![17mn_UDGVPHI-W1_18_2700383e]()
![17mn_UDGVPHI-W1_18_2700383e]()
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪಾಕ್ ಕುರಿತಾಗಿ ಮೃದು ಧೋರಣೆ ತಾಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಬಿಜೆಪಿ ಭೀಷ್ಮ ಎಲ್.ಕೆ. ಆಡ್ವಾಣಿ, ನನಗೆ ಕರಾಚಿ ಎಂದರೆ ಅಚ್ಚುಮೆಚ್ಚು ಎನ್ನುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಹೌದು. ಪೇಜಾವರ ಶ್ರೀಗಳ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಸಂಜೆ ಉಡುಪಿಗೆ ಆಗಮಿಸಿದ್ದ ಸಮಯದಲ್ಲಿ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಡ್ವಾಣಿ, ಬಿಜೆಪಿ ದಕ್ಷಿಣ ಭಾರತದ ಯಾವುದೇ ಜಿಲ್ಲೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದ ಕಾಲದಲ್ಲಿ ಉಡುಪಿ ನಗರಸಭೆಯಲ್ಲಿ ಅಧಿಕಾರಕ್ಕೇರಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸ್ಥಾನ ಕಲ್ಪಿಸಿಕೊಟ್ಟಿತ್ತು. ಈ ಕಾರಣದಿಂದಲೂ ತಮಗೆ ಉಡುಪಿ ಎಂದರೆ ಹೆಮ್ಮೆ ಎಂದರಲ್ಲದೇ ನಾನು ಹುಟ್ಟಿದ ಕರಾಚಿ ಬಿಟ್ಟರೆ ನನಗೆ ಕರ್ನಾಟಕವೇ ಅಚ್ಚುಮೆಚ್ಚು. ಅದರಲ್ಲೂ ಉಡುಪಿ ನಗರವೆಂದರೆ ಮತ್ತಷ್ಟು ಇಷ್ಟ ಎಂದು ಭಾವುಕರಾಗಿ ನುಡಿದರು.
ಅಲ್ಲದೇ ಪೇಜಾವರ ಶ್ರೀಗಳು, ಜನಸಂಘದ ಕಾಲದಿಂದಲೂ ನನಗೆ ಮತ್ತು ಅನೇಕ ರಾಜಕೀಯ ನಾಯಕರಿಗೆ ಮಾರ್ಗದರ್ಶಕರಾಗಿದ್ದರು. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಶ್ರೀಗಳು ಧೈರ್ಯ ತುಂಬಿದ್ದರು ಎಂದು ಸ್ಮರಿಸಿದ ಅಡ್ವಾಣಿ, ಅವರ ಪರ್ಯಾಯೋತ್ಸವದಲ್ಲಿ ಭಾಗವಹಿಸುವುದೇ ಒಂದು ಭಾಗ್ಯ ಎಂದು ತಿಳಿಸಿದ್ದಾರೆ.