

ಭಾರತದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದಕ್ಕಾಗಿ ಏರ್ಟೆಲ್ ಭಾರತದ ಮೊಬೈಲ್ ಕಂಪನಿ ಕಾರ್ಬನ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಎ 1 ಇಂಡಿಯನ್ ಮೊಬೈಲ್ ಎಂ ಆರ್ ಪಿ ಬೆಲೆ 4390 ರೂಪಾಯಿಯಾಗಿದ್ದು, ಇಫೆಕ್ಟಿವ್ ಬೆಲೆ 1,799 ರೂಪಾಯಿಯಾಗಿದೆ. ಎ41 ಪವರ್ ಮೊಬೈಲ್ ಎಂ ಆರ್ ಪಿ ಬೆಲೆ 4290 ರೂಪಾಯಿಯಾಗಿದ್ದು, 1849 ರೂಪಾಯಿಗೆ ಸಿಗ್ತಿದೆ. ಎರಡೂ ಸ್ಮಾರ್ಟ್ಫೋನ್ ಗೆ 4 ಇಂಚಿನ ಸ್ಕ್ರೀನ್ ನೀಡಲಾಗಿದೆ.
ಡ್ಯುಯೆಲ್ ಸಿಮ್ ನ ಈ ಎರಡೂ ಮೊಬೈಲ್ 1 ಜಿಬಿ ರ್ಯಾಮ್ ಹೊಂದಿದೆ. ಈ ಎರಡರಲ್ಲಿ ಯಾವ ಮೊಬೈಲ್ ಖರೀದಿ ಮಾಡಿದ್ರೂ ಗ್ರಾಹಕರು 169 ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ. ಇದ್ರಲ್ಲಿ ಅನಿಯಮಿತ ಕರೆ ನೀಡಲಾಗ್ತಿದೆ. 5ಜಿಬಿ ಡೇಟಾ ಲಭ್ಯವಾಗಲಿದೆ. ಇದ್ರ ಸಿಂಧುತ್ವ 28 ದಿನಗಳವರೆಗೆ ಇರಲಿದೆ.
ಕೆಲ ದಿನಗಳ ಹಿಂದಷ್ಟೇ ಕಂಪನಿ 4ಜಿ ಸ್ಮಾರ್ಟ್ಫೋನ್ ಎ40 ಇಂಡಿಯನ್ ಫೋನ್ ಬಿಡುಗಡೆ ಮಾಡಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ತಿಂಗಳಲ್ಲೇ ಎಲ್ಲ ಹ್ಯಾಂಡ್ ಸೆಟ್ ಮಾರಾಟವಾಗಿದೆ. ಈ ಎರಡೂ ಸ್ಮಾರ್ಟ್ಫೊನ್ ಅಮೆಜಾನ್ ನಲ್ಲಿ ಲಭ್ಯವಿದೆ. ಮುಂದಿನ ವಾರದಿಂದ ಮೊಬೈಲ್ ಗ್ರಾಹಕರ ಕೈಗೆ ಸಿಗಲಿದೆ.