

ದೆಹಲಿಯ ತುಗಲಕ್ ರಸ್ತೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರಕರಣ ಬಯಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ನೀಡಿದೆ.
ತುಗಲಕ್ ರಸ್ತೆಯ ನಿವಾಸಿ 11 ವರ್ಷದ ಬಾಲಕಿಗೆ ಆರೋಪಿ ಅಶ್ಲೀಲ ದೃಶ್ಯಗಳನ್ನು ತೋರಿಸ್ತಿದ್ದ ಎನ್ನಲಾಗಿದೆ. ನಂತ್ರ ಆಕೆ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದನಂತೆ. ನವೆಂಬರ್ 2ರಂದು ಮೊದಲ ಬಾರಿ ತನ್ನ ಕೆಲಸ ಸಾಧಿಸಿದ್ದಾನೆ ಪ್ರಕಾಶ್ ರಾಯ್. ನಂತ್ರ ಬಾಲಕಿಯನ್ನು ಬೆದರಿಸಿ ಪದೇ ಪದೇ ಇಂಥ ಕೃತ್ಯವೆಸಗಿದ್ದಾನೆ.
ಘಟನೆಯಿಂದ ಭಯಗೊಂಡಿದ್ದ ಬಾಲಕಿ ಮೊದಲು ಪಾಲಕರಿಗೆ ವಿಷ್ಯ ತಿಳಿಸಿರಲಿಲ್ಲ. ಧೈರ್ಯ ಮಾಡಿ ನವೆಂಬರ್ 11ರಂದು ಮನೆಯವರಿಗೆ ಹೇಳಿದ್ದಾಳೆ. ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವೆಂಬರ್ 11ರಂದೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.