![doctor_2170632b-460x288]()
![doctor_2170632b-460x288]()
ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ವೈದ್ಯರನ್ನು ಸಂಪೂರ್ಣವಾಗಿ ನಂಬಿ ಬರ್ತಾರೆ ರೋಗಿಗಳು. ಆದ್ರೆ ಇತ್ತೀಚೆಗೆ ವೈದ್ಯರ ಮೇಲೆ ನಂಬಿಕೆ ಇಡುವುದು ಕಷ್ಟವಾಗಿದೆ. ಚಿಕಿತ್ಸೆ ಹೆಸರಲ್ಲಿ ಮತ್ತೇನನ್ನೂ ಮಾಡುವ ವೈದ್ಯರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಇದರಿಂದಾಗಿ ವೈದ್ಯ ಲೋಕವೇ ತಲೆತಗ್ಗಿಸುವಂತಾಗಿದೆ.
ನ್ಯೂಯಾರ್ಕ್ ನ ಒಬ್ಬ ಯುವತಿಗೆ ವೈದ್ಯರ ಸಹವಾಸವೆ ಬೇಡ ಎನ್ನುವಂತಾಗಿದೆ. ಭುಜದ ಗಾಯಕ್ಕೆ ಚಿಕಿತ್ಸೆ ಪಡೆಯಲು ಜನವರಿ 11ರಂದು 22 ವರ್ಷದ ಯುವತಿ ಮೌಂಟ್ ಸಿನಾಯಿ ಆಸ್ಪತ್ರೆಗೆ ಬಂದಿದ್ದಾಳೆ. ಅಲ್ಲಿನ ವೈದ್ಯ ಡಾ ಡೇವಿಡ್ ನೇವ್ಮೆನ್ ಯುವತಿಯನ್ನು ನೋಡಿಯೇ ಆಕರ್ಷಿತನಾಗಿದ್ದಾನೆ.
ಆಕೆ ಚಿಕಿತ್ಸೆಗೆಂದು ಬಂದಾಗ ಎರಡು ಮತ್ತಿನ ಇಂಜೆಕ್ಷನ್ ನನ್ನು ಆಕೆಗೆ ಚುಚ್ಚಿದ್ದಾನೆ. ನಂತರ ಚಿಕಿತ್ಸೆ ಹೆಸರಲ್ಲಿ ಸೂಕ್ಷ್ಮ ಅಂಗಗಳನ್ನು ಮುಟ್ಟಿದ್ದಾನಂತೆ. ಈ ವೇಳೆ ಯುವತಿಗೆ ಸ್ವಲ್ಪ ಪ್ರಜ್ಞೆ ಬಂದಿದೆ. ಆದ್ರೆ ಏಳುವ ಸ್ಥಿತಿಯಲ್ಲಿರಲಿಲ್ಲವಂತೆ. ಪೂರ್ತಿ ಪ್ರಜ್ಞೆ ಬಂದ ನಂತರ ಆಕೆ ಪೊಲೀಸರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ.
ಕಾಮುಕ ವೈದ್ಯ ಇನ್ನೆಂದು ಸ್ತ್ರೀಯರಿಗೆ ಚಿಕಿತ್ಸೆ ಮಾಡಬಾರದೆಂದು ತಾಕೀತು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.