![keybord1]()
![keybord1]()
ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ ಇದೀಗ ದೇಶವ್ಯಾಪಿ ಒಂದು ಸಾವಿರ ಎ ಟಿ ಎಂ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿದ್ದು, ಆ ಮೂಲಕ ಮತ್ತೊಮ್ಮೆ ಆಧುನಿಕ ಸ್ಪರ್ಶ ದೊರೆಯಲಿದೆ.
ಹೌದು. ಇತ್ತೀಚಿನ ವರ್ಷಗಳಲ್ಲಿ ಹಳೆಯ ಮಾದರಿಯನ್ನು ಕೊಡವಿ ಬದಲಾಗುತ್ತಿರುವ ಭಾರತೀಯ ಅಂಚೆ ಇಲಾಖೆ ಈಗಾಗಲೇ 12,441 ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಿದ್ದು ಮಾತ್ರವಲ್ಲ, 300 ಎ ಟಿ ಎಂ ಗಳನ್ನು ಸ್ಥಾಪಿಸಿ ಗ್ರಾಹಕ ಸ್ನೇಹಿಯಾಗಿ ಪರಿವರ್ತನೆಯಾಗಿದೆ.
ಅಲ್ಲದೇ ತನ್ನ ಉತ್ತಮ ಸೇವೆಯ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಅಂಚೆ ಇಲಾಖೆ ಇದೀಗ ಹಣಕಾಸು ವ್ಯವಹಾರದ ಅನುಕೂಲಕ್ಕೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ವಿಸ್ತರಿಸಲು ನಿರ್ಧರಿಸಿದ್ದು, ಬ್ಯಾಂಕ್ ನಂತೆ ಹಣಕಾಸು ಲೇವಾದೇವಿ ನಡೆಸುವ ಪ್ರತ್ಯೇಕ ಕೌಂಟರ್ ನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲ, ಹಂತ ಹಂತವಾಗಿ ಗ್ರಾಮೀಣ ಪ್ರದೇಶದಲ್ಲಿಯೂ ಯೋಜನೆ ವಿಸ್ತರಿಸುವ ಉದ್ದೇಶ ಹೊಂದಿರುವ ಅಂಚೆ ಇಲಾಖೆ, ಈ ವರ್ಷದ ಮಾರ್ಚ್ ಒಳಗಡೆ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಎ ಟಿ ಎಂ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿದ್ದು, ಆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲು ಮುಂದಾಗಿದೆ.