

ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಸೆಕ್ಸ್ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಗುಜರಾತ್ ಚುನಾವಣೆ ಹತ್ತಿರ ಬರುತ್ತಿರುವಾಗ್ಲೇ ಈ ವಿಡಿಯೋ ವೈರಲ್ ಆಗಿರೋದು ಹಾರ್ದಿಕ್ ಪಟೇಲ್ ಗೆ ಇರಿಸುಮುರುಸು ಉಂಟು ಮಾಡಿದೆ.
ಆದ್ರೆ ಸೆಕ್ಸ್ ವಿಡಿಯೋದಲ್ಲಿರೋ ವ್ಯಕ್ತಿ ನಾನಲ್ಲ ಎನ್ನುತ್ತಿದ್ದಾರೆ ಹಾರ್ದಿಕ್. ಬಿಜೆಪಿ ತಮ್ಮ ವಿರುದ್ಧ ಮಾಡಿರೋ ಷಡ್ಯಂತ್ರ ಇದು ಅನ್ನೋದು ಅವರ ಆರೋಪ. ಆದ್ರೆ ಈ ವಿಡಿಯೋ ಮೂಲಕ ತಮ್ಮನ್ನು ಹಿಮ್ಮೆಟ್ಟಿಸಲು, ಬೆದರಿಸಲು ಬಿಜೆಪಿಯಿಂದ ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.
ನನ್ನನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ಹಾಕಿಕೊಂಡು ನಕಲಿ ವಿಡಿಯೋ ಮಾಡಲಾಗಿದೆ. ಇದನ್ನು ಫೊರೆನ್ಸಿಕ್ ಎಕ್ಸಾಮಿನೇಶನ್ ಗೂ ಕಳಿಸಿದ್ದೇನೆ ಅಂತಾ ತಿಳಿಸಿದ್ದಾರೆ. ಅಕಸ್ಮಾತ್ ಆ ವಿಡಿಯೋದಲ್ಲಿರೋದು ತಾವೇ ಆಗಿದ್ರೂ ಅದರಲ್ಲಿ ತಪ್ಪೇನು ಅನ್ನೋದು ಹಾರ್ದಿಕ್ ಪ್ರಶ್ನೆ.
ನಾನಿನ್ನೂ 23 ವರ್ಷದ ಯುವಕ, ಗೆಳತಿಯರನ್ನು ಹೊಂದೋದ್ರಲ್ಲಿ ತಪ್ಪೇನಿದೆ? 23 ವರ್ಷದ ಯುವಕನ ಬದಲು 50 ವರ್ಷದವರು ಗರ್ಲ್ಸ್ ಫ್ರೆಂಡ್ಸ್ ಹೊಂದಲು ಸಾಧ್ಯಾನಾ ಅಂತಾ ಮಾರ್ಮಿಕವಾಗಿ ನುಡಿದಿದ್ದಾರೆ. ಅಮಿತ್ ಶಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.