![yash]()
![yash]()
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ' ಮಾಸ್ಟರ್ ಪೀಸ್ ' ಬಿಡುಗಡೆಯಾಗಿ 25ನೇ ದಿನಕ್ಕೆ ಕಾಲಿಟ್ಟಿದ್ದು, ಬಿಡುಗಡೆಯಾದ ಸಂದರ್ಭದಲ್ಲಿ ಇದ್ದ ಹವಾ ಇನ್ನೂ ಕಡಿಮೆಯಾಗಿಲ್ಲ. ಇದೀಗ 25 ದಿನದ ಸಂದರ್ಭದಲ್ಲಿ ' ಮಾಸ್ಟರ್ ಪೀಸ್ ' ಮತ್ತೊಂದು ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೇ, ಹೊರರಾಜ್ಯಗಳೂ ಸೇರಿದಂತೆ ದೇಶಾದ್ಯಂತ 340 ಸೆಂಟರ್ ಗಳಲ್ಲಿ ರಿಲೀಸ್ ಆಗಿದ್ದ 'ಮಾಸ್ಟರ್ ಪೀಸ್' ಗಳಿಕೆಯಲ್ಲಿ ದಾಖಲೆಯನ್ನು ಬರೆದಿದ್ದು, ಇದೀಗ 25ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ' ಮಾಸ್ಟರ್ ಪೀಸ್ ' ಬರೋಬ್ಬರಿ 250 ಸೆಂಟರ್ ಗಳಲ್ಲಿ 25ನೇ ದಿನ ಪೂರೈಸಿ ಯಶಸ್ವಿ 50ನೇ ದಿನದತ್ತ ಮುನ್ನಗ್ಗುತ್ತಿದೆ. 150 ಸೆಂಟರ್ ಗಳಲ್ಲಿ 50 ದಿನ ಪೂರೈಸಲಿದೆ ಎಂದು ಹೇಳಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಹಾಡು, ಡೈಲಾಗ್ ಫೈಟ್, ಡ್ಯಾನ್ಸ್ ಪ್ರೇಕ್ಷಕರನ್ನು ಮೋಡಿ ಮಾಡಿವೆ.
'ಮಾಸ್ಟರ್ ಪೀಸ್' ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಕೇಂದ್ರಗಳಲ್ಲಿ ಬಿಡುಗಡೆಯಾಗಿ ಮೊದಲ ದಿನ 6 ಕೋಟಿ ರೂ. ಗಳಿಸಿತ್ತು. ಅಲ್ಲದೇ, ಮೊದಲ ವಾರದಲ್ಲಿ 25 ಕೋಟಿ ರೂ ಗಳಿಸುವ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದಿತ್ತು. ರಾಕಿಂಗ್ ಸ್ಟಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ಗಳಿಸಿದೆ. ಕಳೆದ ವರ್ಷದ ಡಿಸೆಂಬರ್ ಕೊನೆ ವಾರದಲ್ಲಿ ಬಿಡುಗಡೆಯಾಗಿದ್ದರೂ ಇನ್ನೂ ' ಮಾಸ್ಟರ್ ಪೀಸ್ ' ಹವಾ ಮುಂದುವರೆದಿದೆ. ಯಶ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ನಟಿಸಿದ್ದು, ಸುಹಾಸಿನಿ, ರವಿಶಂಕರ್, ಚಿಕ್ಕಣ್ಣ ಮೊದಲಾದವರು ನಟಿಸಿದ್ದಾರೆ. ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದಾರೆ.