

ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಜ್ಯೋತಿಶರದಲ್ಲಿ ಪತಿಯೊಬ್ಬ ಪತ್ನಿ ಹತ್ಯೆ ಮಾಡಿದ್ದಾನೆ. ಬೆಡ್ ರೂಂನಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಪತ್ನಿ ವಿರೋಧಿಸಿದ್ದೇ ಈ ಕೊಲೆಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
2006ರಲ್ಲಿ ಸುಮನ್ ಮದುವೆ ಸಂಜೀವ್ ಜೊತೆ ನಡೆದಿತ್ತು. ಮದುವೆಯಾದ ಕೆಲ ದಿನಗಳಲ್ಲಿಯೇ ಸಂಜೀವ್ ಇನ್ನೊಬ್ಬಳ ಸಂಪರ್ಕ ಬೆಳೆಸಿದ್ದ. ವಿಷ್ಯ ಗಲಾಟೆಗೆ ಕಾರಣವಾಗಿತ್ತು. ಸಂಧಾನ ಮಾತುಕತೆ ನಂತ್ರವೂ ಸಂಜೀವ್ ಸುಧಾರಿಸಿರಲಿಲ್ಲ. ಕಳೆದ ರಾತ್ರಿ ಸಂಜೀವ್ ಹಾಗೂ ಸುಮನ್ ನಡುವೆ ಗಲಾಟೆ ನಡೆದಿದೆ. ಬೆಡ್ ರೂಂನಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಸುಮನ್ ನಿರಾಕರಿಸಿದ್ದಾಳೆ. ಆಕೆ ಡೆಂಗ್ಯೂ ಪೀಡಿತೆಯಾಗಿದ್ದಳು ಎನ್ನಲಾಗಿದೆ.
ಪತ್ನಿ ಸಂಬಂಧ ಬೆಳೆಸಲು ನಿರಾಕರಿಸುತ್ತಿದ್ದಂತೆ ಪತಿ ಸಂಜೀವ್ ಆಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದ್ರೆ ಸಂಜೀವ್ ಸಂಬಂಧದ ಸುಳ್ಳು ಕಥೆ ಹೇಳ್ತಿದ್ದಾನೆ. ಸತ್ಯ ಬೇರೆಯಿದೆ ಎಂದು ಸುಮನ್ ಕುಟುಂಬಸ್ಥರು ಆರೋಪಿಸಿದ್ದಾರೆ.