![images]()
![images]()
ನವದೆಹಲಿ: ಕೆಲವರಿಗೆ ಮುಂಗೋಪ ಜಾಸ್ತಿ, ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಏನೆಲ್ಲಾ ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಅನಾಹುತಕ್ಕೆ ಕಾರಣರಾಗುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.
ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಯುವತಿಯೊಬ್ಬಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನವದೆಹಲಿ ದ್ವಾರಕಾ ಎಂಬಲ್ಲಿ ನಡೆದಿದೆ. ಪಿಎಸ್ಐ ವೀರೇಂದ್ರ ಎಂಬಾತ ನಿಕ್ಕಿ ಚವಾಣ್ ಎಂಬ ಯುವತಿಯನ್ನು ರಿವಾಲ್ವರ್ ನಿಂದ ಗುಂಡು ಹಾರಿಸಿ ಕೊಂದಿದ್ದು, ಬಳಿಕ ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಕೂಡಲೇ ವೀರೇಂದ್ರ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಲಾಗಿದೆ.
ನವದೆಹಲಿಯ ರಂಹೋಲ್ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ವೀರೇಂದ್ರ ಕೆಲ ವರ್ಷಗಳಿಂದ ನಿಕ್ಕಿ ಚವಾಣ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಇತ್ತೀಚೆಗೆ ಆಕೆಯನ್ನು ತೊರೆದಿದ್ದ ಹಿನ್ನೆಲೆಯಲ್ಲಿ ಆಕೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಇದನ್ನು ಸಹಿಸದೇ, ಕೋಪದಿಂದ ಆಕೆಯ ಮೇಲೆ ಗುಂಡು ಹಾರಿಸಿ ತಾವೂ ಹೊಡೆದುಕೊಂಡಿದ್ದಾರೆ.