![nmdnet6_1453011979_1453011983_300x140]()
![nmdnet6_1453011979_1453011983_300x140]()
ಗಡಿಯಲ್ಲಿ ಪಾಕ್ ಪ್ರಚೋದಿತ ಉಗ್ರರ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ, ಇದೀಗ ಇಂಡೋ-ಪಾಕ್ ಗಡಿಯಲ್ಲಿ ಲೇಸರ್ ತಂತ್ರಜ್ಞಾನ ಬಳಸಲು ಚಿಂತನೆ ನಡೆಸಿದೆ.
ಪಾಕ್ ನಿಂದ ಉಗ್ರರು ಹಾಗೂ ನುಸುಳುಕೋರರು ಗಡಿ ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳ ನುಸುಳುತ್ತಿರುವುದನ್ನು ಮನಗಂಡ ರಕ್ಷಣಾ ಇಲಾಖೆ ಭಾರತ-ಪಾಕ್ ಗಡಿಯ 40 ಆಯಕಟ್ಟಿನ ಪ್ರದೇಶಗಳಲ್ಲಿ ಲೇಸರ್ ಗೋಡೆ ನಿರ್ಮಿಸಲು ಮುಂದಾಗಿದ್ದು, ಈ ಲೇಸರ್ ವಾಲ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ ಲೇಸರ್ ಕಿರಣ ಬಿಡುಗಡೆಯಾಗಲಿದ್ದು, ಮನುಷ್ಯರು ಗಡಿ ಬೇಲಿಯನ್ನು ದಾಟಲು ಯತ್ನಿಸಿದರೆ ಕಂಟ್ರೋಲ್ ರೂಂಗೆ ಸಂದೇಶ ನೀಡಲಿದೆ. ಹಾಗಾಗಿ ಆ ಭಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸುವುದು ಸುಲಭವಾಗುತ್ತದೆ.
ಅಲ್ಲದೇ ಭಾರತ ರಾಜಸ್ಥಾನ್, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಹಾಗಾಗಿ ಈ ಎಲ್ಲ ಗಡಿಯಲ್ಲಿ ಲೇಸರ್ ಬೇಲಿಯನ್ನು ನಿರ್ಮಿಸುವ ಸಾಧ್ಯತೆ ಇದೆ.