

ಮಾರುತಿ ಸುಜುಕಿ ಎಸ್ ಕ್ರಾಸ್ (S-Cross) ಮಾಡೆಲ್ ಗ್ರಾಹಕರಲ್ಲಿ ಜನಪ್ರಿಯತೆ ಗಳಿಸಿದೆ. ಈ ಮಾಡೆಲ್ ಕಾರನ್ನು ಒಂದುವರೆ ತಿಂಗಳಲ್ಲಿ 11 ಸಾವಿರ ಗ್ರಾಹಕರು ಬುಕ್ ಮಾಡಿದ್ದಾರೆ. ಕಂಪನಿ ಅಕ್ಟೋಬರ್ 3ರಂದು ಎಸ್-ಕ್ರಾಸ್ ಮಾಡೆಲ್ ಕಾರನ್ನು ಭಾರತಕ್ಕೆ ಪರಿಚಯಿಸಿತ್ತು.
ಈ ಮಾಡೆಲ್ ನ ಎಕ್ಸ್ ಶೋರೂಮ್ ಬೆಲೆ 8.49 ಲಕ್ಷ ರೂಪಾಯಿ. ಟಾಪ್ ಮಾಡೆಲ್ ಬೆಲೆ 11.29 ಲಕ್ಷ ರೂಪಾಯಿ. ಈ ಕಾರು ಪ್ರತಿ ಲೀಟರ್ ಗೆ 23.65 ಕಿಲೋಮೀಟರ್ ಮೈಲೇಜ್ ನೀಡುತ್ತೆ ಎಂದು ಕಂಪನಿ ಹೇಳಿದೆ. ಮಾರುತಿ ಎಸ್-ಕ್ರಾಸ್ ನಲ್ಲಿ 1.3 ಲೀಟರ್ ಡೀಸೆಲ್ ಇಂಜಿನ್ ನೀಡಲಾಗಿದೆ. ಈ ಕಾರಿನ ಇಂಜಿನ್ ಸಾಮರ್ಥ್ಯ 1248 ಸಿಸಿ.
ಮಾರುತಿ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ರೂಪಾಂತರದಲ್ಲಿ ಕಾರನ್ನು ಪರಿಚಯಿಸಿದೆ. ಕಂಪನಿ ಕಾರಿನ ಒಳಾಂಗಣದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಈ ಕಾರು ಟಚ್ಸ್ಕ್ರೀನ್ ಇನ್ಫೊಮೇಷನ್ ಸಿಸ್ಟಂ ಜೊತೆ ಬ್ಲೂಟೂತ್ ಸೌಲಭ್ಯ ನೀಡಿದೆ.