![isis]()
![isis]()
ತಮ್ಮ ಉಗ್ರ ಕೃತ್ಯದ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಪೂರ್ವ ಸಿರಿಯಾದ ಡೀರ್ ಅಲ್ ಝೊರ್ ಪ್ರದೇಶದಲ್ಲಿ ರಕ್ತದ ಓಕುಳಿ ಹರಿಸುವ ಮೂಲಕ ಮತ್ತೊಮ್ಮೆ ಕ್ರೌರ್ಯ ಪ್ರದರ್ಶಿಸಿದ್ದಾರೆ.
ಈಗಾಗಲೇ ಟರ್ಕಿ ದೇಶದ ಗಡಿಗೆ ಹೊಂದಿಕೊಂಡಿರುವ ತೈಲ ನಿಕ್ಷೇಪ ಹೆಚ್ಚಾಗಿರುವ ಹಲವು ಜಿಲ್ಲೆಗಳನ್ನು ವಶಪಡಿಸಿಕೊಂಡಿರುವ ಐಸಿಸ್ ಉಗ್ರರು ತಮ್ಮ ಕಾರ್ಯಕ್ಕೆ ಅಡ್ಡಿಯಾದವರನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಪೂರ್ವ ಸಿರಿಯಾದ ಡೀರ್ ಅಲ್ ಝೊರ್ ಪ್ರದೇಶದಲ್ಲಿ 85 ನಾಗರಿಕರು ಮತ್ತು 50 ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಸುಮಾರು 2 ಲಕ್ಷ ಜನ ವಾಸ ಮಾಡುತ್ತಿದ್ದು, ಇದರಲ್ಲಿ ಈಗಾಗಲೇ ಹಲವರು ಐಸಿಸ್ ಉಗ್ರರ ಅಟ್ಟಹಾಸಕ್ಕೆ ತವರನ್ನು ತೊರೆದಿದ್ದರೆ, ಇನ್ನಷ್ಟು ಮಂದಿ ಜೀವ ಭಯದಿಂದ ಬದುಕುತ್ತಿದ್ದಾರೆ. ಒಟ್ಟಾರೆ ಐಸಿಸ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಸಿರಿಯಾದಲ್ಲಿನ ನಾಗರಿಕರು ಇದೀಗ ಹಸಿವಿನಿಂದ ನರಳುತ್ತಿರುವುದು ಮಾತ್ರವಲ್ಲ, ಪ್ರತಿದಿನ ರಕ್ತದ ಹೊಳೆಯೇ ಹರಿಯುತ್ತಿರುವುದು ಮಾತ್ರ ದುರ್ದೈವ.