರೂಪಾಯಿ ಸಂಬಳ ಸಿಗುತ್ತದೆ.ಆದ್ರೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳ ಸಂಬಳ 4 ಲಕ್ಷಕ್ಕಿಂತ ಹೆಚ್ಚಿದೆ.ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಸಂಬಳ 4 ಲಕ್ಷದ 10 ಸಾವಿರ ರೂಪಾಯಿಯಿದೆ.
ತೆಲಂಗಾಣದ ನಂತ್ರ ದೆಹಲಿ ಮುಖ್ಯಮಂತ್ರಿಗಳು ಹೆಚ್ಚಿನ ಸಂಬಳ ಪಡೆಯುತ್ತಾರೆ. ದೆಹಲಿ ಮುಖ್ಯಮಂತ್ರಿಗೆ ತಿಂಗಳಿಗೆ 3 ಲಕ್ಷದ 90 ಸಾವಿರ ರೂಪಾಯಿ ಸಂಬಳ ಬರುತ್ತದೆ.ಗುಜರಾತ್ ಮುಖ್ಯಮಂತ್ರಿಗಳಿಗೆ ತಿಂಗಳಿಗೆ 3 ಲಕ್ಷದ 21 ಸಾವಿರ ರೂಪಾಯಿ ಸಂಭಾವನೆಯಾದ್ರೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ 3 ಲಕ್ಷ ರೂಪಾಯಿ ಸಂಬಳವಿದೆ.
ಎರಡು ಲಕ್ಷಕ್ಕಿಂತ ಹೆಚ್ಚು ಹಾಗೂ ಮೂರು ಲಕ್ಷಕ್ಕಿಂತ ಕಡಿಮೆ ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢ, ಪಂಜಾಬ್, ಗೋವಾ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕರ್ನಾಟಕ ಸಿಎಂಗಳು ಸೇರಿದ್ದಾರೆ.ತ್ರಿಪುರಾದ ಸಿಎಂಗೆ ಅತಿ ಕಡಿಮೆ ಸಂಬಳವಿದೆ. ಅವ್ರು ತಿಂಗಳಿಗೆ ಒಂದು ಲಕ್ಷದ 5 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ.ರಾಜ್ಯಗಳ ಪರಿಸ್ಥಿತಿ ಹಾಗೂ ಅಲ್ಲಿನ ಆರ್ಥಿಕ ಸ್ಥಿತಿ ಮೇಲೆ ಮುಖ್ಯಮಂತ್ರಿಗಳ ಸಂಬಳ ನಿಗದಿಯಾಗಿರುತ್ತದೆ.
ನಡುರಸ್ತೆಯಲ್ಲಿ ಎರಡು ಬಲಿಷ್ಠ ಕರಡಿಗಳು ಕಾದಾಡ್ತಿರೋ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಕರಡಿಗಳ ಕುಸ್ತಿಯನ್ನು ತೋಳವೊಂದು ದೂರದಲ್ಲಿ ನಿಂತು ವೀಕ್ಷಿಸ್ತಾ ಇರೋ ದೃಶ್ಯ ಕೂಡ ಸೆರೆಯಾಗಿದೆ.
ಸುಮಾರು 1.6 ಮಿಲಿಯನ್ ಗೂ ಅಧಿಕ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಮಹಿಳೆಯೊಬ್ಬಳು ಕರಡಿಗಳ ಕಿತ್ತಾಟವನ್ನು ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಬ್ರಿಟಿಷ್ ಕೊಲಂಬಿಯಾ ಹೈವೇಯಲ್ಲಿ ನಡೆದ ಘಟನೆ ಇದು. 43,000 ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಕರಡಿಗಳ ಜಗಳ, ನಂತರ ವಿಕೋಪಕ್ಕೆ ಹೋಗಿತ್ತು. ಪರಸ್ಪರ ಪರಚುತ್ತ, ಕಚ್ಚುತ್ತ ಕರಡಿಗಳು ಕಾದಾಡಿವೆ.
Don’t normally post on here but thought I’d share this incredibly rare and amazing moment with all you guys of these grizzlies fighting! Keep a sharp eye out for the little wolf that is observing them in the distance! 🥰
ರಾಜೀನಾಮೆ ನೀಡಿರುವ 14 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಸ್ಪರ್ಧೆಗೆ ಅನರ್ಹ ಶಾಸಕರಿಗೆ ಅವಕಾಶವಿಲ್ಲವೆಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.
ಆದರೆ, ಸುಪ್ರೀಂಕೋರ್ಟ್ ನಲ್ಲಿ ಇಂದು, ಶಾಸಕರ ಅನರ್ಹತೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಲು ಆಯೋಗದ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಹಿನ್ನಲೆಯಲ್ಲಿ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆನ್ನಲಾಗಿದೆ.
ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಅನರ್ಹ ಶಾಸಕರು ಚಿಂತನೆ ನಡೆಸಿದ್ದು, ಇಂದು ಸಂಜೆ ಬೆಂಗಳೂರಿಗೆ ವಾಪಾಸಾಗಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಮೊದಲೇ ಅನರ್ಹ ಶಾಸಕರು ಮತ್ತು ಅವರ ಕುಟುಂಬದವರಿಂದ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಅನರ್ಹರ ಅರ್ಜಿ ಪುರಸ್ಕೃತವಾದರೆ ಕುಟುಂಬದವರ ನಾಮಪತ್ರ ವಾಪಸ್ ಪಡೆಯಲಾಗುತ್ತದೆ. ಒಂದು ವೇಳೆ ಅನರ್ಹ ಶಾಸಕರ ಅರ್ಜಿ ತಿರಸ್ಕೃತಗೊಂಡರೆ ಕುಟುಂಬದವರು ಕಣದಲ್ಲಿರುತ್ತಾರೆ.
ಈ ವಾರದಲ್ಲಿ ನಾಮಪತ್ರಸಲ್ಲಿಕೆಗೆ ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಚುನಾವಣಾ ಆಯೋಗದ ವಕೀಲರು ಹೇಳಿಕೆ ನೀಡಿದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರವಾಸೋದ್ಯಮ ದಿನ ಆಚರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಹಿನ್ನೆಲೆಯಲ್ಲಿ ರಾಮನಗರದ ಬಳಿ ಹೆದ್ದಾರಿಯ ಇಕ್ಕೆಲಗಳಲ್ಲಿ ಹಳ್ಳಿ ತಿಂಡಿ ಪ್ರಮೋಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಪ್ರವಾಸಿಗರಿಗೆ ಹಳ್ಳಿ ಬದುಕಿನ ಅನುಭವ ಕಟ್ಟಿ ಕೊಡಲಾಗುವುದು. ಎತ್ತಿನ ಬಂಡಿ ಪ್ರಯಾಣ, ಕಬ್ಬು ತಿನ್ನುವ ಸ್ಪರ್ಧೆ ಇತ್ಯಾದಿ ಇರಲಿವೆ ಎಂದು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಆರಂಭ ಸಂಬಂಧ ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದ್ದು, ಉತ್ತರ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ಅವರನ್ನು ಕುಕ್ಕಿದವು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪ ಅವರನ್ನು ಕುಕ್ಕಿದ್ದು ಯಾರು ಎಂಬುದನ್ನು ಅವರು ಹೇಳಬೇಕು. ತುಮಕೂರಿನಲ್ಲಿ ದೇವೇಗೌಡರು, ಮಂಡ್ಯದಲ್ಲಿ ನಮಗೆ ಸೋಲಾಯ್ತು. ಆದರೆ, ಕೋಲಾರದಲ್ಲಿ ಹದ್ದಾಗಿ ಕುಕ್ಕಿದ ಗಿಣಿಗಳು ಯಾವು? 7 ಬಾರಿ ಗೆದ್ದ ಮುನಿಯಪ್ಪರನ್ನು ಕುಕ್ಕಿದ್ದು ಯಾರು? ಇವರ ನಾಟಕಗಳೆಲ್ಲ ಗೊತ್ತಿದೆ ಎಂದು ಹೆಚ್.ಡಿ.ಕೆ. ವಾಗ್ದಾಳಿ ನಡೆಸಿದ್ದಾರೆ.
ಸಾಕಿದ ಗಿಣಿಗಳು ಸಿದ್ದರಾಮಯ್ಯ ಅವರನ್ನು ಕುಕ್ಕಿದವು ಎಂದು ರಮೇಶ್ ಕುಮಾರ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಿನ್ನೆ ಹದ್ದಾಗಿ ಕುಕ್ಕಿತಲ್ಲೋ ಎಂದು ಭಾಷಣ ಮಾಡಿದ್ದಾರಲ್ಲ. ಕೋಲಾರದಲ್ಲಿ 7 ಬಾರಿ ಗೆದ್ದ ಮುನಿಯಪ್ಪರನ್ನು ಕುಕ್ಕಿದ್ದು ಯಾರು ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
‘ಸಿದ್ದರಾಮಯ್ಯನವರ ಹೊಸಕೋಟೆ ಭಾಷಣ ಕೇಳಿದ್ದೇನೆ. ಮಂಡ್ಯದಲ್ಲಿ ನಮಗೆ ಸೋಲಾಗಿರಬಹುದು ಸೋಲಿಗೆ ನಾವು ಕಾರಣ ಇರಬಹುದು. ಕೋಲಾರದಲ್ಲಿ 7 ಬಾರಿ ಗೆದ್ದವರ ಸೋಲಿಗೆ ಯಾರು ಕಾರಣ ಎಂದು ಹೇಳಲಿ’
ಹೀಗೆಂದು ಹೇಳಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಹೊಸಕೋಟೆಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ಧರಾಮಯ್ಯ ಮಂಡ್ಯದ ಜನ ಲೋಕಸಭೆ ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಬೆಂಬಲ ನೀಡಿದ್ದರು. ದುಡ್ಡಿಗೆ ಬೆಲೆ ಕೊಟ್ಟಿದ್ರಾ? ಎಂದು ಮಾಜಿ ಸಿಎಂ ಹೆಚ್.ಡಿ.ಕೆ. ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಇವರ ನಾಟಕ ನನಗೆ ಗೊತ್ತಿದೆ ಎಂದು ಕಾಂಗ್ರೆಸ್, ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ತುಮಕೂರು, ಮಂಡ್ಯದಲ್ಲಿ ನಮಗೆ ಸೋಲಾಗಿರಬಹುದು. ಕೋಲಾರದಲ್ಲಿ ಕಾಂಗ್ರೆಸ್ ಸೋಲಿಗೆ ಯಾರು ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ. ಹೊಸಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಸ್ವಾಭಿಮಾನದ ಭಾಷಣ ಕೇಳಿದ್ದೇನೆ. ಮಂಡ್ಯದಲ್ಲಿ ಜನ ಸ್ವಾಭಿಮಾನಕ್ಕೆ ಬೆಂಬಲ ನೀಡಿದ್ದಾರೆ. ಹಣಕ್ಕೆ ಮತ ಹಾಕಿಲ್ಲವೆಂದು ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದ್ದು, ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಪಕ್ಷದ ಕಾರ್ಯಕರ್ತರು ನಮ್ಮ ಕುಟುಂಬದವರೇ ಆಗಿದ್ದು, ಸಾಮಾನ್ಯ ಕಾರ್ಯಕರ್ತರನ್ನು 15 ಕ್ಷೇತ್ರಗಳಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಅಮ್ಮನಾಗಿ ಪ್ರಮೋಷನ್ ಪಡೆದಿರೋ 27ರ ಹರೆಯದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಆಗಸ್ಟ್ ನಲ್ಲಿ ತುಂಬು ಗರ್ಭಿಣಿ ಆ್ಯಮಿಯ ಬೇಬಿ ಶೋವರ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿತ್ತು.
ಗರ್ಭಿಣಿಯಾಗಿದ್ದಾಗ್ಲೇ ಆ್ಯಮಿ ಹಲವು ಸಾಹಸಗಳನ್ನು ಕೂಡ ಮಾಡಿದ್ದಳು. 6 ತಿಂಗಳಾಗಿದ್ದಾಗ ಯುರೋಪ್ ಗೆ ರೋಡ್ ಟ್ರಿಪ್ ಗೆ ಸಹ ತೆರಳಿದ್ಲು. ಪ್ರತಿನಿತ್ಯ ತಪ್ಪದೇ ಆ್ಯಮಿ ಜಿಮ್ ಮಾಡುತ್ತಿದ್ದುದು ವಿಶೇಷ.
2010ರಲ್ಲಿ ತಮಿಳು ಚಿತ್ರದ ಮೂಲಕ ಆ್ಯಮಿ ಸಿನೆಮಾ ರಂಗ ಪ್ರವೇಶಿಸಿದ್ಲು. ತೆಲಗು ಹಾಗೂ ಕನ್ನಡ ಚಿತ್ರಗಳಲ್ಲೂ ಆ್ಯಮಿ ನಟಿಸಿದ್ದಾಳೆ. ಬಾಲಿವುಡ್ ಸಿನೆಮಾಗಳಲ್ಲೂ ನಟಿಗೆ ಚಾನ್ಸ್ ಸಿಕ್ಕಿದೆ.
ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ‘ಹೌಡಿ ಮೋದಿ’ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲಕ ಸಾತ್ವಿಕ್ ಹೆಗಡೆ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಕ್ಷಕರತ್ತ ಸಾಗುವ ಸಂದರ್ಭದಲ್ಲಿ ಕರ್ನಾಟಕದ ಶಿರಸಿಯ ಮೂಲದ ಸಾತ್ವಿಕ್ ಹೆಗಡೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಹೆಗಡೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಚಾನಕ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಮೇಧಾ ಹೆಗಡೆ ಹಾಗೂ ಪ್ರಭಾಕರ ಹೆಗಡೆ ದಂಪತಿಯ ಮಗ ಸಾತ್ವಿಕ್ ಹೆಗಡೆ ಫೋಟೋ ವೈರಲ್ ಆಗಿದೆ.
17 ಮಂದಿ ಶಾಸಕರುಗಳು ರಾಜೀನಾಮೆ ನೀಡಿದ ಕಾರಣಕ್ಕೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದ್ದು, ರಾಜೀನಾಮೆ ನೀಡಿದ ಕಾರಣಕ್ಕೆ ಇವರುಗಳೆಲ್ಲಾ ಸ್ಪೀಕರ್ ತೀರ್ಮಾನದಂತೆ ಅನರ್ಹಗೊಂಡಿದ್ದಾರೆ. ತಮ್ಮ ಅನರ್ಹತೆಯನ್ನು ಪ್ರಶ್ನಿಸಿ 17 ಮಂದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಆದರೆ ಈವರೆಗೂ ಯಾವುದೇ ತೀರ್ಮಾನ ಹೊರಬಿದ್ದಿಲ್ಲ.
ಇದರ ಮಧ್ಯೆ ರಾಜೀನಾಮೆ ನೀಡಿದ 17 ಮಂದಿ ಶಾಸಕರುಗಳ ಕ್ಷೇತ್ರದ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇದು ಅನರ್ಹ ಶಾಸಕರ ಆತಂಕವನ್ನು ಹೆಚ್ಚು ಮಾಡಿದೆ. ಇವರುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಬೇಕಿತ್ತಾದರೂ ಅದು ಈಗ ಬುಧವಾರಕ್ಕೆ ಮುಂದೂಡಿಕೆಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕರ ರಾಜೀನಾಮೆ ಕುರಿತಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಆಡಿದ ಮಾತುಗಳು ಮತ್ತೊಮ್ಮೆ ಮೆಲಕು ಹಾಕುವಂತೆ ಮಾಡಿವೆ. ತಮ್ಮ ಭಾಷಣದ ವೇಳೆ ರಾಜೀನಾಮೆ ನೀಡಿದ್ದ ಶಾಸಕರುಗಳಿಗೆ, ಬಿಜೆಪಿಯವರು ನಿಮ್ಮ ರಾಜಕೀಯ ಭವಿಷ್ಯಕ್ಕೆ ಸಮಾಧಿ ಕಟ್ತಾರೋ ಎಂದು ಶಿವಕುಮಾರ್ ಹೇಳಿದ್ದು, ಅದೇ ರೀತಿ ಆಗಲಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.
ಒಂದೊಮ್ಮೆ ಸುಪ್ರೀಂ ಕೋರ್ಟ್ ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಎಲ್ಲವೂ ಸುಗಮವಾಗಲಿದ್ದು, ವ್ಯತಿರಿಕ್ತ ತೀರ್ಪು ಬಂದರೆ ಅವರ ರಾಜಕೀಯ ಭವಿಷ್ಯವೇ ಮಣ್ಣು ಪಾಲಾಗಲಿದೆ. ಈ ಎಲ್ಲವನ್ನೂ ಮೆಲುಕು ಹಾಕುತ್ತಿರುವ ಅನರ್ಹ ಶಾಸಕರು, ತಾವು ಯಾಕಾದರೂ ರಾಜೀನಾಮೆ ನೀಡಿದೆವೋ ಎಂದು ಪರಿತಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.