

ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗ್ತಿದೆ. ರಜಪೂತ ಸಮುದಾಯ ದಿನಕ್ಕೊಂದು ಎಚ್ಚರಿಕೆ ನೀಡ್ತಿದೆ. ರಜಪೂತ ಕರಣಿ ಸೇನೆಯ ಮಹಿಪಾಲ್ ಸಿಂಗ್ ಮಕರಾನಾ ದೀಪಿಕಾ ಮೇಲೆ ಕೆಂಡ ಕಾರಿದ್ದಾರೆ. ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆಗೆ ಬೆದರಿಕೆಯೊಡ್ಡಿದ್ದಾರೆ.
ಒಂದು ವೇಳೆ ಪದ್ಮಾವತಿ ಚಿತ್ರ ಬಿಡುಗಡೆಯಾದ್ರೆ ದೀಪಿಕಾ ಪಡುಕೋಣೆ ಮೂಗು ಕತ್ತರಿಸುವುದಾಗಿ ಮಹಿಪಾಲ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ರಜಪೂತ ಮಹಿಳೆಯರ ಮೇಲೆ ಯಾರೂ ಕೈ ಎತ್ತುವುದಿಲ್ಲ. ಅಗತ್ಯ ಬಿದ್ದಲ್ಲಿ ಲಕ್ಷ್ಮಣ ಶೂರ್ಪನಕಿಗೆ ಮಾಡಿದಂತೆ ದೀಪಿಕಾ ಮೂಗು ಕತ್ತರಿಸುತ್ತೇವೆ ಎಂದಿದ್ದಾರೆ.
ಇತ್ತ ಉತ್ತರ ಪ್ರದೇಶದಲ್ಲಿ ಡಿಸೆಂಬರ್ 1ರಂದು ಚಿತ್ರ ಬಿಡುಗಡೆಯಾದ್ರೆ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಕರಣಿ ಸೇನೆ ಹೇಳಿದೆ. ನಮ್ಮ ಪೂರ್ವಿಕರು ರಕ್ತದಿಂದ ಇತಿಹಾಸ ಬರೆದಿದ್ದಾರೆ. ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಮಾಡುವವರ ವಿರುದ್ಧ ಹೋರಾಡುತ್ತೇವೆ. ಎಲ್ಲ ಥಿಯೇಟರ್ ಮಾಲೀಕರುಗಳಿಗೆ ಪತ್ರ ಬರೆಯುವುದಾಗಿ ಕರಣಿ ಸೇನೆ ತಿಳಿಸಿದೆ.