![rajkapoors]()
![rajkapoors 1]()
ದಿ ಶೋ-ಮ್ಯಾನ್ ಎಂದೂ ಕರೆಯಲ್ಪಡುವ ರಾಜ್ ಕಪೂರ್ ಅಭಿಮಾನಿಗಳಿಗೊಂದು ಕಹಿ ಸುದ್ದಿ. ನಿಮ್ಮ ನೆಚ್ಚಿನ ನಟನ ಬಂಗಲೆ ಭಾಗಶಃ ನೆಲಸಮವಾಗಿದೆ. ಪೇಶಾವರದಲ್ಲಿರುವ ಕಪೂರ್ ಮನೆತನದ ಕಪೂರ್ ಹವೇಲಿ ನೆಲಕ್ಕುರುಳಿದೆ.
ಪಾಕಿಸ್ತಾನ ಸರ್ಕಾರದ ಆರ್ಕಿಯಾಲಜಿ ನಿರ್ದೇಶನಾಲಯ ಬಂಗಲೆಯನ್ನು ಸಂರಕ್ಷಿತ ಸ್ಮಾರಕ ಎಂದು ನೋಂದಾಯಿಸಿತ್ತು. ಆದ್ರೆ ಪಾಕಿಸ್ತಾನ ಸರ್ಕಾರ ಎಂದೂ ಈ ಬಂಗಲೆಯನ್ನು ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡಿರಲಿಲ್ಲ. ಕೆಲ ದಿನಗಳ ಹಿಂದೆ ಈ ಬಂಗಲೆಯನ್ನು ಸ್ಮಾರಕ ಮಾಡಲು ಪ್ರಯತ್ನ ಕೂಡ ಮಾಡಲಾಗಿತ್ತು. ಆದ್ರೆ ಪ್ರಯತ್ನ ಫಲ ನೀಡಿರಲಿಲ್ಲ.
![rajkapoors]()
ಪಾಕಿಸ್ತಾನದ ಡಾನ್ ಡಾಟ್ ಕಾಂ ವರದಿ ಪ್ರಕಾರ ಬಂಗಲೆ ನೆಲಕ್ಕುರುಳುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆ ಉದ್ಯೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಯಾವುದೇ ನೆರವಿಗೆ ಬಂದಿಲ್ಲ. ಬಂಗಲೆ ರಕ್ಷಿಸುವ ಬದಲು, ಸಂರಕ್ಷಿತ ಸ್ಮಾರಕ ಎಂಬ ಬಗ್ಗೆ ದಾಖಲೆ ನೀಡುವಂತೆ ಪುರಾತತ್ವ ಇಲಾಖೆ ಸಿಬ್ಬಂದಿಯನ್ನು ಕೇಳಿದ್ದರಂತೆ.
ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ, ಒಂಭತ್ತು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಬಾಚಿಕೊಂಡಿರುವ ರಾಜ್ ಕಪೂರ್ ಪೇಶಾವರದಲ್ಲಿರುವ ಈ ಬಂಗಲೆಯಲ್ಲಿಯೇ ಜನಿಸಿದ್ದರು.