![Prime Minister]()
![Prime Minister]()
ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ನಟ, ನಟಿಯರನ್ನು ಹೋಲುವ ವ್ಯಕ್ತಿಗಳಿಗೆ ಎಲ್ಲಿಲ್ಲದ ಖುಷಿ. ಅನೇಕರಿಗೆ ಈ ತದ್ರೂಪವೇ ಬಂಡವಾಳ. ಆದರೆ ಪ್ರಧಾನಿ ಮೋದಿ ಹೋಲುವ ವ್ಯಕ್ತಿ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೋದಿಯವರನ್ನೇ ಹೋಲುವ ವ್ಯಕ್ತಿಯೊಬ್ಬರು ಸಹರಾನ್ಪುರದಲ್ಲಿದ್ದಾರೆ. ಬಡವರಾಗಿರುವ ಅವರ ಮನೆಗೆ ದಿನವೂ ನೂರಾರು ಜನ ಬಂದು ಹೋಗ್ತಾ ಇದ್ದಾರೆ. ಮೋದಿಯವರನ್ನು ಹೋಲುವ ವ್ಯಕ್ತಿ ಜೊತೆ ಗಂಟೆಗಟ್ಟಲೇ ಮಾತನಾಡುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಟೀ ಕುಡಿಯುತ್ತಾರೆ. ತದ್ರೂಪಿಯನ್ನು ಎತ್ತಿ ಜಯಕಾರ ಕೂಗುತ್ತಾರೆ. ಇದ್ರಿಂದ ಆ ವ್ಯಕ್ತಿಗೆ ತೊಂದರೆಯಾಗುತ್ತಿದೆಯಂತೆ.
ಬಟ್ಟೆಗಳು ಹರಿದು ಹೋಗ್ತಾ ಇದ್ದು, ಬಟ್ಟೆ ರಿಪೇರಿ, ಹೊಸ ಬಟ್ಟೆ ಖರೀದಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚಾಗ್ತಾ ಇದೆ. ಟೀ, ಕಾಫಿಗೂ ಹಣ ಖರ್ಚಾಗ್ತಾ ಇದೆ. ಇದರಿಂದ ಬೇಸರಗೊಂಡಿರುವ ಆ ವ್ಯಕ್ತಿ ನೆರವಿಗಾಗಿ ಹಸ್ತ ಚಾಚುತ್ತಿದ್ದಾರೆ. ಬಟ್ಟೆ ಖರೀದಿಸಲು ಹಣ ನೀಡುವಂತೆ ಕೇಳುತ್ತಿದ್ದಾರೆ. ಮೋದಿ ಅಭಿಮಾನಿಯಾಗಿರುವ ಅವರಿಗೆ ಸಹಾಯ ಒದಗಿ ಬರುತ್ತದಾ ಎಂಬುದನ್ನು ಕಾದು ನೋಡಬೇಕಿದೆ.