![image]()
![image]()
ಸಾಮಾನ್ಯವಾಗಿ ಏನಾದರೂ ಕಳೆದುಹೋದಾಗ ಹುಡುಕಾಟ ನಡೆಸಿದರೂ, ಸಿಗದಿದ್ದಾಗ ಪೊಲೀಸರ ಮೊರೆ ಹೋಗುತ್ತಾರೆ. ಅಪರೂಪದ ವಸ್ತುಗಳು ಕಳೆದರಂತೂ ಸಿಗುವ ತನಕ ನೆಮ್ಮದಿಯೇ ಇರಲ್ಲ. ಹೀಗೆ ಅಪರೂಪದ ಟ್ರ್ಯಾಕ್ಟರ್ ವೊಂದನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋಗಿದ್ದಾನೆ.
ಲಂಡನ್ ನಲ್ಲಿ ಈ ವ್ಯಕ್ತಿಯ ದುಬಾರಿ ಬೆಲೆಯ ಟ್ರ್ಯಾಕ್ಟರ್ ಅನ್ನು ಕಳ್ಳನೊಬ್ಬ ಕದ್ದು ಬೇರೆ ಕಡೆಗೆ ಸಾಗಿಸಿದ್ದಾನೆ. ಕಳೆದುಹೋಗಿದ್ದ ದುಬಾರಿ ಬೆಲೆಯ ಟ್ರ್ಯಾಕ್ಟರ್ ಹುಡುಕಲು ಅವರು ಏನೆಲ್ಲಾ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. 30 ಲಕ್ಷ ರೂ ಬೆಲೆಯ ಕೇಸ್ ಐಹೆಚ್ ಪೂಮಾ 160 ಹೆಸರಿನ ಈ ದುಬಾರಿ ಬೆಲೆಯ ಟ್ರ್ಯಾಕ್ಟರ್ ಅನ್ನು ಇಂಗ್ಲೆಂಡ್ ನ ಸೇಂಟ್ ಲಾರೆನ್ಸ್ ಫಾರ್ಮ್ ನಿಂದ ಕಳ್ಳನೊಬ್ಬ ಅಪಹರಿಸಿದ್ದ. ಅದನ್ನು ಪಕ್ಕದ ದೇಶ ಕೇಂಬ್ರಿಡ್ಜ್ ಶೇರ್ ಎಂಬಲ್ಲಿ ಬಚ್ಚಿಟ್ಟಿದ್ದು, ಪೊಲೀಸರು ಎಷ್ಟೆಲ್ಲಾ ಹುಡುಕಾಟ ನಡೆಸಿದರೂ ಟ್ರ್ಯಾಕ್ಟರ್ ಸಿಗಲೇ ಇಲ್ಲ.
ಕೊನೆಗೆ ಈ ಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಸಲಾಗಿದೆ. ಹೌದು, ಇಂಗ್ಲೆಂಡ್ ಮತ್ತು ಪಕ್ಕದ ದೇಶ ಕೇಂಬ್ರಿಡ್ಜ್ ಶೇರ್ ನ ವಿಸ್ಬೇಕ್ ನಗರದಲ್ಲಿ ಹೆಲಿಕಾಪ್ಟರ್ ಬಳಿಸಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಟ್ರ್ಯಾಕ್ಟರ್ ಪತ್ತೆಯಾಗಿದೆ. ಆದರೆ ಅದು ಬಳಕೆಗೆ ಬಾರದಂತೆ ಹಾಳಾದ ರೀತಿಯಲ್ಲಿದ್ದು, ರಿಪೇರಿಗೆ ಲಕ್ಷಾಂತರ ರೂ. ಹಣ ವ್ಯಯ ಮಾಡಬೇಕಿದೆ. ಕಳ್ಳನನ್ನು ಬಂಧಿಸಲಾಗಿದೆಯಾದರೂ ಅದಕ್ಕಿಂತ ಹೆಚ್ಚು ಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಸಿದ್ದು, ಸುದ್ದಿಯಾಗಿದೆ.