![c9ee9eb7-0280-4470-ab54-b11679cc5195_gallery_image_200_200]()
![c9ee9eb7-0280-4470-ab54-b11679cc5195_gallery_image_200_200]()
ಶಿವರಾಜ್ ಕುಮಾರ್ ಅಭಿನಯದ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ತೆಲುಗಿನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ನಡುವೆ ಬಿಡುಗಡೆ ಹೊಸ್ತಿಲಿನಲ್ಲಿರುವ ‘ಶಿವಲಿಂಗ’ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಹೌದು. ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್‌ನಲ್ಲಿಯೇ ಹೆಚ್ಚು ಆದಾಯ ಗಿಟ್ಟಿಸಿರುವ ‘ಕಿಲ್ಲಿಂಗ್ ವೀರಪ್ಪನ್’ ಪ್ರಭಾವ ಶಿವಣ್ಣ ಅವರ ಮುಂದಿನ ಸಿನಿಮಾಗಳ ಮೇಲೂ ಆಗಲಿದೆ ಎನ್ನಲಾಗುತ್ತಿದ್ದು, ಇದಕ್ಕೆ ಪೂರಕವೆಂಬಂತೆ ‘ಶಿವಲಿಂಗ’ ಚಿತ್ರದ ಡಬ್ಬಿಂಗ್ ಹಕ್ಕು ಪಡೆಯಲು ನಿರ್ಮಾಪಕರು ಮುಗಿಬಿದ್ದಿದ್ದಾರೆ.
ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶಿವಣ್ಣ ಅವರ ‘ಶಿವಲಿಂಗ’ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡಿದ್ದು, ವೇದಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿರುವ ಶಿವಣ್ಣ, ಅವರ ಈ ಚಿತ್ರ ಬಿಡುಗಡೆಯ ಮುನ್ನವೇ ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಬೇಡಿಕೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.