

ಮಹಾರಾಷ್ಟ್ರದ ಥಾಣೆ ನ್ಯಾಯಾಲಯ ಸ್ವಯಂ ಘೋಷಿತ ಬಾಬಾನ ಜಾಮೀನು ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿದೆ. 60 ವರ್ಷದ ಬಾಬಾ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರ ಹಾಗೂ ಮೋಸದ ದೂರು ಸಲ್ಲಿಸಿದ್ದಳು. ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಮಾಹಿತಿ ಪ್ರಕಾರ 2015ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಹಾರಾಷ್ಟ್ರದ ಥಾಣೆಯಲ್ಲಿ ವಾಸವಾಗಿರುವ 39 ವರ್ಷದ ಮಹಿಳೆ ಸಂಪರ್ಕಕ್ಕೆ ಬಂದಿದ್ದನಂತೆ ಬಾಬಾ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ತಂದೆಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತಂತೆ. ಈ ಬಗ್ಗೆ ಚಿಂತೆಯಲ್ಲಿದ್ದ ಮಹಿಳೆ ಬಾಬಾನಲ್ಲಿ ದುಃಖ ತೋಡಿಕೊಂಡಿದ್ದಾಳೆ.
ಅಸ್ಸಾಂನ ಗುವಾಹಾಟಿಯಲ್ಲಿ ಆಶ್ರಮವಿದೆ ಎಂದು ಸುಳ್ಳು ಹೇಳಿದ ಬಾಬಾ ತಂದೆ ಹೆಸರಲ್ಲಿ ಮಹಿಳೆಗೆ ಮೋಸ ಮಾಡಿದ್ದಾನೆ. ಮಹಿಳೆ ಕುಟುಂಬಸ್ಥರಿಂದ 3 ಲಕ್ಷ ರೂಪಾಯಿ ಪಡೆದ ಬಾಬಾ ಮಹಿಳೆ ಹಿಂದಿನ ಜನ್ಮದಲ್ಲಿ ತನ್ನ ಪತ್ನಿಯಾಗಿದ್ದಳು ಎಂದಿದ್ದಾನೆ. ಅಷ್ಟೇ ಅಲ್ಲ ಆಕೆಯನ್ನು ದೆಹಲಿ ಸೇರಿದಂತೆ ಬೇರೆ ಕಡೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಸದ್ಯ ಬಾಬಾ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.