![250x175xgutthi-rying-250x175.jpg.pagespeed.ic.rhKMj51P86]()
![250x175xgutthi-rying-250x175.jpg.pagespeed.ic.rhKMj51P86]()
ಕಾಮಿಡಿ ನೈಟ್ಸ್ ವಿಥ್ ಕಪಿಲ್ ಕಾರ್ಯಕ್ರಮವನ್ನು ನೋಡ್ತಾ ಇದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇಂದು ಕಪಿಲ್ ಕೊನೆಯ ಶೋ ನಡೆಯಲಿದೆ. ಶೋಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅಭಿಮಾನಿಗಳನ್ನು ಸದಾ ನಗಿಸ್ತಾ ಇದ್ದ ಗುತ್ತಿ ಪಾತ್ರಧಾರಿ ಸುನಿಲ್ ಗ್ರೋವರ್ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಅಭಿಮಾನಿಗಳು ಗುತ್ತಿಯ ಫೆವರೆಟ್ ಹಾಡನ್ನು ಹಾಡುವಂತೆ ಕೇಳಿದ್ದಾರೆ. ಆಗ ಸುನಿಲ್ ಭಾವುಕರಾದ್ರು. ಬೇಸರದಲ್ಲಿಯೇ ಅಭಿಮಾನಿಗಳ ಬಯಕೆ ಈಡೇರಿಸಿದ್ದಾರೆ.
ಅಭಿಮಾನಿಗಳು ಹಾಗೂ ಭಾರತೀಯರಿಗೆ ಧನ್ಯವಾದ ಹೇಳಿದ ಸುನಿಲ್, ಕಾಮಿಡಿ ನೈಟ್ಸ್ ವಿಥ್ ಕಪಿಲ್ ವೇದಿಕೆಯನ್ನು ಮಿಸ್ ಮಾಡುತ್ತೇನೆ. ಇದು ನನ್ನ ಜೀವನದ ಮಹತ್ವದ ದಿನಗಳು. ಇಂತ ದಿನ ಮತ್ತೆ ವಾಪಸ್ ಬರಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ ಸುನಿಲ್.