![kejri4]()
![kejri4]()
ನವದೆಹಲಿ; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಹಿಳೆಯೊಬ್ಬಳು ಮಸಿ ಎರಚಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಭಾಷಣ ಮಾಡುವಾಗ ಈ ಅಚ್ಚರಿಯ ಘಟನೆ ನಡೆದಿದೆ.
ಸಮ. ಬೆಸ ನಿಯಮ ಜಾರಿಗೆ ತಂದು ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕೇಜ್ರಿವಾಲ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೇಜ್ರಿವಾಲ್ ಹತ್ತಿರಕ್ಕೆ ಬಂದು ಮಸಿ ಎರಚಿದ್ದಾರೆ. ಮಸಿ ವೇದಿಕೆಯ ಮೇಲಿದ್ದ ಕೇಜ್ರಿವಾಲ್ ಪಕ್ಕದಲ್ಲಿ ಬಿದ್ದಿದ್ದು, ಅವರಿಗೂ ಸ್ವಲ್ಪತಾಗಿದೆ. ಇದನ್ನು ಕಂಡ ಅಲ್ಲಿದ್ದವರೆಲ್ಲಾ ಗಾಬರಿಯಾದರು. ಪೊಲೀಸರು ಕೂಡಲೇ ಸುತ್ತುವರಿದು ಆ ಮಹಿಳೆಯನ್ನು ಬಂಧಿಸಿದ್ದು, ಆಕೆಯನ್ನು ಅಲ್ಲಿಯೇ ಕ್ಷಮಿಸಿದ ಕೇಜ್ರಿವಾಲ್ ಬಿಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ನವದೆಹಲಿಯಲ್ಲಿ ವಾಹನದಟ್ಟಣೆ ಮತ್ತು ಪರಿಸರ ಮಾಲಿನ್ಯದ ಕಾರಣದಿಂದ ಜನವರಿ 1 ರಿಂದ ಸಮ, ಬೆಸ ವಾಹನಗಳ ಸಂಚಾರ ಪ್ರಯೋಗವನ್ನು ದೆಹಲಿಯಲ್ಲಿ ಕೈಗೊಂಡಿದ್ದು ಈ ಪ್ರಯೋಗ ಯಶಸ್ವಿಯಾಗಿ ಜನರ ಪ್ರಶಂಸೆಗೆ ಕಾರಣವಾಗಿತ್ತು, ಮಾಲಿನ್ಯವೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.