![298c5cfd00000578-3120469-eighty_one_year_old_shiv_charan_yadav_of_alwar_district_in_rajas-a-9_1434058700455_1434110015]()
![298c5cfd00000578-3120469-eighty_one_year_old_shiv_charan_yadav_of_alwar_district_in_rajas-a-9_1434058700455_1434110015]()
81 ವರ್ಷದ ಈ ವೃದ್ದ 10 ನೇ ತರಗತಿಯನ್ನು ಪಾಸು ಮಾಡಲೇಬೇಕೆಂಬ ಛಲ ಹೊಂದಿದ್ದಾರೆ. ಈಗಾಗಲೇ 45 ಬಾರಿ ಫೇಲಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಪಾಸಾಗಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಪಾಸಾದ ಮೇಲೆಯೇ ತಾನು ವಿವಾಹವಾಗುವುದು ಎಂಬ ಶಪಥವನ್ನೂ ಇವರು ಮಾಡಿದ್ದಾರೆ.
ಬೋರಾ ಬಳಿಯ ಕೋರಿ ಗ್ರಾಮದ ಶಿವ ಚರಣ್ ಯಾದವ್ ಗೆ ಈಗಾಗಲೇ ಸರಿಯಾಗಿ ಕಣ್ಣು ಕಾಣಿಸುತ್ತಿಲ್ಲ. ಹಾಗೆಯೇ ಕಿವಿಯೂ ಕೇಳಿಸುತ್ತಿಲ್ಲ. ಆದರೆ 10 ನೇ ತರಗತಿ ಪಾಸಾಗಬೇಕೆಂಬ ಉತ್ಸಾಹ ಮಾತ್ರ ಬತ್ತಿಲ್ಲ. ಪ್ರತಿ ವರ್ಷವೂ ಅದಕ್ಕಾಗಿ ತಯಾರಿ ಮಾಡಿಕೊಳ್ಳುವ ಶಿವ ಚರಣ್ ಯಾದವ್ ಫಲಿತಾಂಶದಲ್ಲಿ ಮುಗ್ಗರಿಸುತ್ತಲೇ ಇದ್ದರೂ 'ಮರಳಿ ಯತ್ನವ ಮಾಡು' ಎಂಬ ನಾಣ್ಣುಡಿಯಲ್ಲಿ ವಿಶ್ವಾಸವಿರಿಸಿದ್ದು, ಪರೀಕ್ಷಾ ತಯಾರಿಯಲ್ಲಿ ತೊಡಗುತ್ತಾರೆ.
ತಾನು 10 ನೇ ತರಗತಿ ಪಾಸಾದರೆ ಮಾತ್ರ ವಿವಾಹವಾಗುವುದಾಗಿ ಹಲವಾರು ವರ್ಷಗಳ ಹಿಂದೆ ಶಪಥ ಮಾಡಿದ್ದ ಶಿವ ಚರಣ್ ಯಾದವ್, ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಪಾಸಾದರೂ ಅಂಕಗಳು ಕಮ್ಮಿ ಬಂದವೆಂಬ ಕಾರಣಕ್ಕಾಗಿ ಆತ್ಮಹತ್ಯೆಗೆ ಮುಂದಾಗುವ ಇಂದಿನ ಯುವ ಜನಾಂಗ ಈ 81 ವರ್ಷದ ವೃದ್ದನ ಜೀವನೋತ್ಸಾಹ ನೋಡಿ ಪಾಠ ಕಲಿಯಬೇಕಾದ ಅಗತ್ಯವಿದೆ.
ಈ ವೃದ್ದನಿಗೆ ತನ್ನವರೆಂಬವರು ಯಾರೂ ಇಲ್ಲ. ಗ್ರಾಮದ ಹನುಮಾನ್ ಗುಡಿಯಲ್ಲಿ ಮಲಗಿ ಅಲ್ಲಿಯೇ 10 ನೇ ತರಗತಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಾರೆ ಶಿವ ಚರಣ್ ಯಾದವ್.