

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ತಂಡ ಒಂದು ಅಪ್ಲಿಕೇಷನ್ ಸಿದ್ಧಪಡಿಸಿದೆ. ಈ ಅಪ್ಲಿಕೇಷನ್ ಇಂಟರ್ ನೆಟ್ ನಲ್ಲಿರುವ ನಕಲಿ ಸುದ್ದಿ ಹಾಗೂ ಅಶ್ಲೀಲ ವಿಡಿಯೋ ರವಾನೆ ಮಾಡುವ ಸೈಟನ್ನು ಬ್ಲಾಕ್ ಮಾಡುತ್ತದೆ. ಈ ಆ್ಯಪ್ ಗೆ ಹರ್ ಹರ್ ಮಹಾದೇವ್ ಎಂದು ಹೆಸರಿಡಲಾಗಿದೆ.
ಅಪ್ಲಿಕೇಷನ್ ಡೌನ್ಲೋಡ್ ಮಾಡಿ ದಾಖಲೆಗಳನ್ನು ನೋಂದಾಯಿಸಿದ ನಂತ್ರ ಬಳಕೆದಾರರು ಇಂಟರ್ನೆಟ್ ಓಪನ್ ಮಾಡ್ತಿದ್ದಂತೆ ಭಕ್ತಿಗೀತೆ ಕೇಳಿ ಬರುತ್ತದೆ. ಈ ತಂಡ ವೆಬ್ಸ್ಟೈಟ್ ಬ್ಲಾಕರ್ ಹಾಗೂ ಇಂಟರ್ನೆಟ್ ಫಿಲ್ಟರಿಂಗ್ ಸರ್ವೀಸ್ ಡೆವಲೆಪ್ ಮಾಡಿದೆ. ಅಶ್ಲೀಲ ಸೈಟ್ ಬ್ಲಾಕ್ ಆಗುವುದ್ರಿಂದ ಯಾವುದೇ ವಯಸ್ಕರು ನಿಶ್ಚಿಂತೆಯಾಗಿ ನೆಟ್ ಬಳಸಬಹುದಾಗಿದೆ.
ಹರ್ –ಹರ್ ಮಹಾದೇವ್ ಅಪ್ಲಿಕೇಷನ್ ಡೆವಲೆಪ್ ಮಾಡಲು 6 ತಿಂಗಳು ಬೇಕಾಗಿದೆ. ಸುಮಾರು 3800 ಸೈಟ್ ಗಳನ್ನು ಗುರುತಿಸಿ ಅದಕ್ಕೆ ನಿರ್ಬಂಧ ಹೇರಲಾಗಿದೆ. ತಂಡ ಬೇರೆ ಧರ್ಮದವರ ಭಕ್ತಿ ಗೀತೆಗಳನ್ನು ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ.