

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಗಳು ಜೀವಾ ಈಗಾಗ್ಲೇ ಅಭಿಮಾನಿಗಳನ್ನು ಹೊಂದಿದ್ದಾಳೆ. ಜೀವಾ ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ಅಕೌಂಟ್ ಕೂಡ ಇದೆ. ಧೋನಿ ಹಾಗೂ ಧೋನಿ ಪತ್ನಿ ಸಾಕ್ಷಿ ಈ ಇನ್ಸ್ಟ್ರಾಗ್ರಾಮ್ ಅಕೌಂಟ್ ನಡೆಸುತ್ತಿದ್ದಾರೆ. ಇದ್ರಲ್ಲಿ ಜೀವಾಳ ಮುದ್ದು ಮುದ್ದಾದ ವಿಡಿಯೋ, ಫೋಟೋಗಳನ್ನು ಹಾಕ್ತಿರುತ್ತಾರೆ.
ಬುಧವಾರ ಸಾಕ್ಷಿ, ಜೀವಾಳ ವಿಡಿಯೋವೊಂದನ್ನು ಹಾಕಿದ್ದಾರೆ. ಇದ್ರಲ್ಲಿ ಸೆಲ್ಫಿಗೆ ಭಿನ್ನ ಭಿನ್ನವಾಗಿ ಜೀವಾ ಫೋಸ್ ಕೊಡ್ತಿದ್ದಾಳೆ. ಒಮ್ಮೆ ಬಾಯಿ ಕಳೆದು ಫೋಸ್ ನೀಡಿದ್ರೆ ಮತ್ತೊಮ್ಮೆ ಬಾಯಿ ಸೊಟ್ಟಗೆ ಮಾಡಿ ಜೀವಾ ಫೋಸ್ ಕೊಡ್ತಿದ್ದಾಳೆ. ಆಕೆ ಸೆಲ್ಫಿ ಫೋಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೀವಾ ಅಭಿಮಾನಿಗಳು ವಿಡಿಯೋಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೀವಾ ಈ ಹಿಂದೆ ಕೂಡ ತನ್ನ ಮುದ್ದಾದ ಹಾಡಿನಿಂದ ಎಲ್ಲರ ಮನ ಗೆದ್ದಿದ್ದಳು. ಜೀವಾಳ ಫೋಟೋ ಹಾಗೂ ವಿಡಿಯೋಕ್ಕೆ ಬಹಳಷ್ಟು ಅಭಿಮಾನಿಗಳಿದ್ದು, ಧೋನಿ ಅಥವಾ ಸಾಕ್ಷಿ ಯಾವಾಗ ಹೊಸ ಫೋಸ್ಟ್ ಹಾಕ್ತಾರೆಂದು ಅಭಿಮಾನಿಗಳು ಕಾಯ್ತಾರೆ.