![deepika-padukone-2 82_exlst]()
![deepika-padukone-271-6-569ca0cd9dd6b_exlst]()
ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಲ್ಲಿದ್ದಾಳೆ. ರಣಬೀರ್ ಜೊತೆ ಮತ್ತೆ ಪ್ರೀತಿನಾ ಅಂತಾ ಕೇಳಬೇಡಿ. ಇದು ಪ್ರೀತಿ ವಿಷಯ ಅಲ್ಲ ಬಿಡಿ.
ಫಿಲ್ಮ್ ಫೇರ್ ಅವಾರ್ಡ್ ಬಾಚಿಕೊಂಡು ಖುಷಿಯಲ್ಲಿರುವ ದೀಪಿಕಾ ಬಗ್ಗೆ ಅನೇಕ ರೀತಿಯ ಮಾತುಗಳು ಕೇಳಿ ಬರ್ತಾ ಇವೆ. ಇದಕ್ಕೆ ಕಾರಣ ದೀಪಿಕಾ ತಂಗಿಯ ಡ್ರೆಸ್. ಯಸ್, ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮಕ್ಕೆ ದೀಪಿಕಾ ಗೌನ್ ಧರಿಸಿ ಬಂದಿದ್ದಳು. ಆಕೆಯ ಗೌನ್ ಎಲ್ಲರನ್ನು ಆಕರ್ಷಿಸಿದ್ದು ಸುಳ್ಳಲ್ಲ.
ಡಿಂಪಿ ಕಾರ್ಯಕ್ರಮಕ್ಕೆ ತನ್ನ ತಂಗಿ ಅನಿಶಾ ಪಡುಕೋಣೆಯವರನ್ನು ಕರೆ ತಂದಿದ್ದರು. ಅನಿಶಾ ಕೂಡ ಗೌನ್ ಧರಿಸಿ ಬಂದಿದ್ದರು. ಆದ್ರೆ ಅನಿಶಾ ಧರಿಸಿದ್ದು ಹೊಸ ಗೌನ್ ಅಲ್ಲ, ಅಕ್ಕ ದೀಪಿಕಾನ ಹಳೆ ಗೌನ್. ದೀಪಿಕಾ ಎರಡು ವರ್ಷಗಳ ಹಿಂದೆ ಕಾರ್ಯಕ್ರಮಮೊಂದರಲ್ಲಿ ಈ ಗೌನ್ ಧರಿಸಿದ್ದಳು.
![deepika-padukone-2 82_exlst]()
ಸಾಮಾನ್ಯವಾಗಿ ನಟಿಮಣಿಯರು ಬೇರೆ ನಟಿಯರ ಡ್ರೆಸ್ ನಕಲು ಮಾಡೋಕೆ ಇಷ್ಟ ಪಡೋದಿಲ್ಲ. ಹಾಗಿರುವಾಗ ದೀಪಿಕಾ ತನ್ನ ಸಹೋದರಿಗೆ ಹಳೆ ಗೌನ್ ನೀಡಿದ್ದು ಈಗ ಸುದ್ದಿಯಾಗಿದೆ.