Quantcast
Channel: Kannada Dunia | Kannada News | Karnataka News | India News
Viewing all 122063 articles
Browse latest View live

ಹಾವು ಕಚ್ಚಿದ್ರೆ ಮೊದಲೇನು ಮಾಡಬೇಕು ಗೊತ್ತಾ…?

$
0
0
03_09_2016-03snakebite (2)

ಮೊದಲನೇಯದಾಗಿ ದೇಶದಲ್ಲಿ 550 ಜಾತಿಯ ಹಾವುಗಳಿವೆ. ನಾಗರಹಾವು, ಹೆಬ್ಬಾವು, ಕಾಳಿಂಗ ಸರ್ಪ ಹೀಗೆ 550 ಜಾತಿಯ ಹಾವುಗಳಿವೆ. ಹೆದರಬೇಕಾಗಿಲ್ಲ. ಈ ಎಲ್ಲ ಹಾವುಗಳಿಗೂ ವಿಷವಿಲ್ಲ. ಕೇವಲ 10 ಜಾತಿಯ ಹಾವು ಕಚ್ಚಿದ್ರೆ ಮಾತ್ರ ವಿಷವೇರುತ್ತೆ. ಹಾಗಾಗಿ 540 ಹಾವುಗಳು ಕಚ್ಚಿದ್ರೆ ಭಯಗೊಳ್ಳಬೇಕಾಗಿಲ್ಲ.

ಆದ್ರೆ ಹಾವನ್ನು ಕಂಡ್ರೆ ಜನ ಭಯಗೊಳ್ತಾರೆ. ಹಾವು ಕಚ್ಚಿ, ವಿಷವೇರಿ ಸಾಯುವವರಿಗಿಂತ ಹೃದಯಾಘಾತದಿಂದ ಸಾವನ್ನಪ್ಪುವವರೇ ಹೆಚ್ಚು. ಮೊದಲು ಹಾವಿನ ಭಯ ಬಿಡಬೇಕು. ಕಚ್ಚಿದ ತಕ್ಷಣ ಹಾವು ಯಾವುದು ಅಂತಾ ನೋಡಿಕೊಳ್ಳಿ. ಹಾವಿನ ಜಾತಿಯ ಬಗ್ಗೆ ತಿಳಿದಿಲ್ಲವಾದ್ರೆ ಚಿಂತೆಯಿಲ್ಲ. ಹಾವಿನ ವಿಷ ಇಡೀ ದೇಹವನ್ನು ಪಸರಿಸಲು 3 ಗಂಟೆ ಬೇಕು.

ಕೆಲವೊಂದು ವಿಷಕಾರಿ ಹಾವುಗಳು ಕಚ್ಚಿದ್ರೆ ಶೇಕಡಾ 99 ರಷ್ಟು ಬದುಕುಳಿಯುವುದು ಕಷ್ಟ. ಹಾಗಂತ ಬದುಕೋದೆ ಇಲ್ಲ ಎಂದಲ್ಲ. ಹಾವು ಕಚ್ಚಿದ ಜಾಗಕ್ಕಿಂತ ಸ್ವಲ್ಪ ಮೇಲೆ ವಿಷವೇರದಂತೆ ಬಿಗಿಯಾದ ಪಟ್ಟಿ ಕಟ್ಟುವುದು ಬಹಳ ಅವಶ್ಯಕ. ಹಾವು ಕಾಲಿಗೆ ಕಚ್ಚಿದ್ರೆ ಅದು ರಕ್ತದ ಮೂಲಕ ಮೊದಲು ಹೃದಯಕ್ಕೆ ಹೋಗಿ ನಂತ್ರ ಇಡೀ ದೇಹಕ್ಕೆ ಪಸರಿಸುತ್ತದೆ. ಹಾಗೆ ಕೈಗೆ ಕಚ್ಚಿದ್ರೂ ಮೊದಲು ಹೃದಯಕ್ಕೆ ಹೋಗಿ ನಂತ್ರ ಇಡೀ ದೇಹಕ್ಕೆ ಹರಡುತ್ತದೆ. ಹಾಗಾಗಿ ವಿಷ ಕಚ್ಚಿದ ತಕ್ಷಣ ವಿಷ ಮೇಲೇರದಂತೆ ಪಟ್ಟಿ ಕಟ್ಟಿ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.


ಪ್ರಧಾನಿಯಾಗಿದ್ದರೂ ಮಹಿಳೆಯ ಕಾಲಿಗೆರಗಿದ್ದರು ವಾಜಪೇಯಿ

$
0
0

ಅಟಲ್ ಬಿಹಾರಿ ವಾಜಪೇಯಿ ‘ದೇಶ ಮೊದಲು ಪಕ್ಷ ನಂತರ’ ಅಂತ ಕೇವಲ ಬಾಯಿ ಮಾತಿಗೆ ಹೇಳಿದವರಲ್ಲ. ಜಾತಿ, ಮತದ ಆಧಾರದಲ್ಲಿ ರಾಜಕೀಯ ಮಾಡಬೇಡಿ ಅಂತ ಕೇವಲ ತೋರಿಕೆಗೆ ಹೇಳಿದವರಲ್ಲ. ಅದನ್ನು ಅವರು ತಮ್ಮ ಆಡಳಿತದ ಭಾಗವಾಗಿಸಿಕೊಂಡಿದ್ದರು. ಪ್ರಧಾನಿಯಾಗಿದ್ದರೂ ಅವರು ಕೆಲವು ವಿಚಾರಗಳಲ್ಲಿ ಆ ಶಿಷ್ಟಾಚಾರವನ್ನೆಲ್ಲಾ ಬದಿಗಿಟ್ಟುಬಿಡ್ತಿದ್ದರು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

2001ರಲ್ಲಿ ತಮಿಳುನಾಡಿನ ಮಧುರೈ ಮೂಲದ ಮಹಿಳೆಯೊಬ್ಬರು ದೆಹಲಿಗೆ ಪ್ರಶಸ್ತಿ ತೆಗೆದುಕೊಳ್ಳೋದಕ್ಕೆ ಹೋಗಿದ್ದರು. ಆಕೆಯ ಹೆಸರು ಪಿ. ಚಿನ್ನಪಿಳ್ಳೈ. ದೆಹಲಿಯಲ್ಲಿ ಪ್ರಧಾನಿ ವಾಜಪೇಯಿಯವರಿಂದ ಅವರಿಗೆ ಪ್ರಶಸ್ತಿ ಪ್ರದಾನವೂ ಆಯ್ತು. ಚಿನ್ನಪಿಳ್ಳೈ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ ವಾಜಪೇಯಿ ಚಿನ್ನಪಿಳ್ಳೈ ಅವರ ಕಾಲು ಮುಟ್ಟಿ ನಮಸ್ಕರಿಸಿದ್ರು. ಕಾಲಿಗೆ ನಮಸ್ಕರಿಸಿದ ವಾಜಪೇಯಿ, ನಿಮ್ಮಲ್ಲಿ ನನಗೆ ಕೇವಲ ಒಬ್ಬ ಮಹಿಳೆಯಷ್ಟೇ ಕಾಣಿಸುತ್ತಿಲ್ಲ. ದೇವರೇ ಕಾಣಿಸುತ್ತಿದ್ದಾರೆ ಅಂತ ಚಿನ್ನಪಿಳ್ಳೈ ಅವರ ಕೆಲಸವನ್ನು ಹೊಗಳಿದ್ದರಂತೆ.

ಚಿನ್ನಪಿಳ್ಳೈ ಅನಕ್ಷರಸ್ಥ ಮಹಿಳೆಯಾಗಿದ್ದರೂ 60 ಸಾವಿರ ಮಹಿಳೆಯರಿಗೆ ಧನ್ ಫೌಂಡೇಷನ್ ಎನ್ಜಿಓ ಮೂಲಕ ಸ್ವಾವಲಂಬಿಗಳಾಗೋದಕ್ಕೆ ಕಾರಣರಾಗಿದ್ದರು. ಅವರನ್ನ ಕೇಂದ್ರ ಸರ್ಕಾರದ ಸ್ತ್ರೀ ಶಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಹಾಗಾಗಿಯೇ ವಾಜಪೇಯಿಯವರು ಚಿನ್ನಪಿಳ್ಳೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಕೇಂದ್ರ, ಚಿನ್ನಪಿಳ್ಳೈ ಅವರ ಸಾಧನೆ ಗುರುತಿಸಿದ ಆನಂತರದಲ್ಲಿ ತಮಿಳುನಾಡಿನಲ್ಲಿ ಕರುಣಾನಿಧಿ ಸರ್ಕಾರ ಕೂಡ ಚಿನ್ನಪಿಳ್ಲೈ ಅವರನ್ನ ಕರೆದು ಗೌರವಿಸಿದೆ. ನಂತರದಲ್ಲಿ ಚಿನ್ನಪಿಳ್ಳೈ ಅವರಿಗೆ ತಮಿಳುನಾಡಿನಲ್ಲಿ ಜನಪ್ರಿಯತೆ ಸಿಕ್ಕಿದೆ.

ವಾಜಪೇಯಿಯವರ ನಿಧನದ ವಾರ್ತೆ ತಿಳಿದ ಚಿನ್ನಪಿಳ್ಳೈ, ನನಗೆ ತಂದೆಯನ್ನು ಕಳೆದುಕೊಂಡಷ್ಟೇ ನೋವಾಗಿದೆ. ಅವರ ಆರೋಗ್ಯ ಸುಧಾರಿಸಲಿ ಅಂತ ನಿತ್ಯ ಪ್ರಾರ್ಥನೆ ಮಾಡುತ್ತಿದ್ದೆ. ಅವರು ಇನ್ನಿಲ್ಲ ಅನ್ನೋ ಸುದ್ದಿ ಕೇಳಿದೆ ನನಗೆ ತುಂಬಾನೇ ನೋವಾಗಿದೆ ಅಂತ ಪ್ರತಿಕ್ರಿಯಿಸಿದ್ದಾರೆ.

ವಾಜಪೇಯಿ, ಶಾರುಕ್, ಜಗ್ಜೀತ್, ಅಮಿತಾಬ್ ಸೇರಿದ ‘ಸಂವೇದನ್’

$
0
0

ಭಾರತವನ್ನ ಅಗಲಿದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಉತ್ತಮ ಕವಿಯಾಗಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಕವಿ ಹೃದಯ, ಸಂವೇದನಾಶೀಲ ಬರಹದಿಂದ ಬಂದ ಪದಗಳು ಅನೇಕರನ್ನ ಕಾಡಿದ್ದೂ ಇದೆ. ಅಟಲ್ ಅವರ ಚಿಂತನಾ ಲಹರಿಯಿಂದ ಬಂದಂತಾ ಕವಿತೆಯೊಂದು ಬಾಲಿವುಡ್ ನ್ನ ಕೂಡ ಬೆರಗುಗೊಳಿಸಿತ್ತು.

ಹೌದು….ಅಟಲ್ ಅವರ ಕವಿತೆಯೊಂದು ಬಾಲಿವುಡ್ನ ಗೀತೆಯಾಗಿ ಹೊರಹೊಮ್ಮಿತ್ತು ಅನ್ನೋ ವಿಚಾರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ವಿಶೇಷ ಏನಂದ್ರೆ ವಾಜಪೇಯಿಯವರ ಸಾಹಿತ್ಯವಿದ್ದ ಆ ಕವಿತೆಯಲ್ಲಿ ನಟಿಸಿದ್ದು ಬಾಲಿವುಡ್ನ ಕಿಂಗ್ ಖಾನ್ ಶಾರುಕ್.

ವಾಜಪೇಯಿಯವರು ಬರೆದಿದ್ದ ಕ್ಯಾ ಖೋಯಾ ಕ್ಯಾ ಪಾಯಾ ಕವಿತೆಯನ್ನು ಘಜಲ್ ಆಗಿ ಪರಿವರ್ತಿಸಿ ಅದನ್ನ ಹಾಡಿನ ರೂಪದಲ್ಲಿ ಹೊರತಂದಿದ್ದರು ಬಾಲಿವುಡ್ನ ಖ್ಯಾತ ಗಾಯಕ ಜಗ್ಜೀತ್ ಸಿಂಗ್. ಆ ಹಾಡನ್ನ ಜಗ್ಜೀತ್ ಸಿಂಗ್ ಕಂಪೋಸ್ ಮಾಡಿ ಹಾಡಿದ್ದರೆ ಶಾರುಕ್ ನಟಿಸಿದ್ದರು.

ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡಿನ ಆರಂಭದಲ್ಲಿ ಬರುವ ನರೇಶನ್ ಪಾರ್ಟ್ ಗೆ ಧ್ವನಿ ನೀಡಿದ್ದರು. ಸಂವೇದನ್ ಅನ್ನೋ ಹೆಸರಿನಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಯಶ್ ಛೋಪ್ರಾ ಈ ಹಾಡನ್ನ ನಿರ್ದೇಶನ ಮಾಡಿದ್ದರು. ಈಗ ಈ ಹಾಡು ಮತ್ತೆ ಮತ್ತೆ ಕೇಳುಗರನ್ನ ನೋಡುಗರನ್ನ ಕಾಡುತ್ತಿದೆ.

ಮಳೆ ಹೊಡೆತಕ್ಕೆ ಕೊಚ್ಚಿ ಹೋಗ್ತಿದೆ ‘ಕೊಚ್ಚಿ’ ಏರ್ಪೋರ್ಟ್

$
0
0

ಕೇರಳದಲ್ಲಿ ವರುಣನ ಉಗ್ರ ನರ್ತನ ಇನ್ನೂ ಮುಂದುವರೆದಿದೆ. ಮಳೆ ಪ್ರಮಾಣ ಕಡಿಮೆಯಾಗದ ಪರಿಣಾಮ ಈಗ ಕೊಚ್ಚಿ ವಿಮಾನ ನಿಲ್ದಾಣ ಕೂಡ ಜಲಾವೃತವಾಗಿಬಿಟ್ಟಿದೆ. ಅದಕ್ಕಾಗಿಯೇ ಕೇರಳ ಸರ್ಕಾರ ಈಗ ಮಹತ್ವದ ನಿರ್ಧಾರವೊಂದನ್ನ ಪ್ರಕಟಿಸಿದೆ.

ಆಗಸ್ಟ್ 26ರವರೆಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲಾ ಚಟುವಟಿಕೆಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 26ರ ಮಧ್ಯಾಹ್ನ 2 ಗಂಟೆಯವರೆಗೂ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ವೈಮಾನಿಕ ಸೌಲಭ್ಯಗಳು ಇರೋದಿಲ್ಲ.

ರನ್ವೇ, ಟ್ಯಾಕ್ಸಿ ವೇ ಗಳಲ್ಲಿ ನೀರು ನಿಂತ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಅತ್ಯಂತ ಬ್ಯುಸಿ ಏರ್ಪೋರ್ಟ್ಗಳಲ್ಲಿ ಒಂದಾಗಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಕ್ಕೆ 1460 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಈಗ ತಾತ್ಕಾಲಿಕವಾಗಿ ವಿಮಾನ ನಿಲ್ದಾಣದ ಕಾರ್ಯಗಳಿಗೆ ತಡೆಯುಂಟಾಗಿದೆ.

ಶಾಕಿಂಗ್ ನ್ಯೂಸ್: ಶೀಘ್ರದಲ್ಲೇ ತಟ್ಟಲಿದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಿಸಿ

$
0
0

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿಯುತ್ತಿರುವ ಪರಿಣಾಮ, ಶೀಘ್ರದಲ್ಲೇ ಸಾರ್ವಜನಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಂಡಿದ್ದರೂ ತೈಲ ಆಮದಿಗೆ ಮಾಡುವ ವೆಚ್ಚ ಏರಿಕೆಯಾಗುವ ಪರಿಣಾಮ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.

ಆಗಸ್ಟ್ 5 ರಿಂದ ಆಗಸ್ಟ್ 12ರ ವರೆಗಿನ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆಯಷ್ಟು ಹೆಚ್ಚಳವಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರಿಗೆ 46 ಪೈಸೆ ಹೆಚ್ಚಳವಾಗಿದೆ.

ರೂಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಳ್ಳದೆ ವಿನಿಮಯ ದರದಲ್ಲಿ ಇದೇ ರೀತಿ ಇಳಿಕೆಯಾದರೆ ಪೆಟ್ರೋಲ್ ಬೆಲೆ 90 ರೂಪಾಯಿ ಹಾಗೂ ಡೀಸೆಲ್ ಬೆಲೆ 80 ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ನೋಟೀಸ್

$
0
0

ಡಿಎಂಕೆ ನಾಯಕ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದ ವೇಳೆ ನಡೆದಿದ್ದ ಭದ್ರತಾ ಲೋಪ ಈಗ ಬಯಲಾಗಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ನಿನ್ನೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.

ಎ.ಪಿ. ಸೂರ್ಯಪ್ರಕಾಶಂ ಎಂಬ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ, ವಿಭಾಗೀಯ ಪೀಠ ಈ ಕುರಿತು ನೋಟೀಸ್ ಹೊರಡಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 14ಕ್ಕೆ ಮುಂದೂಡಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ರಾಜಾಜಿ ಹಾಲ್ ಬಳಿ ಕರುಣಾನಿಧಿ ಅಭಿಮಾನಿಗಳು ಜಮಾಯಿಸಿದ್ರು. ಈ ವೇಳೆ ಭದ್ರತಾ ಲೋಪವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಆಗಸ್ಟ್ 8 ರಂದು ರಾಹುಲ್ ಗಾಂಧಿ, ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ರಾಜಾಜಿ ಹಾಲ್ ಗೆ ಬಂದಿದ್ರು. ಆಗ ರಾಜಾಜಿ ಹಾಲ್ ನಲ್ಲಿ ಅಪಾರ ಪ್ರಮಾಣದ ಜನ ಸೇರಿ, ನೂಕುನುಗ್ಗಲು ಆಯಿತು. ಇದರ ಮಧ್ಯೆಯೇ ರಾಹುಲ್ ಗಾಂಧಿ ತಳ್ಳಿಕೊಂಡು ಬಂದಿದ್ದಾರೆ. ಈ ಪ್ರಕರಣದಲ್ಲಿ ಭದ್ರತಾ ಲೋಪ ಎದ್ದು ಕಾಣುತ್ತಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಇನ್ನು ಪೊಲೀಸ್ ಭದ್ರತಾ ಲೋಪದಿಂದ ರಾಜಾಜಿ ಹಾಲ್ ಬಳಿ ಕಾಲ್ತುಳಿತ ನಡೆಯಿತು. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ನಟನ ಮತ್ತೊಂದು ಮುಖವನ್ನು ತೆರೆದಿಟ್ಟಿದೆ ಈ ವಿಡಿಯೋ

$
0
0

ಬಾಲಿವುಡ್ ನಲ್ಲಿ ವಿಭಿನ್ನ ಸಿನಿಮಾ ಮತ್ತು ಪಾತ್ರಗಳಿಂದಾನೇ ಗುರುತಿಸಿಕೊಳ್ತಿರೋ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ‘ಗೋಲ್ಡ್’ ತೆರೆಗೆ ಬರೋದಕ್ಕೆ ಸಿದ್ಧತೆ ನಡೆಸಿದೆ. ಸ್ಪೋರ್ಟ್ಸ್ ಸಬ್ಜೆಕ್ ಸಿನಿಮಾ ಆಗಿರುವ ಗೋಲ್ಡ್ ತೆರೆಯ ಹಿಂದೆ ಅಕ್ಕಿ ಹೇಗಿದ್ದರು ಅನ್ನೋದನ್ನ ತೋರಿಸುವ ವಿಡಿಯೋವನ್ನ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

3 ನಿಮಿಷ 25 ಸೆಕೆಂಡುಗಳ ವಿಡಿಯೋದಲ್ಲಿ ಗೋಲ್ಡ್ ನ ಸೆಟ್ ನಲ್ಲಿ ಅಕ್ಕಿ ಹೇಗೆ ಎಲ್ಲಾ ಕ್ರೀಡೆಗಳಲ್ಲೂ ಗೋಲ್ಡ್ ಮೆಡಲಿಸ್ಟ್ ಆಗಿದ್ದರು ಅನ್ನೋದನ್ನ ತೋರಿಸಲಾಗಿದೆ. ಚಿತ್ರತಂಡ, ದೇಸೀ ಕ್ರೀಡೆಗಳಾದ ಲಗೋರಿಯಿಂದ ಹಿಡಿದು ಕ್ರಿಕೆಟ್, ಫುಟ್ ಬಾಲ್ ಆರ್ಮ್ ರೆಸ್ಲಿಂಗ್ ನಂತಾ ನಾನಾ ಆಟಗಳ ಕ್ರೀಡಾಕೂಟವನ್ನೇ ನಡೆಸಿಬಿಟ್ಟಿದೆ.

ಇಡೀ ಚಿತ್ರತಂಡದ ಬಾಂಧವ್ಯ ವೃದ್ಧಿಗಾಗಿ ಅಕ್ಷಯ್ ತೆರೆಯ ಹಿಂದೆ ಹೀಗೊಂದು ಕ್ರೀಡಾಕೂಟವನ್ನು ಆಯೋಜಿಸಿದ್ದರಂತೆ. ಚಿತ್ರದ ಮುಹೂರ್ತದಿಂದ ಹಿಡಿದು ಕುಂಬಳಕಾಯಿ ಒಡೆಯುವವರೆಗೆ ನಡೆದಿರುವ ಈ ಆಟದ ಮೋಜುಮಸ್ತಿಯ ವಿಡಿಯೋ ತುಂಬಾನೇ ಫನ್ನಿಯಾಗಿದೆ.

ಕಾಲೇಜು ಬಿಟ್ಟರೂ ತನ್ನ ಪರಿಶ್ರಮದಿಂದಲೇ ಕೋಟ್ಯಾಧೀಶನಾದ ಈ ಯುವಕ

$
0
0

ಕಾಲೇಜು ಬಿಟ್ಟ ಯುವಕ ಕೋಟ್ಯಾಧೀಶ….ತನ್ನ ಪರಿಶ್ರಮದಿಂದಲೇ ಈ ಮಟ್ಟ ತಲುಪಿದ್ದಾನೆ ಈತ. ಓಯೋ ರೂಮ್ಸ್ ನ ಸಿ.ಇ.ಒ. ರಿತೇಶ್ ಅಗರ್ ವಾಲ್ ನಡೆದು ಬಂದ ದಾರಿ ಬೇರೆ ಯುವಕರಿಗೆ ಮಾದರಿ. ಒಡಿಶಾದ ಮಧ್ಯಮ ವರ್ಗದ ರಿತೇಶ್, ಸದ್ಯ ಕೋಟ್ಯಾಧೀಶ. ಅಲ್ಲದೆ ಭಾರತದಲ್ಲಿ ಅತಿ ದೊಡ್ಡ ಹೊಟೇಲ್ ಉದ್ಯಮಿ.

17ನೇ ವಯಸ್ಸಿನಲ್ಲೇ ರಿತೇಶ್ ಕಾಲೇಜಿಗೆ ಗುಡ್ ಬೈ ಹೇಳಿ ತಮ್ಮ ಕನಸಿನ ಬೆನ್ನು ಹತ್ತಿದ್ರು. ಅಂದ ಹಾಗೆ ಕನಸು ಸಣ್ಣದಾಗಿರಲಿಲ್ಲ. ಶ್ರೇಷ್ಠ ಹಾಗೂ ಗುಣಮಟ್ಟದ ರೂಮ್ ಗಳನ್ನು ಗ್ರಾಹಕರಿಗೆ ನೀಡುವ ಇರಾದೆ ರಿತೇಶ್ ರದ್ದಾಗಿತ್ತು. ಈ ಕನಸು ಸುಲಭವಾಗಿ ಕೈ ಸಿಗೋದಿಲ್ಲ ಎಂಬ ಕಲ್ಪನೆ ಅವರಲ್ಲಿತ್ತು. ಹೀಗಾಗಿ ರಿತೇಶ್ ಕೈ ಕಟ್ಟಿ ಕುಳಿತು ಕೊಳ್ಳದೆ ಸಿಮ್ ಕಾರ್ಡ್ ಗಳನ್ನು ಮಾರಿ ಜೀವನ ಸಾಗಿಸಿದ್ರು.

ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದಾಗ ರಿತೇಶ್ ರ ಇಷ್ಟದ ಚಾನೆಲ್ ನೋಡಲು ಆಗುತ್ತಿರಲಿಲ್ಲ. ರಿಮೋಟ್ ಬೇರೆಯವರ ಕೈಯಲ್ಲಿ ಇತ್ತು. ಇದರ ಪ್ರೇರಣೆಯಿಂದ ರಿತೇಶ್ ಹೋಟೆಲ್ ರೂಮ್ ಬುಕ್ ಮಾಡುವ ‘ಓಯೋ ರೂಮ್’ ನಲ್ಲಿ ರಿಮೋಟ್ ನಿಮ್ಮದೇ, ನಿಮ್ಮದೇ ಆಯ್ಕೆಗಳು ಎಂದು ಆರಂಭಿಸಿದ್ರು. ಇಲ್ಲಿ ನಿಮಗೆ ಇಷ್ಟದ ಹೊಟೇಲ್ ಗಳು ಹಾಗೂ ನಿಮ್ಮ ಅಗತ್ಯಕ್ಕೆ ತಕ್ಕ ಹೊಟೇಲ್ ಗಳು ಲಭ್ಯ.

ರಿತೇಶ್ ತಮ್ಮ ಕನಸಿನ ಕಂಪನಿಗೆ ಜೀವ ತುಂಬಲ ಹಣ ಸಾಲ ಪಡೆಯಲು ಮುಂದಾದ್ರು. ಆಗ ರಿತೇಶ್ ರ ಶಕ್ತಿಯನ್ನು ಗುರುತಿಸಿದ ಫೈನಾನ್ಸ್ ಕಂಪನಿ 30 ಲಕ್ಷ ಸಾಲ ನೀಡಿತು. ಗ್ರಾಹಕರಿಗೆ ಬೇಕಾದ ಸಕಲ ಸೌಲಭ್ಯಗಳನ್ನು ನೀಡಲು ರಿತೇಶ್ ಮುಂದಾದ್ರು. ಪರಿಣಾಮ ಇಂದು ಓಯೋ ಕಂಪನಿ ಹೆಮ್ಮರವಾಗಿ ಬೆಳೆದಿದೆ. ಸದ್ಯ ಈ ಕಂಪನಿ 160 ನಗರಗಳಲ್ಲಿ ತನ್ನ ಸೇವೆ ನೀಡುತ್ತಿದೆ.

ಸದ್ಯ ಓಯೋ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ಪರಿಣಾಮ ಈ ಸೇವೆ ಇದೀಗ ಮಲೇಷ್ಯಾ, ಚೀನಾ, ಇಂಡೋನೇಷ್ಯಾ, ನೇಪಾಳ, ದುಬೈ ಹಾಗೂ ಲಂಡನ್ ಗೂ ವಿಸ್ತರಣೆಯಾಗಿದೆ.


ಮಾಲೀಕಳ ಜೀವ ಉಳಿಸಲು ಆಂಬುಲೆನ್ಸ್ ವರೆಗೆ ಬಂದಿತ್ತು ನಾಯಿ

$
0
0

ನಾಯಿ ಪ್ರಾಮಾಣಿಕತೆ ಬಗ್ಗೆ ಆಗಾಗ ಚರ್ಚೆಯಾಗ್ತಿರುತ್ತದೆ. ಕೆಲವೊಮ್ಮೆ ನಾಯಿ ಮಾಲೀಕನ ಜೀವ ಉಳಿಸಿದ್ದುಂಟು. ಮಾಲೀಕನ ಪ್ರಾಣ ಉಳಿಸಲು ಅನೇಕ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಬಲಿ ನೀಡಿದ್ದಿದೆ. ಈಗ ನಾಯಿ ನಿಷ್ಠೆಯ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ವಿಡಿಯೋ ಚೀನಾದ ಹೀಲೋಂಗ್ಜಿಯಾಂಗ್ ನದ್ದು. ನಾಯಿ ಮಾಲೀಕಳಿಗಾಗಿ ಆ್ಯಂಬುಲೆನ್ಸ್ ವರೆಗೆ ಬರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೀಪಲ್ಸ್ ಡೈಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ನಾಯಿ ಮಾಲೀಕಳು ಮೆಟ್ಟಿಲಿನಿಂದ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಳು. ನಾಯಿ, ವೈದ್ಯರು ಬರುವವರೆಗೂ ಅಲ್ಲಿಯೇ ಸುತ್ತಾಡುತ್ತಿತ್ತು. ತುಂಬಾ ಆತಂಕದಲ್ಲಿದ್ದ ನಾಯಿ ನೋಡಿ ನರ್ಸ್ ಆರಂಭದಲ್ಲಿ ಭಯಗೊಂಡಿದ್ದಳಂತೆ. ನಂತ್ರ ನಾಯಿ ಕಷ್ಟ ಗೊತ್ತಾಯ್ತಂತೆ.

ಮಾಲೀಕಳಿಗೆ ಪ್ರಜ್ಞೆ ಬರಿಸುವುದು ಮಾತ್ರ ನಾಯಿ ಉದ್ದೇಶವಾಗಿತ್ತಂತೆ. ಅದಕ್ಕೆ ನಾಯಿ ಚಡಪಡಿಸುತ್ತಿತ್ತಂತೆ. ಆ್ಯಂಬುಲೆನ್ಸ್ ಹಿಂದೆಯೇ ಬರಲು ನಾಯಿ ಮುಂದಾಗಿದೆ. ನಾಯಿಯನ್ನು ಆ್ಯಂಬುಲೆನ್ಸ್ ನಲ್ಲಿ ಹತ್ತಿಸಿಕೊಳ್ಳುವಂತಿಲ್ಲ. ಆದ್ರೆ ಮಾಲೀಕಳ ಆರೋಗ್ಯ ಸುಧಾರಣೆಗೆ ನಾಯಿ ನೆರವಾಗುತ್ತೆ ಎನ್ನುವ ಕಾರಣಕ್ಕೆ ಆ್ಯಂಬುಲೆನ್ಸ್ ನಲ್ಲಿ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಂತೆ. ಮಹಿಳೆಗೆ ಪ್ರಜ್ಞೆ ಬರ್ತಿದ್ದಂತೆ ಆಕೆ ಮೊದಲು ನಾಯಿಯನ್ನು ಅಪ್ಪಿಕೊಂಡಿದ್ದಳಂತೆ.

ಟೆಸ್ಟ್ ಡ್ರೈವ್ ಮಾಡಲು ಹೋಗಿ ಸುದ್ದಿಯಾದ್ಲು ಯುವತಿ…!

$
0
0

ಹೊಸ ಕಾರ್ ನೀವು ತೆಗೆದುಕೊಳ್ಳುವ ಇರಾದೆ ಇದ್ರೆ, ಮೊದಲು ಹಲವು ಕಾರ್ ಗಳನ್ನು ಕಂಪೇರ್ ಮಾಡ್ತೀರಾ. ನಂತರ ನಿಮಗೆ ಇಷ್ಟದ ಕಂಪನಿಯ ಕಾರ್ ಕೊಂಡುಕೊಳ್ಳಲು ಮುಂದಾಗ್ತೀರಾ. ಆಗ ಕಾರ್ ಕಂಪನಿಯವರು ನಿಮಗೆ ಟೆಸ್ಟ್ ಡ್ರೈವ್ ಮಾಡಲು ನೀಡ್ತಾರೆ. ಸಿಕ್ಕ ಕೊಂಚ ಅವಕಾಶದಲ್ಲಿ ವಾಹನದ ಮಾಹಿತಿಯನ್ನು ಪಡೆದು ಒಂದು ನಿರ್ಣಯಕ್ಕೆ ಬರ್ತಿರಾ. ಇದೆಲ್ಲಾ ಕಾಮನ್. ಆದ್ರೆ, ಇಲ್ಲೊಬ್ಬ ಯುವತಿ ಟೆಸ್ಟ್ ಡ್ರೈವ್ ಮಾಡಿ ಸುದ್ದಿಯಾಗಿದ್ದಾಳೆ.

ಹೌದು….ಚೀನಾದ ಗುವಾಂಗ್ಝೌ ನಲ್ಲಿ ಯುವತಿಯೊಬ್ಬಳು ತನ್ನ ಇಷ್ಟದ ಕಾರ್ ಖರೀದಿಸಲು ಶೋ ರೂಮ್ ಗೆ ಬಂದಿದ್ಲು. ಆಗ ಅವಳು ಟೆಸ್ಟ್ ಡ್ರೈವ್ ಗೆ ಮುಂದಾಗಿದ್ದಾಳೆ. ಗ್ರಾಹಕಿ ಬಿ.ಎಂ.ಡಬ್ಲ್ಯೂ ಕಂಪನಿ ಎಕ್ಸ್ 1 ಕಾರ್ ಓಡಿಸಲು ಹೋಗಿ, ಶೋ ರೂಮ್ ನಲ್ಲಿ ನುಗ್ಗಿಸಿದ್ದಾಳೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.

ನೋಡನೋಡುತ್ತಿದ್ದಂತೆ ಶೋ ರೂಮ್ ಒಳಗೆ ನುಗ್ಗಿದ ಕಾರ್, ಒಂದು ಕ್ಷಣ ಹಾಗೆ ನಿಂತು ಮತ್ತೇ ನೇರವಾಗಿ ಸಿಬ್ಬಂದಿಗಳು ಕುಳಿತುಕೊಂಡ ಟೇಬಲ್ ಗೆ ಡಿಕ್ಕಿ ಹೊಡೆದಿದೆ. ಈ ಅನಾಹುತದಿಂದ ಕಾರ್ ಜಖಂ ಆಗಿದ್ದು, ಇದರ ರಿಪೇರಿಗೆ ಸುಮಾರು 40 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಯುವತಿ, ಬ್ರೇಕ್ ಹಾಕಲು ಹೋಗಿ ಎಕ್ಸ್ ಲೇಟರ್ ಪ್ರೆಸ್ ಮಾಡಿದೆ ಎಂದು ತಿಳಿಸಿದ್ದಾಳೆ.

10 ವರ್ಷದ ಹಿಂದಿನ ಆ ಘಟನೆ ಸ್ಮರಿಸಿದ ಬೋಲ್ಟ್

$
0
0

ಉಸೇನ್ ಬೋಲ್ಟ್. ವಿಶ್ವ ಕಂಡ ಅತ್ಯಂತ ವೇಗದ ಓಟಗಾರ. ಸದ್ಯ ಉಸೇನ್ ಬೋಲ್ಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2008 ರ ಬೀಜಿಂಗ್ ಒಲಂಪಿಕ್ ನ ವಿಡಿಯೋ ಒಂದನ್ನು ಹಾಕಿ ತಮ್ಮ ದಾಖಲೆಯನ್ನು ತಾವೇ ಮುರಿದ ರೀತಿಯನ್ನ ಸ್ಮರಿಸಿಕೊಂಡಿದ್ದಾರೆ. ಇಡಿ ವಿಶ್ವದ ಅತ್ಯಂತ ವೇಗದ ಓಟಗಾರ ಅಂತ ಅವರು ಪ್ರಸಿದ್ಧರಾದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.

2008ರಲ್ಲಿ 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಗಳಿಸುವ ಮೂಲಕ ವಿಶ್ವರಂಗಕ್ಕೆ ತಮ್ಮ ಪರಿಚಯ ಮಾಡಿಕೊಟ್ಟಿದ್ದರ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. 2008, 2012, 2016 ರ ಒಲಂಪಿಕ್ಸ್ ನಲ್ಲಿ 100, 200, 400 ಮೀಟರ್ ರಿಲೆ ತಂಡದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಸಾಧನೆ ಮಾಡಿದ್ದಾರೆ ಜಮೈಕಾದ ಈ ಮಿಂಚಿನ ಓಟಗಾರ.

2017 ರ ಲಂಡನ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ನಂತರದಲ್ಲಿ ಬೋಲ್ಟ್ ತಮ್ಮ ಕ್ರೀಡಾ ಜೀವನದಿಂದ ನಿವೃತ್ತಿ ಪಡೆದಿದ್ದಾರೆ. ಸದ್ಯ ಅವರು ತಮ್ಮ ಕೆರಿಯರ್ ನ ಮತ್ತೆ ಫುಟ್ಬಾಲ್ ಮೂಲಕ ಮುಂದುವರೆಸುವ ನಿರೀಕ್ಷೆಯಲ್ಲಿದ್ದಾರೆ.

ಎನರ್ಜಿ ಡ್ರಿಂಕ್ ಜೊತೆ ಆಲ್ಕೋಹಾಲ್ ಮಿಕ್ಸ್ ಮಾಡಿದ್ರೆ ಏನಾಗುತ್ತೆ ಗೊತ್ತಾ…?

$
0
0

ಆಲ್ಕೋಹಾಲ್ ಸೇವಿಸಬೇಕು ಆದ್ರೆ ಹೆಚ್ಚು ನಶೆ ಏರಬಾರದು ಅನ್ನೋ ಕಾರಣಕ್ಕೆ ಎನರ್ಜಿ ಡ್ರಿಂಕ್ ಜೊತೆ ಆಲ್ಕೋಹಾಲ್ ಮಿಕ್ಸ್ ಮಾಡಿ ಕುಡಿಯೋರಿಗೆ ಒಂದು ಶಾಕಿಂಗ್ ಸುದ್ದಿ ಇದೆ. ಹೀಗೆ ಮಾಡೋದ್ರಿಂದ ನೀವು ಏನು ಆಗಬಾರದು ಅಂದುಕೊಳ್ತೀರೋ ಅದೇ ಆಗುವ ಸಾಧ್ಯತೆ ಹೆಚ್ಚು ಅಂತಿದೆ ಅಧ್ಯಯನದ ವರದಿ.

ಮೀನುಗಳ ಮೇಲೆ ನಡೆದ ಪ್ರಯೋಗದ ಮೂಲಕ ನೀಡಲಾಗಿರುವ ಮಾನಸಿಕ ಅಧ್ಯಯನದ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಪ್ರಯೋಗಕ್ಕಾಗಿ ಮನಃಶಾಸ್ತ್ರಜ್ಞರು 192 ಮೀನುಗಳನ್ನ ಬಳಸಿದ್ದರು. ಅಧ್ಯಯನದಿಂದ ತಿಳಿದುಬಂದಿರುವ ವಿಚಾರ ಏನಂದ್ರೆ ಆಲ್ಕೋಹಾಲ್ ಮತ್ತು ಶಕ್ತಿವರ್ಧಕ ಪೇಯವನ್ನು ಮಿಕ್ಸ್ ಮಾಡಿ ಕುಡಿಯೋದ್ರಿಂದ ಮಾನಸಿಕ ಸ್ಥಿತಿಗತಿಯಲ್ಲಿ ಹೆಚ್ಚು ವ್ಯತ್ಯಾಸಗಳಾಗ್ತವಂತೆ.

ಆಲ್ಕೋಹಾಲ್ ಜೊತೆ ಮಿಕ್ಸ್ ಅದಂತಾ ಎನರ್ಜಿ ಡ್ರಿಂಕ್ ಮನುಷ್ಯನಲ್ಲಿ ಭಯವನ್ನ ಕಡಿಮೆ ಮಾಡುತ್ತವೆಯಂತೆ. ಇದರಿಂದ ಸಂವಹನದ ಮೇಲು ಭಾರೀ ಪರಿಣಾಮ ಬೀರುತ್ತದೆಯಂತೆ. ಸಂವಹನದ ಸ್ವರೂಪದಲ್ಲಿ ಹಿಡಿತ ಇಲ್ಲದಂತಾಗುತ್ತದೆಯಂತೆ. ಹಾಗಾಗಿಯೇ ಕುಡಿದವರು ಹೆಚ್ಚು ಗಲಾಟೆಗಳನ್ನ ಮಾಡಿಕೊಳ್ತಾರೆ ಅಂತಿದೆ ಅಧ್ಯಯನದ ವರದಿ.

ಎರಡನೇ ಮದುವೆಯ ಗುಟ್ಟು ಬಿಚ್ಚಿಟ್ಟ ಆಮೀರ್

$
0
0

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇತ್ತೀಚೆಗೆ ಚೀನಾದ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಇದೇ ವೇಳೆ ಆಮೀರ್ ಖಾನ್, ಕಿರಣ್ ರಾವ್ ತಮ್ಮ ಜೀವನದಲ್ಲಿ ಬಂದಿದ್ದು ಹೇಗೆ ಅನ್ನೋ ವಿಚಾರವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಲಗಾನ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಕಿರಣ್ ರಾವ್ ಸಹನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಆಮೀರ್ ಮತ್ತು ಕಿರಣ್ ರಾವ್ ಮಧ್ಯೆ ಗೆಳೆತನವೂ ಇರಲಿಲ್ಲವಂತೆ. ಆನಂತರದಲ್ಲಿ ಆಮೀರ್ ಮೊದಲ ಪತ್ನಿ ರೀನಾ ದತ್ ಅವರಿಂದ ವಿಚ್ಚೇದನ ಪಡೆದ ನಂತರದಲ್ಲಿ ಆಮೀರ್, ಕಿರಣ್ ರಾವ್ ಅವರನ್ನ ಭೇಟಿ ಮಾಡಿದರಂತೆ.

ಅದಕ್ಕೂ ಮೊದಲು ವಿಚಾರ ತಿಳಿದ ಕಿರಣ್ ರಾವ್, ಆಮೀರ್ ಖಾನ್ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದರಂತೆ. ಫೋನ್ ನಲ್ಲಿ ಮಾತನಾಡಿದ ನಂತರ ಕಿರಣ್ ಮಾತುಗಳಿಂದಾಗಿ ತನಗೆ ಖುಷಿಯಾಗಿತ್ತು ಅಂತ ಆಮೀರ್ ಖಾನ್ ಹೇಳಿಕೊಂಡಿದ್ದಾರೆ. ಆನಂತರದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಡೇಟಿಂಗ್ ಶುರುಮಾಡಿದ್ರಂತೆ. 2005ರಲ್ಲಿ ಅವರಿಬ್ಬರು ಮದುವೆಯಾದರು.

ಹಾಗಂತ ಆಮೀರ್ ಖಾನ್ ಮೊದಲ ಪತ್ನಿಯ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಿಲ್ಲ. ಮೊದಲ ಪತ್ನಿ ರೀನಾ ಉತ್ತಮ ವ್ಯಕ್ತಿ. ಆದ್ರೆ ಕೆಲವೊಮ್ಮೆ ಸಂಬಂಧಗಳು ಯಶಸ್ವಿಯಾಗೊದಿಲ್ಲ. ಇಂದಿಗೂ ರೀನಾ ಬಗ್ಗೆ ನನಗೆ ಹಿಂದಿನಷ್ಟೇ ಗೌರವ ಇದೆ. ನಾವಿಬ್ಬರು ಪ್ರಾಜೆಕ್ಟ್ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡ್ತಿದ್ದೀವಿ ಎಂದಿದ್ದಾರೆ ಆಮೀರ್ ಖಾನ್.

ಶನಿವಾರ ಪ್ರಿಯಾಂಕ ನೀಡಲಿದ್ದಾರೆ ದೊಡ್ಡ ಸುದ್ದಿ

$
0
0

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಹಾಡುಗಾರ ನಿಕ್ ಜೋನಸ್ ಮುಂಬೈಗೆ ಬಂದಿಳಿದಿದ್ದಾರೆ. ನಿಕ್, ಕುಟುಂಬಸ್ಥರ ಜೊತೆ ಮುಂಬೈಗೆ ಬಂದಿದ್ದಾರೆ. ಪ್ರಿಯಾಂಕ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ನಂತ್ರ ಎಂಗೇಜ್ಮೆಂಟ್ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಶನಿವಾರ ಪಾರ್ಟಿಯೊಂದರಲ್ಲಿ ಎಂಗೇಜ್ಮೆಂಟ್ ಆಗಿರುವ ಬಗ್ಗೆ ಪಿಗ್ಗಿ ದೃಢಪಡಿಸಲಿದ್ದಾರೆ ಎನ್ನಲಾಗ್ತಿದೆ. ಪ್ರಿಯಾಂಕ ಹುಟ್ಟುಹಬ್ಬದಂದು ನಿಕ್, ಪ್ರಿಯಾಂಕಾಗೆ ಉಂಗುರ ತೊಡಿಸಿದ್ದಾರಂತೆ. ಉಂಗುರವನ್ನು ಮಾಧ್ಯಮಗಳಿಗೆ ತೋರಿಸದೆ ಮರೆಮಾಚುತ್ತಿದ್ದ ಪಿಗ್ಗಿ ವಿನ್ಯಾಸಕ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಉಂಗುರ ಎಲ್ಲರ ಕಣ್ಣಿಗೆ ಬಿದ್ದಿತ್ತು.

ಪ್ರಿಯಾಂಕ ದೊಡ್ಡ ಡೈಮಂಡ್ ಉಂಗುರ ಧರಿಸಿದ್ದಾರೆ. ಇದ್ರ ಬೆಲೆ ಸುಮಾರು 2 ಕೋಟಿ ರೂಪಾಯಿ ಎನ್ನಲಾಗ್ತಿದೆ. ಪ್ರಿಯಾಂಕ ಈವರೆಗೆ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಕ್ ಮಾತ್ರ ಆದಷ್ಟು ಬೇಗ ಮದುವೆಯಾಗ್ತೇನೆ ಎಂಬ ಭರವಸೆ ನೀಡಿದ್ದಾರೆ. ಅನೇಕ ಬಾರಿ ಪ್ರಿಯಾಂಕರನ್ನು ಎಲ್ಲರ ಮುಂದೆ ನಿಕ್ ಹೊಗಳಿದ್ದೂ ಇದೆ. ಶನಿವಾರ ನಡೆಯುವ ಪಾರ್ಟಿ ಮೇಲೆ ಎಲ್ಲರ ಕಣ್ಣಿದೆ.

 

ಕೊಡಗಿನಲ್ಲಿ ಮುಂದುವರೆದ ಮಳೆ: ರಕ್ಷಣೆಗಾಗಿ ಜನರ ಮೊರೆ

$
0
0

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ನಡುಗಡ್ಡೆಗಳಂತಾಗಿದ್ದು, ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಜನರು ನೆರವಿಗಾಗಿ ಮೊರೆಯಿಡುತ್ತಿದ್ದಾರೆ.

ದೇವಸ್ತೂರು ಪ್ರವಾಹಕ್ಕೆ ಸಿಲುಕಿದ್ದು, ಗ್ರಾಮಗಳು ಜಲಾವೃತವಾಗಿವೆ. ನೂರಾರು ಮಂದಿ ಪ್ರಾಣ ರಕ್ಷಣೆಗಾಗಿ ಗುಡ್ಡ ಏರಿ ನಿಂತಿದ್ದಾರೆ. ಮುಕ್ಕೊಡ್ಲಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.

ಕೊಡಗಿನ ಬಹುತೇಕ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದು, ಸೋಮವಾರಪೇಟೆ ತಾಲೂಕಿನ ಮೂವತೊಕ್ಲು ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಮುಕ್ಕೊಡ್ಲು, ದೇವಸ್ತೂರು, ಗ್ರಾಮ ಸೇರಿದಂತೆ ಹಲವು ಪ್ರದೇಶ ರಸ್ತೆ ಸಂಪರ್ಕವನ್ನೂ ಕಡಿದುಕೊಂಡಿದ್ದು ಜನತೆ ಸಂಕಷ್ಟಕ್ಕೀಡಾಗಿದ್ದಾರೆ.


ಅವಕಾಶ ಸಿಕ್ರೆ ಟೆಸ್ಟ್ ಪಂದ್ಯದ ಈ ಜವಾಬ್ದಾರಿ ಹೊರಲು ಸಿದ್ಧ ಎಂದ ಶರ್ಮಾ

$
0
0

ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ವೀರೇಂದ್ರ ಸೆಹ್ವಾಗ್ ನಿವೃತ್ತಿ ಪಡೆದ ನಂತ್ರ ಟೀಂ ಇಂಡಿಯಾ, ಆರಂಭಿಕ ಆಟಗಾರರ ಸಮಸ್ಯೆ ಎದುರಿಸುತ್ತಿದೆ. ಟೆಸ್ಟ್ ಪಂದ್ಯದ ಆರಂಭದಲ್ಲಿಯೇ ಬೌಲರ್ ಗಳ ಮೇಲೆ ಒತ್ತಡ ಹೇರುವ, ದೀರ್ಘಕಾಲ ಕ್ರೀಸ್ ನಲ್ಲಿರುವ ಹಾಗೂ ಅಗತ್ಯ ಬಿದ್ರೆ ಅಬ್ಬರಿಸುವ ಆಟಗಾರರು ಟೀಂ ಇಂಡಿಯಾದಲ್ಲಿಲ್ಲ. ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆ.ಎಲ್.ರಾಹುಲ್, ಸೆಹ್ವಾಗ್ ಪಾತ್ರ ನಿಭಾಯಿಸುವುದ್ರಲ್ಲಿ ವಿಫಲರಾಗಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುಂಡಿದೆ. ಇದಕ್ಕೆ ಮುಖ್ಯ ಕಾರಣ ಆರಂಭಿಕ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು. ಇದು ಮಧ್ಯಮ ಕ್ರಮಾಂಕದ ಆಟಗಾರರಿಗೆ ಒತ್ತಡ ಹೆಚ್ಚಾಗಲು ಕಾರಣವಾಯ್ತು. ಆರಂಭಿಕ ಆಟಗಾರನಾಗಿ, ಸೆಹ್ವಾಗ್ ಸ್ಥಾನದಲ್ಲಿ ರೋಹಿತ್ ಶರ್ಮಾ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ.

ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಟೆಸ್ಟ್ ಪಂದ್ಯದಲ್ಲೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಏಕದಿನ ಪಂದ್ಯ ಹಾಗೂ ಟಿ-20 ಪಂದ್ಯಗಳಲ್ಲಿ ಶತಕ ಬಾರಿಸಿರುವ ರೋಹಿತ್ ಶರ್ಮಾರನ್ನು ಟೆಸ್ಟ್ ಸರಣಿಗೆ ಕಡೆಗಣಿಸಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶರ್ಮಾ, ನನ್ನ ಬಳಿ ಇಂಥ ಪ್ರಸ್ತಾವನೆ ಇನ್ನೂ ಬಂದಿಲ್ಲ. ಒಂದು ವೇಳೆ ಇಂಥ ಆಫರ್ ಬಂದ್ರೆ ನಾನು ಸಿದ್ಧ. ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯುತ್ತೇನೆಂದು ನಾನು ಭಾವಿಸರಲಿಲ್ಲ. ಈ ಜವಾಬ್ದಾರಿ ಒಲಿದು ಬಂತು. ಅದನ್ನು ನಿಭಾಯಿಸುತ್ತಿದ್ದೇನೆ. ಟೆಸ್ಟ್ ಪಂದ್ಯದಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯುವ ಸಂದರ್ಭ ಬಂದ್ರೆ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ. ಅದಕ್ಕೆ ಬೇಕಾದ ಎಲ್ಲ ತಯಾರಿ ನಡೆಸುತ್ತೇನೆಂದು ಶರ್ಮಾ ಹೇಳಿದ್ದಾರೆ.

 

ವಾಜಪೇಯಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ

$
0
0

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಇಂದು ಬೆಳಿಗ್ಗೆ ನವದೆಹಲಿಗೆ ತೆರಳಿ ಗುರುವಾರದಂದು ವಿಧಿವಶರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

‘ಅಜಾತ ಶತ್ರು’ ವಾಜಪೇಯಿ ಅವರು ದೇಶ ಕಂಡ ಅಪರೂಪದ ಮೌಲಿಕ ರಾಜಕಾರಣಿಗಳಲ್ಲಿ ಒಬ್ಬರು ಎಂದು ಈ ಸಂದರ್ಭದಲ್ಲಿ ಅವರು ಸ್ಮರಿಸಿಕೊಂಡಿದ್ದಾರೆ.

ವಾಜಪೇಯಿಯವರ ನಿಧನದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ, ಇಂದು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಿಗೆ ರಜೆ ಘೋಷಿಸಿದ್ದು, ಏಳು ದಿನಗಳ ಕಾಲ ಶೋಕಾಚರಣೆ ಆಚರಿಸಲು ಸೂಚಿಸಲಾಗಿದೆ.

ಈ ಕಾರಣಕ್ಕೆ ಹೆಚ್ಚಾಗಲಿದೆ ಸ್ಮಾರ್ಟ್ಫೋನ್, ಟಿವಿ, ಫ್ರಿಜ್ ಬೆಲೆ

$
0
0

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಇದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಹಾಗೂ ಗ್ರಾಹಕ ಬಾಳಿಕೆ ಉತ್ಪನ್ನಗಳ ತಯಾರಿಕಾ ಕಂಪನಿಗಳು ಚಿಂತೆಗೊಳಗಾಗುವಂತೆ ಮಾಡಿದೆ. ಭವಿಷ್ಯದಲ್ಲಿ ತಮ್ಮ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಸ್ಮಾರ್ಟ್ಫೋನ್ ಕಂಪನಿಗಳು ಹಾಗೂ ಗ್ರಾಹಕ ಬಾಳಿಕೆ ಉತ್ಪನ್ನ ತಯಾರಿಕೆ ಕಂಪನಿಗಳು ಶೀಘ್ರವೇ ಬೆಲೆ ಏರಿಸಲಿವೆ. ಹಬ್ಬದ ಋತು ಬರುವ ಮೊದಲೇ ಬೆಲೆ ಏರಿಕೆಗೆ ಗಂಭೀರ ಚಿಂತನೆ ನಡೆಸಿವೆ. ಡಾಲರ್ ಎದುರು ರೂಪಾಯಿ ಬೆಲೆ ನಿರಂತರವಾಗಿ ಏರ್ತಿದೆ. ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಂಡ್ರೆ ಮೊದಲಿಗಿಂತ ಹೆಚ್ಚು ಹಣವನ್ನು ಈಗ ನೀಡಬೇಕಾಗ್ತಿದೆ.

ಒಂದು ಡಾಲರ್ ಮೌಲ್ಯ ಹಿಂದೆ 65 ರೂಪಾಯಿಯಿತ್ತು. ಈಗ 70 ರೂಪಾಯಿಯಾಗಿದೆ. ಅಂದ್ರೆ ಒಂದು ಡಾಲರ್ ಮೌಲ್ಯದ ವಸ್ತು ಖರೀದಿಗೆ ಭಾರತೀಯರು 5 ರೂಪಾಯಿ ಹೆಚ್ಚು ನೀಡಬೇಕಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಈಗ್ಲೇ ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಒತ್ತಡಕ್ಕೆ ನೂಕಿದೆ. ಕಂಪನಿಗಳು ಕಡಿಮೆ ಲಾಭ ಪಡೆಯುತ್ತಿವೆ. ಈ ಮಧ್ಯೆ ಡಾಲರ್ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಫ್ರಿಜ್, ಟಿವಿ, ಸ್ಮಾರ್ಟ್ಫೋನ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ.

 

 

ಪ್ರಧಾನಿ ಹುದ್ದೆಗೇರಿದ್ದರೂ ಸ್ವಂತ ಮನೆ ಹೊಂದಿರದ ಮಹಾನ್ ಯೋಗಿ ವಾಜಪೇಯಿ

$
0
0

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ದೇಶಕ್ಕಾಗಿಯೇ ತಮ್ಮನ್ನು ಮುಡುಪಾಗಿಟ್ಟು, ಯೋಗಿಯಂತೆ ಬಾಳಿದ ಮಹಾನ್ ಚೇತನ. ಪ್ರಧಾನಿ ಹುದ್ದೆಗೇರಿದ್ದರೂ ಕೂಡ ವಾಜಪೇಯಿ ಅವರಿಗೆ ಸ್ವಂತ ಮನೆಯಿರಲಿಲ್ಲ. ಹಲವು ವರ್ಷಗಳ ಕಾಲ ಪಕ್ಷದ ಕಚೇರಿಯಲ್ಲಿಯೇ ಮಲಗುತ್ತಿದ್ದರು. ಪಕ್ಷದ ಕಾರ್ಯಾಲಯವೇ ಅವರ ಮನೆಯಾಗಿತ್ತು. ನನಗೆ ಸ್ವಂತದ್ದೆಂದು ಇರುವುದು ನಾನು. ಅದೂ ಶಾಶ್ವತವಲ್ಲ. ಹೀಗಿರುವಾಗ ಮನೆ ಆಸ್ತಿಪಾಸ್ತಿ ಎಲ್ಲ ಏಕೆ ಬೇಕು? ಎಂಬುದು ಅವರ ಪ್ರಶ್ನೆ.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನು ಅಟಲ್ ಜಿ ಯವರಲ್ಲಿ ಕಾಣಬಹುದು. ಶಾಸ್ತ್ರಿಯವರು ಕೂಡ ಭಾರತದ ಪ್ರಧಾನಿಯಾಗಿದ್ದರೂ ಸ್ವಂತ ಮನೆ ಹೊಂದಿರಲಿಲ್ಲ. ಅಂತೆಯೇ ಅಟಲ್ ಜಿ ಕೂಡ, ಅವರ ನೀತಿಯನ್ನು ಪಾಲಿಸಿದ ಮತ್ತೊಬ್ಬ ಪ್ರಧಾನಿಯಾಗಿದ್ದರು. ಗ್ವಾಲಿಯರ್ ನಲ್ಲಿ ತಮ್ಮ ತಂದೆಯ ಮನೆಯನ್ನು ಅಟಲ್ ಗ್ರಂಥಾಲಯವಾಗಿ ಪರಿವರ್ತಿಸಿದ್ದರು. ಅದು ಈಗ ಸಾರ್ವಜನಿಕ ಗ್ರಂಥಾಲಯವಾಗಿದೆ.

ಅಧಿಕಾರ, ಹುದ್ದೆ ಬರುತ್ತಿದ್ದಂತೆ ತಮ್ಮದೊಂದು ಸ್ವಂತ ಮನೆ ಹೆಸರಲ್ಲಿ ದೊಡ್ಡ ದೊಡ್ಡ ಬಂಗಲೆ, ಭಾರೀ ಮೌಲ್ಯದ ಕಾರುಗಳನ್ನು ಹೊಂದುವ ಇಂದಿನ ರಾಜಕಾರಣಿಗಳಿಗೆ 45 ವರ್ಷಗಳಿಂದ ರಾಜಕೀಯದಲ್ಲಿದ್ದೂ ದುರಾಸೆಯ ಗೋಜಿಗೆ ಹೋಗದೇ ಸನ್ಯಾಸಿಯಂತೆ ಬದುಕಿ ತೋರಿಸಿದ ಮಹಾಯೋಗಿ ವಾಜಪೇಯಿ ನಿಜಕ್ಕೂ ಮಾದರಿ.

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

$
0
0

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ರಸ್ತೆಪಕ್ಕದಲ್ಲಿ ಕಾರು ನಿಲ್ಲಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.

ಮೃತ ಯುವಕ ಬಸವೇಶ್ವರ ನಗರದ ನಿವಾಸಿ ಸುಮಂತ್(25) ಎಂದು ಗುರುತಿಸಲಾಗಿದೆ. ಮನೆಯಿಂದ ಹೊರಟ ಸುಮಂತ್ ಕೆಎ.51.ಎನ್.8958 ನ ಕಾರಿನಲ್ಲಿ ಬಂದು, ಹೊಸೂರು ರಸ್ತೆಯ ಗುಡ್ನಹಳ್ಳಿ ಗ್ರಾಮದ ಕೆರೆ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ, ಏಕಾಏಕಿ ಕೆರೆಗೆ ಹಾರಿದ್ದಾನೆ.

ಸುಮಂತ್ ನನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.

Viewing all 122063 articles
Browse latest View live


<script src="https://jsc.adskeeper.com/r/s/rssing.com.1596347.js" async> </script>