![love-letter]()
![love-letter]()
ಮದುವೆಗೂ ಮುನ್ನ ಪ್ರೇಮ ಪತ್ರ ಬರೆಯುವ ಪ್ರೇಮಿಗಳು ಮದುವೆಯಾದ ನಂತರ ಬರೆಯೋದನ್ನು ಬಿಟ್ಟು ಬಿಡುತ್ತಾರೆ. ಈಗಂತೂ ವಾಟ್ಸಪ್, ಎಸ್ ಎಂ ಎಸ್ ಹಾವಳಿಯಲ್ಲಿ ಪತ್ರ ಬರೆಯೋದು ಮರೆತು ಹೋಗಿದೆ. ಆದರೆ ಆತ ಮಾತ್ರ ಸತತ 40 ವರ್ಷಗಳಿಂದ ಪ್ರೇಮ ಪತ್ರ ಬರೆಯುತ್ತಿದ್ದಾನೆ.
ನ್ಯೂಜರ್ಸಿಯ ನಿವಾಸಿ 74 ವರ್ಷದ ಬಿಲ್ ಬ್ರೆಸ್ನಾನ್ ತನ್ನ ಪತ್ನಿ 74 ವರ್ಷದ ಕರ್ಸ್ಟನ್ ಗೆ ದಿನನಿತ್ಯ ಪ್ರೇಮಪತ್ರ ನೀಡುತ್ತಿದ್ದಾನೆ. 25 ಬಾಕ್ಸ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಲವ್ ಲೆಟರನ್ನು ಮನೆಯಲ್ಲಿ ಇಡಲಾಗಿದೆ. ಪ್ರತಿದಿನ ಪತ್ನಿಗೆ ಪ್ರೇಮ ಪತ್ರ ಬರೆಯುವ ಆತ, ವರ್ಷ, ತಾರೀಕು, ದಿನವನ್ನು ನಮೂದಿಸುತ್ತಾನೆ. ಇದರಲ್ಲಿ ಬಿಲ್ ಸಹಿ ಇರುವುದಲ್ಲದೇ ಪ್ರತಿಯೊಂದು ಪತ್ರದಲ್ಲೂ ಲವ್ ಯು ಡಾರ್ಲಿಂಗ್ ಎಂದು ಕೊನೆಯಲ್ಲಿ ಬರೆಯುತ್ತಾನೆ.
1974 ರಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರೂ ಪ್ರೇಮ ಪಾಶಕ್ಕೆ ಬಿದ್ದರಂತೆ. ರೈಲಿನಲ್ಲಿ ಸಂಚರಿಸುತ್ತಿದ್ದ ಅವರು, ಅಲ್ಲಿ ಸಿಗುವ ಕಾಗದ, ಕರವಸ್ತ್ರವನ್ನು ಪ್ರೇಮ ಪತ್ರಕ್ಕೆ ಬಳಸುತ್ತಿದ್ದರಂತೆ.