![Mithun-Reddy-YSR-Congressman-FB]()
![Mithun-Reddy-YSR-Congressman-FB]()
ವೈ.ಎಸ್.ಆರ್. ಕಾಂಗ್ರೆಸ್ ಸಂಸದ ಮಿಥುನ್ ರೆಡ್ಡಿಯವರನ್ನು ಏರ್ ಇಂಡಿಯಾ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷ ನವೆಂಬರ್ 26 ರಂದು ತಿರುಪತಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಮ್ಯಾನೇಜರ್ ರಾಜಶೇಖರ್ ಎಂಬವರ ಮೇಲೆ ಮಿಥುನ್ ರೆಡ್ಡಿ, ತನ್ನ ಸಂಬಂಧಿಕರಿಗೆ ಬೋರ್ಡಿಂಗ್ ಪಾಸ್ ನೀಡಿಲ್ಲ ಎಂದು ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಅಲ್ಲದೇ ಈ ಕುರಿತು ಏರ್ ಇಂಡಿಯಾ ಅಧಿಕಾರಿಗಳು ದೂರನ್ನೂ ಸಹ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಂಸದ ಮಿಥುನ್ ರೆಡ್ಡಿಯವರನ್ನು ಶನಿವಾರ ರಾತ್ರಿ ವಶಕ್ಕೆ ಪಡೆದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.