

ಮುಂಬೈನ ಮಹಿಳಾ ಪೊಲೀಸ್ ಪೇದೆಯೊಬ್ಬಳು ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಜಲ್ಗಾಂವ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಿತಾ ದೇಶಪಾಂಡೆ (ಹೆಸರು ಬದಲಾಯಿಸಲಾಗಿದೆ) ಲಿಂಗ ಪರಿವರ್ತನೆಗಾಗಿ ಇಲಾಖೆಯ ಅನುಮತಿ ಕೇಳಿದ್ದಾರೆ.
ಈಗಾಗ್ಲೇ ಡಿಜಿಪಿ ಕಚೇರಿಗೆ ಮನವಿಯನ್ನೂ ಸಲ್ಲಿಸಲಾಗಿದೆ. ಸ್ಮಿತಾ ದೇಶಪಾಂಡೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದೇ ಆದಲ್ಲಿ, ಈ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತದ ಮೊದಲ ಸರ್ಕಾರಿ ಉದ್ಯೋಗಿ ಎನಿಸಿಕೊಳ್ಳಲಿದ್ದಾರೆ. ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಅನುಮತಿ ಕೇಳಿರುವ ಸ್ಮಿತಾ, ನಂತರ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುವಂತೆಯೂ ಮನವಿ ಮಾಡಿದ್ದಾರೆ.
ಈ ವಿಚಾರದಲ್ಲಿ ಯಾವುದೇ ನಿಯಮ ಅಥವಾ ಕಾನೂನು ಇಲ್ಲ. ಹಾಗಾಗಿ ಹಿರಿಯ ಅಧಿಕಾರಿಗಳ ತೀರ್ಮಾನವೇ ಅಂತಿಮ. ಪುರುಷರಂತಹ ದೇಹದಾರ್ಢ್ಯತೆ ಹೊಂದಿರುವುದರಿಂದ ಸ್ಮಿತಾ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳಂತೆ. ಈ ಬಗ್ಗೆ ವೈದ್ಯರೊಂದಿಗೂ ಚರ್ಚಿಸಿ ನಿರ್ಧಾರಕ್ಕೆ ಬಂದಿರೋದಾಗಿ ತಿಳಿಸಿದ್ದಾಳೆ.