![451704-ajit-chandila-worried-700]()
![451704-ajit-chandila-worried-700]()
ಐಪಿಎಲ್ ಸೀಸನ್ 6 ರಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದ ಇಬ್ಬರು ಆಟಗಾರರಿಗೆ ಬಿಸಿಸಿಐ ಇಂದು ಶಿಕ್ಷೆ ವಿಧಿಸಿದ್ದು, ಒಬ್ಬರು ಆಜೀವ ನಿಷೇಧಕ್ಕೊಳಗಾಗಿದ್ದರೆ ಮತ್ತೊಬ್ಬ ಆಟಗಾರ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಆಟವಾಡಿದ್ದ ಅಜಿತ್ ಚಂಡೇಲಾ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ 2013 ರಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಗಿದ್ದು, ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನಿರ್ದೋಷಿಯೆಂದು ಪರಿಗಣಿಸಲ್ಪಟ್ಟಿದ್ದರು.
ರಣಜಿ ಆಟಗಾರ ಹಿಕೇನ್ ಷಾ ಸ್ಪಾಟ್ ಫಿಕ್ಸಿಂಗ್ ನಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಆಮಿಷವೊಡ್ಡಿದ್ದರೆಂದು ಆರೋಪಿಸಲಾಗಿತ್ತು. ಇವರಿಬ್ಬರ ವಿರುದ್ದ ಬಿಸಿಸಿಐ ಶಿಸ್ತು ಸಮಿತಿ ಶಿಕ್ಷೆಯನ್ನು ಪ್ರಕಟಿಸಿದ್ದು ಅಜಿತ್ ಚಂಡೇಲಾ ಕ್ರಿಕೆಟ್ ನಿಂದ ಆಜೀವ ನಿಷೇಧಕ್ಕೊಳಗಾಗಿದ್ದರೆ ಹಿಕೇನ್ ಷಾ 5 ವರ್ಷಗಳ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.