![muslim_feminism-360x220]()
![muslim_feminism-360x220]()
ಇತ್ತೀಚೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದ್ದು, ಈ ನಡುವೆ ಮುಸ್ಲಿಂ ಪುರುಷರಿಗೆ ಮುಸ್ಲಿಮೇತರ ಮಹಿಳೆಯರ ತೇಜೋವಧೆಗಾಗಿ ಅತ್ಯಾಚಾರವೆಸಗಲು ದೇವರೇ ಅನುಮತಿ ನೀಡಿದ್ದಾನೆ ಎನ್ನುವ ಮೂಲಕ ಮಹಿಳಾ ಇಸ್ಲಾಮಿಕ್ ಪ್ರೊಫೆಸರ್ ಒಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ.
ಹೌದು. ಕೈರೋದಲ್ಲಿರುವ ಪ್ರತಿಷ್ಠಿತ ಅಲ್-ಅಝಹರ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸೌದ್ ಸಲೇಹ್ ಎಂಬ ಮಹಿಳೆ ಈ ಆಘಾತಕರ ಹೇಳಿಕೆ ನೀಡಿದ್ದು, ಮುಸ್ಲಿಂ ಪುರುಷರು ತಮ್ಮ ಬಳಿ ಗುಲಾಮರಾಗಿರುವ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ತಪ್ಪಲ್ಲ. ಏಕೆಂದರೆ ದೇವರು ಅಂತಹ ಅನುಮತಿಯನ್ನು ನೀಡಿದ್ದು, ಮುಸ್ಲಿಮರು ಮತ್ತು ಇತರ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದಾಗ ಮುಸ್ಲಿಂ ಪುರುಷರು ಮುಸ್ಲಿಮೇತರ ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದು ಇಸ್ಲಾಂ ಪರವಾಗಿದೆ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಖಾಸಗಿ ಚಾನೆಲ್ ನಡೆಸಿದ ಸೌದ್ ಸಲೇಹ್ ರ ಈ ಸಂದರ್ಶನ ಇದೀಗ ವೈರಲ್ ಆಗಿದ್ದು, ಈಕೆಯ ವಿವಾದಾತ್ಮಕ ಹೇಳಿಕೆಗೆ ಸ್ವತಃ ಮುಸ್ಲಿಂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿ, ಇದೊಂದು ಇಸ್ಲಾಂ ವಿರೋಧಿ ನಿಲುವು ಎಂದು ಕಿಡಿ ಕಾರಿದ್ದಾರೆ.