

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಹು ದಿನದಿಂದ ನೆನೆಗುದಿಗೆ ಬಿದ್ದಿದ್ದ ಮೌಢ್ಯ ನಿಷೇಧ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.
ಭವಿಷ್ಯ, ವಾಸ್ತು ಸೇರಿದಂತೆ ಕೆಲವೊಂದು ಪ್ರಕಾರಗಳನ್ನು ಮೌಢ್ಯ ನಿಷೇಧ ಕಾಯ್ದೆಯಿಂದ ಹೊರಗಿಟ್ಟಿದ್ದು, ಅಂತಿಮವಾಗಿ ತಿದ್ದುಪಡಿಗೊಂಡ ಕಾಯ್ದೆ ಅಂಗೀಕಾರವಾಗಿದೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಪ್ರಸಕ್ತ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹು ಚರ್ಚಿತ ಮೌಢ್ಯ ನಿಷೇಧ ಕಾಯ್ದೆ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಗೆ ತಿದ್ದುಪಡಿ ಮಾಡಲು ಹೊರಟ ವಿಚಾರ ಚರ್ಚಗೆ ಗ್ರಾಸವಾಗಿತ್ತು. ಇದೀಗ ಮೌಢ್ಯ ನಿಷೇಧ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದು, ಕೆಪಿಎಂಇ ತಿದ್ದುಪಡಿ ವಿಧೇಯಕ ಮಂಡನೆಯಾಗುವುದೇ ಅನುಮಾನವಾಗಿದೆ.