ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುವ ಭಾರತೀಯ ರೈಲ್ವೆ ಇಲಾಖೆ ಇತ್ತೀಚಿಗಷ್ಟೇ 300 ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ರೈಲಿನ ಸಮಯವನ್ನು 5 ನಿಮಿಷದಿಂದ ಎರಡೂವರೆ ಗಂಟೆಯವರೆಗೆ ಬದಲಾವಣೆ ಮಾಡಲಾಗಿದೆ. ಇದ್ರ ಜೊತೆ ಹೊಸ ರೈಲುಗಳ ಘೋಷಣೆ ಮಾಡಿದೆ.
ಹೊಸ ರೈಲುಗಳನ್ನು ಕೂಡ ರೈಲ್ವೆ ಇಲಾಖೆ ತನ್ನ ವೇಳಾಪಟ್ಟಿಯಲ್ಲಿ ಸೇರಿಸಿದೆ. ಮುಂದಿನ ವರ್ಷದಲ್ಲಿ ಅಂತ್ಯೋದಯ ಎಕ್ಸ್ ಪ್ರೆಸ್, ಉದಯ ಎಕ್ಸ್ಪ್ರೆಸ್ ಮತ್ತು ತೇಜ್ ಎಕ್ಸ್ ಪ್ರೆಸ್ ಬಿಡುವ ಸಿದ್ಧತೆ ನಡೆಸಿದೆ. ಎರಡು ತೇಜಸ್, ಎರಡು ಅಂತ್ಯೋದಯ ಹಾಗೂ ಎರಡು ಉದಯ ಎಕ್ಸ್ ಪ್ರೆಸ್ ರೈಲನ್ನು ಸಮಯಕ್ಕಿಂತ ಮೊದಲು ಪ್ರಾರಂಭಿಸುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಈಗ ಮತ್ತಷ್ಟು ರೈಲು ಸಂಚಾರ ಶುರು ಮಾಡ್ತಿದೆ. ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಮಾಣ ವಚನ ಸಮಾರಂಭಕ್ಕೆ ಹಲವು ಗಣ್ಯರು ಸಾಕ್ಷಿಯಾದ್ರು. ಈ ವೇಳೆ ಇಮ್ರಾನ್ ಖಾನ್ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.
ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 172. ಶುಕ್ರವಾರ ಪಾಕಿಸ್ತಾನದ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಇಮ್ರಾನ್ ಖಾನ್ ರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಈ ವೇಳೆ ಇಮ್ರಾನ್ ಖಾನ್ 176 ಮತಗಳನ್ನು ಪಡೆದುಕೊಂಡಿದ್ದರು.
ಇಮ್ರಾನ್ ಖಾನ್ ಪದಗ್ರಹಣ ಸಮಾರಂಭದಲ್ಲಿ ಅವರ ಪತ್ನಿ ಬುಶ್ರಾ ಮನೇಕಾ ಸಹ ಭಾಗವಹಿಸಿದ್ದರು. ಅಲ್ಲದೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಹಾಜರಿದ್ದರು.
ವಿದೇಶದಲ್ಲಿ ಅಭ್ಯಾಸ ಮಾಡಿರುವ ಇಮ್ರಾನ್ ಖಾನ್, ಉರ್ದು ಓದುವಾಗ ತಪ್ಪು ಮಾಡಿದ್ರು. ಪ್ರಮಾಣವಚನ ಸಮಾರಂಭಕ್ಕಾಗಿ ಇಮ್ರಾನ್ ಖಾನ್ ಗೆ ಬರೆದುಕೊಟ್ಟಿದ್ದು ಭಾಷಣದಲ್ಲಿ ಸ್ಥಳೀಯ ಉರ್ದು ಭಾಷೆಯನ್ನು ಬಳಸಲಾಗಿತ್ತು. ಇದನ್ನು ಓದುವಾಗ ಇಮ್ರಾನ್ ಯಡವಟ್ಟು ಮಾಡಿದ್ರು.
ಸಿನಿಮಾ ಚಿತ್ರೀಕರಣದ ವೇಳೆ ಯಡವಟ್ಟುಗಳಾಗೋದು ಸಾಮಾನ್ಯ. ಕೆಲವೊಂದು ಘಟನೆಗಳು ಮುಜುಗರವುಂಟು ಮಾಡುತ್ತದೆ. ಈಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಕೂಡ ಮುಜುಗರಪಟ್ಟುಕೊಳ್ಳುವಂತಹ ಘಟನೆ ನಡೆದಿದೆ. ಹೇಟ್ ಸ್ಟೋರಿ 4 ನಟಿ ಊರ್ವಶಿ ರೌಟೆಲಾ ಫೋಟೋಶೂಟ್ ವೇಳೆ ಎಡವಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಫೋಟೋ ಶೂಟ್ ಮಾಡ್ತಿದ್ದ ಊರ್ವಶಿ ಎಡವಿ ಬೀಳ್ತಿದ್ದಳು. ತಕ್ಷಣ ತನ್ನನ್ನು ಸಂಭಾಳಿಸಿಕೊಂಡ ಊರ್ವಶಿ ಬಚಾವ್ ಆಗಿದ್ದಾಳೆ. ವಿಡಿಯೋದಲ್ಲಿ ಊರ್ವಶಿ ಸುಂದರ ಬಟ್ಟೆ ಹಾಗೂ ಪೆನ್ಸಿಲ್ ಹೀಲ್ಡ್ ಸ್ಯಾಂಡಲ್ ಧರಿಸಿದ್ದಳು.
ಊರ್ವಶಿ ನಿಯಂತ್ರಣ ತಪ್ಪುತ್ತಿದ್ದಂತೆ ಆಕೆ ಬೆಲ್ಟ್ ಬಿಚ್ಚಿ ಬೀಳುತ್ತದೆ. ತನ್ನನ್ನು ಸಂಭಾಳಿಸಿಕೊಂಡ ಊರ್ವಶಿ ವಿಡಿಯೋದಲ್ಲಿ ನಗ್ತಿದ್ದಾಳೆ. ಸನ್ನಿ ಡಿಯೋಲ್ ಜೊತೆ ಬಾಲಿವುಡ್ ವೃತ್ತಿ ಶುರು ಮಾಡಿದ್ದ ಊರ್ವಶಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾಳೆ. ಸದ್ಯ ಹೇಟ್ ಸ್ಟೋರಿ 4 ನಲ್ಲಿ ಕಾಣಿಸಿಕೊಂಡಿದ್ದಾಳೆ.
ಆನ್ ಲೈನ್ ಶಾಪಿಂಗ್ ನಲ್ಲಿ ಮೋಸ ಆಗೋದನ್ನು ಗಮನಿಸಿರುತ್ತಿರಾ, ಇಲ್ಲಾ ಓದಿರುತ್ತಿರಾ. ಇನ್ನು ಕೆಲವು ಗ್ರಾಹಕರಿಗೆ ತಾವು ಬಯಸಿದ ಪ್ರಾಡಕ್ಟ್ ಬದಲು ಬೇರೆ ವಸ್ತು ಸಿಕ್ಕಿರೋದು ಹಳೆಯ ವಿಚಾರ. ಬಟ್ಟೆಯ ಆರ್ಡರ್ ಮಾಡಿದ್ರೆ, ಸೈಜ್ ಬದಲಾವಣೆ ಆಗೋದು ಕಾಮನ್. ಮೊಬೈಲ್ ಬದಲಿಗೆ ಸೋಪ್ ಕಳಿಸಿರೋದು ವೈರಲ್ ಆಗಿತ್ತು.
ಇಂತಹದ್ದೇ ಮತ್ತೊಂದು ಘಟನೆ ಚೀನಾದ ಸೂಚಿಂಗ್ ನಲ್ಲಿ ನಡೆದಿದೆ. ಗ್ರಾಹಕಿ ಜೀವ ರಕ್ಷಕವನ್ನು ಕೇಳಿದ್ರೆ, ಆನ್ ಲೈನ್ ಶಾಪಿಂಗ್ ನವರು ಸತ್ತ ಮೊಸಳೆ ನೀಡಿದ್ದಾರೆ.
ಜಾಂಗ್ ಎಂಬ ಯುವತಿ ಔಷಧಿಗಳನ್ನು ಬುಕ್ ಮಾಡಿದ್ದಾರೆ. ಬುಕ್ ಮಾಡಿದ ವಸ್ತು ಕೊರಿಯರ್ ಮೂಲಕ ಮನೆ ಬಾಗಿಲಿಗೆ ಬಂದಿದೆ. ಬಾಕ್ಸ್ ಓಪನ್ ಮಾಡಿದಾಗ ಅಚ್ಚರಿ ಕಾದಿದೆ. ಜಾಂಗ್ ಔಷಧಿಗಳನ್ನು ಬುಕ್ ಮಾಡಿದ್ರೆ, ಮೂರು ಬಾಕ್ಸ್ ಗಳಲ್ಲಿ ಬರುತ್ತಿತ್ತು. ಆದ್ರೆ, ಈ ಬಾರಿ ನಾಲ್ಕು ಬಾಕ್ಸ್ ಗಳಲ್ಲಿ ಔಷಧಿ ಬಂದಿರೋದ್ರಿಂದ ಕೊಂಚ ವಿಚಲಿತರಾಗಿದ್ದಾರೆ. ಬಾಕ್ಸ್ ನಿಂದ ವಾಸನೆ ಬರುತ್ತಿರೋದನ್ನು ಗಮನಿಸಿ, ಓಪನ್ ಮಾಡಿದಾಗ ಸತ್ತ ಮೊಸಳೆ ಪತ್ತೆಯಾಗಿದೆ.
ಈ ಬಗ್ಗೆ ಜಾಂಗ್ ಪತಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು, ಕೊರಿಯರ್ ನವರು ಮಾಡಿದ ಎಡವಟ್ಟು ಬಯಲಾಗಿದೆ. ಈ ವಿಡಿಯೋ ಸದ್ಯ ಆನ್ ಲೈನ್ ಶಾಪಿಂಗ್ ನಲ್ಲಿ ಆಗುವ ಮೋಸದ ಬಗ್ಗೆ ಎಚ್ಚರಿಕೆ ನೀಡುವಂತಿದೆ.
ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ದೇಸಿ ಶೈಲಿಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಿರೀಕ್ಷೆಯಂತೆ ಶನಿವಾರ ಪ್ರಿಯಾಂಕ ಮನೆಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮ ನಡೆದಿದೆ.
ಬೆಳಿಗ್ಗೆ ಪ್ರಿಯಾಂಕ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಪೂಜೆಗೆ ಪ್ರಿಯಾಂಕ ಹಾಗೂ ನಿಕ್ ಕುಳಿತುಕೊಂಡಿದ್ದರು ಎನ್ನಲಾಗಿದೆ. ಪ್ರಿಯಾಂಕ ಮನೆಗೆ ಸಂಬಂಧಿಕರು, ಸ್ನೇಹಿತರು ಬರ್ತಿದ್ದಾರೆ. ಮನೆಯನ್ನು ಹೂ, ಬಣ್ಣ ಬಣ್ಣದ ಲೈಟ್ ಗಳಿಂದ ಅಲಂಕರಿಸಲಾಗಿದೆ.
ಶನಿವಾರ ಸಂಜೆ ಪ್ರಿಯಾಂಕ ಆಪ್ತರಿಗೆ ಅದ್ಧೂರಿ ಪಾರ್ಟಿ ನೀಡಲಿದ್ದಾರೆ. ಪ್ರಿಯಾಂಕ ಹಾಗೂ ನಿಕ್ ದೇಶಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ನಿಕ್ ಕುಟುಂಬಸ್ಥರು ಕೂಡ ಜುಬ್ಬಾ, ಪೈಜಾಮ್ ತೊಟ್ಟಿದ್ದಾರೆ. ಬೆಳಿಗ್ಗೆಯೇ ಪ್ರಿಯಾಂಕ ಮನೆಗೆ ಬಂದ ಪಂಡಿತರು ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ನಿಶ್ಚಿತಾರ್ಥ ಪ್ರಿಯಾಂಕ ಮುಖದಲ್ಲಿ ನಗು ಮೂಡಿಸಿದೆ. ಪ್ರಿಯಾಂಕ ತುಂಬಾ ಖುಷಿಯಾಗಿದ್ದಾಳೆ ಎನ್ನಲಾಗ್ತಿದೆ.
ನೋಯ್ಡಾದ ಸೆಕ್ಟರ್ 24 ರ ಪೊಲೀಸರು ದೇಶದ ಅನೇಕ ನಗರಗಳ ಪೊಲೀಸರಿಗೆ ತಲೆನೋವಾಗಿದ್ದ ಯುವಕನನ್ನು ಬಂಧಿಸಿದ್ದಾರೆ. ಆತ ಹಾಗೂ ಆತನ ಸಹೋದರಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಟಿವಿ ಚಾನೆಲ್ ನಿರ್ದೇಶಕ ಎಂದುಕೊಂಡು ಯುವಕ ಕೋಟ್ಯಾಂತ ರೂಪಾಯಿ ಮೋಸ ಮಾಡಿದ್ದಾನೆ.
ಮೆಟ್ರಿಮೋನಿಯಾದಲ್ಲಿ ಫೋಟೋ ಹಾಕಿ ಮೋಸ ಮಾಡ್ತಿದ್ದರು. ಟಿವಿ ಚಾನೆಲ್ ನಿರ್ದೇಶಕ ಎಂದಿದ್ದ ಯುವಕ ತನಗೆ 20 ಲಕ್ಷ ತಿಂಗಳ ಸಂಬಳ ಬರುತ್ತದೆ ಎಂದಿದ್ದ. ಸಹೋದರಿ ಕ್ಯಾನ್ಸರ್ ರೋಗಿ ಎಂದು ಮೋಸ ಮಾಡ್ತಿದ್ದಳು. ಏಪ್ರಿಲ್ 2017 ರಲ್ಲಿ ನೋಯ್ಡಾದ ದಾದಿಯೊಬ್ಬಳಿಗೆ 40 ಲಕ್ಷ ರೂಪಾಯಿ ಮೋಸ ಮಾಡಿದ. ಮದುವೆಯಾಗಿ ದಾದಿಯನ್ನು ಕಾಶ್ಮೀರ ಸುತ್ತಿಸಿದ್ದ ಆರೋಪಿ ನಂತ್ರ 40 ಲಕ್ಷ ದೋಚಿ ಪರಾರಿಯಾಗಿದ್ದ.
ದಾದಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆರೋಪಿ ಬಳಿ ಒಂದು ಐ 10 ಕಾರ್, ಎರಡು ಕಾರಿನ ನಂಬರ್ ಪ್ಲೇಟ್, ನಕಲಿ ಆರ್ಸಿ, 5 ಮೊಬೈಲ್, 5 ನಕಲಿ ಆಧಾರ್ ಕಾರ್ಡ್, 5 ವೋಟರ್ ಐಡಿ, 7 ಚೆಕ್ ಬುಕ್ ವಶಕ್ಕೆ ಪಡೆಯಲಾಗಿದೆ.
ಗರ್ಭಪಾತದ ಸಂದರ್ಭದಲ್ಲಿ ಪತ್ನಿಗೆ ನೆರವಾಗಲು ಪತಿಗೂ ರಜೆ ನೀಡುವ ಬಗ್ಗೆ ನ್ಯೂಜಿಲ್ಯಾಂಡ್ ಸರ್ಕಾರ ಚಿಂತನೆ ನಡೆಸುತ್ತಿದೆ. ಗರ್ಭಿಣಿ ಪತ್ನಿಗೆ ಯಾವುದೇ ಸಂದರ್ಭದಲ್ಲಿ ಗರ್ಭಪಾತವಾದ್ರೆ ಇದನ್ನು ಕುಟುಂಬಸ್ಥರ ಸಾವೆಂದು ಪರಿಗಣಿಸಿ ರಜೆ ನೀಡಲು ಸರ್ಕಾರ ಚರ್ಚೆ ನಡೆಸುತ್ತಿದೆ.
ನ್ಯೂಜಿಲ್ಯಾಂಡ್ ಸಂಸತ್ ನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಗರ್ಭಪಾತವಾದ್ರೆ ಪತಿಗೆ ಮೂರು ದಿನಗಳ ರಜೆ ಸಿಗಲಿದೆ. ಲೇಬರ್ ಪಕ್ಷದ ಸಂಸದ ಗಿನ್ನಿ ಆಂಡರ್ಸನ್ ಸಂಸತ್ ನಲ್ಲಿ ಮಸೂದೆ ಮಂಡಿಸಿದ್ರು. ದೇಶದಲ್ಲಿ ಕುಟುಂಬಸ್ಥರ ಮರಣ ಹಾಗೂ ಪತ್ನಿ ಹೆರಿಗೆಯಾದ್ರೆ ರಜೆ ಸಿಗ್ತಿದೆ. ಈಗ ಗರ್ಭಪಾತವಾದ್ರೂ ರಜೆ ನೀಡಲು ನಿರ್ಧರಿಸಲಾಗ್ತಿದೆ.
ಈ ಮಸೂದೆ ಮಂಜೂರಿಗೆ ಈವರೆಗೆ 3700 ಮಂದಿ ಸಹಿ ಹಾಕಿದ್ದಾರೆ. ಗರ್ಭಪಾತದ ಸಂದರ್ಭದಲ್ಲಿ ಪತಿ-ಪತ್ನಿ ಇಬ್ಬರೂ ದುಃಖದಲ್ಲಿರುವ ಕಾರಣ ರಜೆ ನೀಡುವ ಅಗತ್ಯವಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಲೈಂಗಿಕ ಜೀವನ ಸದಾ ಉತ್ಸಾಹದಿಂದ ಕೂಡಿರಬೇಕೆಂದ್ರೆ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಚಿತ್ರ ವಿಚಿತ್ರ ಸೆಕ್ಸ್ ಡಾಲ್ ಗಳು ಸೆಕ್ಸ್ ಜೀವನದ ಸುಖ ಹೆಚ್ಚಿಸಲು ಉತ್ತಮ ಆಯ್ಕೆ ಎಂದ್ರೆ ತಪ್ಪಾಗಲಾರದು.
ಐಪೆಲ್ ಟವರ್ ಡಿಲ್ಡೋ ಹೆಸರಿನ ವಸ್ತು ಮಾರುಕಟ್ಟೆಯಲ್ಲಿದೆ. ಫ್ಯಾರಿಸ್ ನ ಐಫೆಲ್ ಟವರ್ ಆಕಾರದಲ್ಲಿರುವ ಇದು ಅತಿ ಹೆಚ್ಚು ಮಾರಾಟವಾಗ್ತಿದೆ.
ರಬ್ಬರ್ ಡಕ್ ವೈಬ್ರೇಟರ್ ಕೂಡ ಸೆಕ್ಸ್ ಟಾಯ್ಸ್ ಗಳಲ್ಲಿ ಒಂದು. ಇದನ್ನು ಸುರಕ್ಷಿತವಾಗಿಡುವುದು ಬಹಳ ಒಳ್ಳೆಯದು. ಯಾಕೆಂದ್ರೆ ಮಕ್ಕಳು ಆಟಿಕೆಯೆಂದು ಆಟವಾಡುವ ಸಾಧ್ಯತೆ ಹೆಚ್ಚಿದೆ.
ಸೋಲಾರ್ ವೈಬ್ರೇಟರ್, ಕರೆಂಟ್ ಇರಲಿ ಬಿಡಲಿ ಸಂತೋಷ ನೀಡುವ ಕೆಲಸವನ್ನು ಮಾಡುತ್ತದೆ.
ಲಿಫ್ಸ್ಟಿಕ್ ವೈಬ್ರೇಟರ್ ರನ್ನು ಆರಾಮವಾಗಿ ಪರ್ಸ್ ನಲ್ಲಿಟ್ಟುಕೊಂಡು ಹೋಗಬಹುದು. ಯಾರಿಗೂ ಅನುಮಾನ ಬರುವುದಿಲ್ಲ.
ರೋಸ್ ರಿಂಗ್ ಅತ್ಯಂತ ಇನೋವೇಟಿವ್ ಸೆಕ್ಸ್ ಗ್ಯಾಜೆಟ್ ಆಗಿದೆ. ಇದ್ರ ಮೇಲಿರುವ ಬಟನ್ ತ್ವರಿತವಾಗಿ ಆನಂದ ನೀಡುತ್ತದೆ.
ಶಿವಮೊಗ್ಗ:ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ನಾಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಹಲವು ಬೆಳೆಗಳು ನಾಶವಾಗಿವೆ. ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ. ಬೆಳೆ ಹಾನಿ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಭೇಟಿ ನೀಡಿ ಮಳೆಹಾನಿ ಸಮೀಕ್ಷೆ ನಡೆಸುವರು. ನಂತರ ಸಂಜೆ 5 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಅತಿವೃಷ್ಟಿಯಿಂದಾಗಿ ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ ಈ ಭಾಗದಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್ ಇನ್ನಿತರ ತೋಟಗಾರಿಕಾ ಬೆಳೆ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ, ಸೊರಬ, ಶಿಕಾರಿಪುರ ಈ ಭಾಗದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಇದಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರ ಕರ್ಮ ಭೂಮಿ ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಸ್ಮಾರಕ ನಿರ್ಮಿಸಲು ಚಿಂತನೆ ನಡೆದಿದೆ. ಆಗ್ರಾ, ಲಕ್ನೋ, ಕಾನ್ಪುರ್ ಮತ್ತು ಬಲರಾಂಪುರ್ ಗಳಲ್ಲಿ ಸ್ಮಾರಕ ರಚಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ.
ಸ್ಮಾರಕ ನಿರ್ಮಿಸುವ ಯೋಜನೆ ಕೈಗೊಳ್ಳಲು ಅಳೆದು ತೂಗಿ ಸ್ಥಳಗಳ ಆಯ್ಕೆ ಮಾಡಲಾಗಿದೆ. ವಾಜಪೇಯಿ ಅವರ ರಾಜಕೀಯ ಜೀವನಕ್ಕೆ ಹತ್ತಿರದ ಪ್ರದೇಶ ಆಯ್ಕೆ ಮಾಡಲಾಗುತ್ತಿದೆ. ಆಗ್ರಾ ಜಿಲ್ಲೆಯ ಬತೇಶ್ವರ್ ನಲ್ಲಿ ವಾಜಪೇಯಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿದ್ದು, ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣದ ಚಿಂತನೆ ನಡೆದಿದೆ. ಕಾನ್ಪುರ್ ನ ಡಿ.ಎ.ವಿ. ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದಿದ್ದರಿಂದ, ಈ ನಗರದಲ್ಲಿ ಅಜಾತಶತ್ರು ನೆನಪುಗಳನ್ನು ಮರುಕಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
1957ರಲ್ಲಿ ಮೊದಲ ಬಾರಿಗೆ ಬಲರಾಂಪುರ್ ದಿಂದ ಲೋಕಸಭೆಗೆ ಅಟಲ್ ಆಯ್ಕೆ ಆಗಿದ್ದರು. ಇನ್ನು ಐದು ಜಯ ಸಾಧಿಸಿದ ಬಾರಿಸಿದ ಲಕ್ನೋ ನಗರದಲ್ಲೂ ಮಾಜಿ ಪ್ರಧಾನಿ ನೆನಪಿನ ಸ್ಮಾರಕ ನಿರ್ಮಾಣವಾಗಲಿದೆ. ಕೇಂದ್ರ ಬಿಜೆಪಿ ಸರ್ಕಾರ ಸಹ ಅಲಹಾಬಾದ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಪುಥ್ಥಳಿ ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಗುಡ್ಡ ಕುಸಿತದಂತ ಘಟನೆಗಳು ಹೆಚ್ಚುತ್ತಿವೆ. ಸಂಪಾಜೆಯ ಜೋಡುಪಾಳ್ಯದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ರಸ್ತೆ ದಾಟಲಾಗದೆ ಪರದಾಡುತ್ತಿದ್ದರು. ಈ ನಡುವೆ ಪಿಎಸ್ಐ ಮಂಜುನಾಥ್ ಹೆಗಲ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ ಘಟನೆ ನಡೆದಿದೆ.
ಜೋಡುಪಾಳ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸುಮಾರು 180 ಜನ ಸಿಲುಕಿಕೊಂಡಿದ್ದು, ಜನರನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಮಾರ್ಗ ಮಧ್ಯೆ ಹಗ್ಗ ಕಟ್ಟಲಾಗಿತ್ತು. ರಭಸದಿಂದ ಹರಿಯುತ್ತಿರುವ ನೀರನ್ನು ದಾಟಿಸಲು ಪಿಎಸ್ಐ ಮಂಜುನಾಥ್ ಗ್ರಾಮಸ್ಥರನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿಸಿದ್ದಾರೆ.
ಕರಾವಳಿ, ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಸುರಿಯಿತ್ತಿದ್ದು, ಗುಡ್ಡ ಕುಸಿತವುಂಟಾಗುತ್ತಿರುವ ಹಿನ್ನಲೆಯಲ್ಲಿ ರಕ್ಷಣೆಗಾಗಿ ಜನರು ಮೊರೆಯಿಡುತ್ತಿದ್ದಾರೆ.
ಪ್ರಸಿದ್ಧ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಪುತ್ರಿ ಮಾಳವಿಕಾ ಮೋಹನನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ರೋಮಾನ್ಸ್ ಮಾಡಲಿದ್ದಾರೆ.
ರಜನೀಕಾಂತ್ ರ ಮುಂಬರುವ ಆಕ್ಷನ್-ಡ್ರಾಮಾ ಚಿತ್ರದಲ್ಲಿ ಮಾಳವಿಕಾ ನಟಿಸಲಿದ್ದು, ರಜನಿಕಾಂತ್ ಜೊತೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ, ಕಾಲಿವುಡ್‌ನ ಅತಿ ಹೆಚ್ಚು ಬಜೆಟ್ ನ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಲಿದ್ದಾರೆ. ಶೂಟಿಂಗ್ ಡೆಹರಾಡೂನ್, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯಲಿದೆ. ಡಾರ್ಜಲಿಂಗ್‌ನಲ್ಲೂ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದ್ದು, ರಜನೀಕಾಂತ್ -ಮಾಳವಿಕಾ ನಡುವಿನ ರೊಮ್ಯಾಂಟಿಕ್ ಹಾಡನ್ನು ಯುರೋಪ್‌ನಲ್ಲಿ ಚಿತ್ರೀಕರಿಸಲು ಚಿತ್ರ ತಂಡ ಪ್ಲಾನ್ ಮಾಡಿದೆ.
ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ.
ಮೊಸರು:
ಅನೇಕರಿಗೆ ಮೊಸರೆಂದ್ರೆ ಪ್ರಾಣ. ರಾತ್ರಿ ಊಟಕ್ಕೆ ಮೊಸರು ಸೇವಿಸೋದ್ರಿಂದ ಹೊಟ್ಟೆ ತಂಪಾಗಿರುತ್ತೆ ಎಂಬ ನಂಬಿಕೆ. ಗರುಡ ಪುರಾಣದ ಪ್ರಕಾರ ರಾತ್ರಿ ಮೊಸರು ಸೇವಿಸಿದ್ರೆ ನಮ್ಮ ಆಯುಷ್ಯ ಕಡಿಮೆಯಾಗುತ್ತಂತೆ.
ಆಯುರ್ವೇದವೂ ಇದನ್ನೇ ಹೇಳುತ್ತೆ. ರಾತ್ರಿ ಊಟದ ನಂತರ ದೇಹಕ್ಕೆ ನಾವು ಅಷ್ಟು ಕೆಲಸ ಕೊಡುವುದಿಲ್ಲ. ಕೆಲವೇ ಗಂಟೆಗಳಲ್ಲಿ ನಿದ್ದೆಗೆ ಶರಣಾಗುತ್ತೇವೆ. ಆದ್ದರಿಂದ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಮೊಸರು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅನೇಕ ರೋಗಗಳಿಗೆ ಕಾರಣವಾಗುತ್ತದೆ.
ಒಣ ಮಾಂಸ ಸೇವನೆ:
ಗರುಡ ಪುರಾಣದ ಪ್ರಕಾರ ಒಣ ಮಾಂಸ ಸೇವನೆಯಿಂದಲೂ ಆಯಸ್ಸು ಕಡಿಮೆಯಾಗುತ್ತದೆ. ಒಣ ಮಾಂಸವನ್ನು ಅನೇಕ ದಿನಗಳಿಂದ ಸಂಗ್ರಹಿಸಿ ಇಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.
ಬೆಳಗ್ಗೆ ತುಂಬ ಹೊತ್ತು ಮಲಗುವುದು:
ಗರುಡ ಪುರಾಣದ ಪ್ರಕಾರ ಬೆಳಗ್ಗೆ ತುಂಬ ಹೊತ್ತು ಮಲಗುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಆಯುರ್ವೇದದ ಪ್ರಕಾರ ಬೆಳಗಿನ ಜಾವದಲ್ಲೇ ಏಳುವುದರಿಂದ ಉತ್ತಮ ಗಾಳಿಯ ಸೇವನೆ ಮಾಡಬಹುದು. ಶುದ್ಧ ಗಾಳಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಹಿರಿಯರು ಬೇಗ ಎದ್ದು ತಮ್ಮ ಕಾರ್ಯ ಆರಂಭಿಸುತ್ತಿದ್ದರು. ಬೆಳಿಗ್ಗೆ ತಡವಾಗಿ ಏಳುವುದರಿಂದ ಶುದ್ಧ ಗಾಳಿ ಸೇವನೆ ಮಾಡಲು ಸಾಧ್ಯವಾಗದೆ ಇರುವುದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.
ಅಂತ್ಯ ಸಂಸ್ಕಾರದ ಹೊಗೆ ಸೇವನೆ:
ಗರುಡ ಪುರಾಣದ ಪ್ರಕಾರ ಇದು ಕೂಡ ಆಯಸ್ಸನ್ನು ಕಡಿಮೆ ಮಾಡುತ್ತದೆ. ಮನುಷ್ಯನ ಶರೀರ ಬೆಂಕಿಯಲ್ಲಿ ಸುಡುವುದರಿಂದ ಆ ಶವದಲ್ಲಿರುವ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿ ನಮ್ಮ ಶರೀರ ಪ್ರವೇಶಿಸುತ್ತವೆ. ಇದರಿಂದ ನಮಗೂ ಅನೇಕಾನೇಕ ರೋಗ ಬರುವ ಸಾಧ್ಯತೆ ಇದೆ.
ಬೆಳಗ್ಗೆ ಅತಿ ಹೆಚ್ಚು ಲೈಂಗಿಕ ಕ್ರಿಯೆ:
ಬೆಳಗಿನ ವೇಳೆ ಅತಿ ಹೆಚ್ಚು ಲೈಂಗಿಕ ಕ್ರಿಯೆ ಮಾಡುವುದರಿಂದಲೂ ಆಯಸ್ಸು ಕಡಿಮೆಯಾಗುತ್ತದೆ. ಅತಿ ಸಂಭೋಗದಿಂದ ದೇಹ ದುರ್ಬಲವಾಗುತ್ತದೆ. ದೇಹ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ ಎಂದು ಗರುಡ ಪುರಾಣ ಹೇಳಿದೆ.
ಕಲಾವಿದರು ಹಾಗೂ ಕ್ರಿಕೆಟ್ ಆಟಗಾರರು ರಾಜಕೀಯ ಪ್ರವೇಶ ಮಾಡೋದು ಹೊಸದೇನಲ್ಲ. ನವಜೋತ್ ಸಿಂಗ್ ಸಿದ್ದು, ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಅನೇಕ ಕ್ರಿಕೆಟರ್ಸ್ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಈಗ ಇನ್ನೊಬ್ಬ ದಿಗ್ಗಜ ಆಟಗಾರ ರಾಜಕೀಯಕ್ಕೆ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿದೆ.
ಭಾರತದ ಕ್ರಿಕೆಟ್ ತಂಡದಲ್ಲಿ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿರುವ ಓಪನರ್ ಗೌತಮ್ ಗಂಭೀರ್ ರಾಜಕೀಯಕ್ಕೆ ಕಾಲಿಡುವ ಸಾಧ್ಯತೆ ದಟ್ಟವಾಗ್ತಿದೆ. ಗೌತಮ್ ಗಂಭೀರ್ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧೆ ನಡೆಸಲಿದ್ದಾರೆಂದು ಮೂಲಗಳು ಹೇಳಿವೆ. ದೆಹಲಿಯಿಂದ ಗೌತಮ್ ಗಂಭೀರ್ ಸ್ಪರ್ಧೆ ನಡೆಸುವ ಸಾಧ್ಯತೆ ಹೆಚ್ಚಿದೆ.
ಗಂಭೀರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿಲ್ಲ. 2016 ರಲ್ಲಿ ಕೊನೆ ಟೆಸ್ಟ್ ಪಂದ್ಯ ಆಡಿರುವ ಗಂಭೀರ್ ನಂತ್ರ ದೆಹಲಿ ರಣಜಿ ತಂಡದ ಪರ ಮೈದಾನಕ್ಕಿಳಿಯುತ್ತಿದ್ದಾರೆ. ಮೂಲತಃ ದೆಹಲಿಯವರಾದ ಗೌತಮ್ ಗಂಭೀರ್, ಬಿಜೆಪಿ ಆಹ್ವಾನವನ್ನು ಸ್ವೀಕರಿಸಿದ್ದಾರೆಂದು ಮೂಲಗಳು ಹೇಳ್ತಿವೆ.
ಫೇಸ್ಬುಕ್ ಇಲ್ಲದೆ ಒಂದು ದಿನ ಬದುಕೋದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸದಾ ಫೇಸ್ಬುಕ್ ನಲ್ಲಿರುವವರಿಗೆ ಒಂದು ಖುಷಿ ಸುದ್ದಿಯಿದೆ. ಫೇಸ್ಬುಕ್ ನೋಡೋದೊಂದೆ ಅಲ್ಲ ಅಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತಿದೆ. ಫೇಸ್ಬುಕ್ ಭಾರತದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಮುಂದಾಗಿದೆ. ಫೇಸ್ಬುಕ್ ನಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗೂ ಇದ್ರೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಫೇಸ್ಬುಕ್ ಇಂಡಿಯಾ ಖಾಲಿಯಿರುವ ಹುದ್ದೆಗಳಿಗಾಗಿ ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ ನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇ-ಕಾಮರ್ಸ್ ನ ಕ್ರಿಯೇಟಿವ್ ಸ್ಟ್ರೆಟಜಿ ಹೆಡ್, ಸಣ್ಣ ಮತ್ತು ಮಧ್ಯಮ ವ್ಯವಹಾರ ನಿರ್ದೇಶಕ, ವರ್ಟಿಕಲ್ ಹೆಡ್, ಸ್ಟ್ರಾಟಜಿ ಪಾರ್ಟನರ್, ದಕ್ಷಿಣ ಏಷ್ಯಾ ಮತ್ತು ಭಾರತದ ಪಬ್ಲಿಕ್ ಪಾಲಿಸಿ ಮ್ಯಾನೇಜರ್, ಭಾರತದಲ್ಲಿ ಹೊಸ ಸಹಭಾಗಿತ್ವಕ್ಕಾಗಿ ಸ್ಟ್ರಾಟಜಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಗುರ್ಗಾಂವ್ ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಭಾರತದಲ್ಲಿ ಫೇಸ್ಬುಕ್ ವ್ಯವಸ್ಥಾಪಕ ನಿರ್ದೇಶಕ ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಜೀನಾಮೆ ನೀಡಿದ್ದರು. ಅಲ್ಲಿಂದ ಈ ಹುದ್ದೆ ಖಾಲಿಯಾಗಿದೆ. ಕಂಪನಿ ಸರಿಯಾದ ವ್ಯಕ್ತಿಯನ್ನು ಹುಡುಕುತ್ತಿದೆ.
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಭಾನುವಾರ ಮಹಿಳಾ ಕಬಡ್ಡಿ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ. ಇತ್ತ ಬಟರ್ಫ್ಲೈ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಪದಕ ಬರೋದು ನಿಶ್ಚಿತವಾಗಿದೆ. 200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ ನಲ್ಲಿ ಈಜುಗಾರ ಸಜನ್ ಪ್ರಕಾಶ್ ಫೈನಲ್ ಪ್ರವೇಶ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಭಾರತದ ಸಜನ್, ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾದ್ರು. ಈ ಮೂಲಕ 200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ ನ ಫೈನಲ್ ಪ್ರವೇಶ ಮಾಡಿದ್ದಾರೆ. ಸಜನ್ ಹಿಟ್-3ನಲ್ಲಿ ಒಂದು ನಿಮಿಷ 58.12 ಸೆಕೆಂಡ್ ಸಮಯ ತೆಗೆದುಕೊಂಡು ಮೊದಲ ಸ್ಥಾನ ಪಡೆದ್ರು. ನಂತ್ರ ನಡೆದ ಅಂತಿಮ ಪಟ್ಟಿಯಲ್ಲಿ ಟಾಪ್ -8ರಲ್ಲಿ ಸ್ಥಾನ ಪಡೆದ್ರು.
ಇದಲ್ಲದೆ 17 ವರ್ಷದ ಭಾರತದ ಶ್ರೀಹರಿ ನಟರಾಜ್ ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದಾರೆ. ಹಿಟ್ -1ರಲ್ಲಿ ಮೊದಲ ಸ್ಥಾನ ಪಡೆದ ಶ್ರೀಹರಿ ನಟರಾಜನ್ ಅಂತಿಮ ಪಟ್ಟಿ ಟಾಪ್ 8ನಲ್ಲಿ ಸ್ಥಾನ ಪಡೆದಿದ್ದಾರೆ.
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮಹಿಳಾ ಕಬಡ್ಡಿ ತಂಡ ಗೆಲುವಿನ ನಗೆ ಬೀರಿದೆ. ಮೊದಲ ದಿನ ಭಾರತೀಯ ಮಹಿಳಾ ಕಬಡ್ಡಿ ತಂಡ ಜಪಾನ್ ತಂಡವನ್ನು ಮಣಿಸಿದೆ.
ಗ್ರೂಪ್ ಎ ತಂಡದಲ್ಲಿ ಆಡ್ತಿರುವ ಭಾರತ, ಜಪಾನ್ ತಂಡವನ್ನು 43-12 ಅಂಕಗಳಿಂದ ಗೆಲುವು ಸಾಧಿಸಿದೆ. ತಂಡ ಆರಂಭದಿಂದಲೂ ಆತ್ಮವಿಶ್ವಾಸದೊಂದಿಗೆ ಆಟವಾಡ್ತು. ಮೊದಲಾರ್ಧದಲ್ಲಿ ಜಪಾನ್ ವಿರುದ್ಧ 19-18ರಲ್ಲಿ ಮುನ್ನಡೆ ಸಾಧಿಸಿತ್ತು. ಮಹಿಳಾ ಕಬಡ್ಡಿ ತಂಡ 2010ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾಗಿಯಾಗಿತ್ತು.
ಮಹಿಳಾ ಕಬಡ್ಡಿ ತಂಡ ಮೂರು ವರ್ಷಗಳಿಂದ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಇನ್ನೊಮ್ಮೆ ಚಿನ್ನದ ನಿರೀಕ್ಷೆಯಲ್ಲಿದೆ. 18ನೇ ಏಷ್ಯನ್ ಗೇಮ್ಸ್ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿದೆ. ಆಗಸ್ಟ್ 18ರಿಂದ ಪಂದ್ಯಾವಳಿ ಶುರುವಾಗಿದ್ದು ಸೆಪ್ಟೆಂಬರ್ 2ರವರೆಗೆ ಪಂದ್ಯಾವಳಿ ನಡೆಯಲಿದೆ.
ಪ್ರವಾಹಕ್ಕೆ ಕೇರಳ ಮುಳುಗಿ ಹೋಗಿದೆ. ಮಳೆ, ಪ್ರವಾಹಕ್ಕೆ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಕೇರಳ ಜನರ ನೆರವಿಗೆ ಕೇಂದ್ರ ಸರ್ಕಾರದಿಂದ ಹಿಡಿದು ಇಡೀ ದೇಶವೇ ಮುಂದೆ ಬಂದಿದೆ. ಜನರು ಕೇರಳಿಗರ ನೆರವಿಗೆ ಧಾವಿಸುತ್ತಿದ್ದಾರೆ. ಈ ಮಧ್ಯೆ ರೈಲ್ವೆ ಇಲಾಖೆ ಕೂಡ ಕೇರಳಿಗರ ನೆರವಿಗೆ ಮುಂದಾಗಿದೆ.
ಕೇರಳದ ನಿರಾಶ್ರಿತರಿಗೆ ಉಚಿತವಾಗಿ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಬಹುದಾಗಿದೆ. ಕೇರಳದ ಯಾವುದೇ ರೈಲು ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳನ್ನು ನೀವು ರೈಲಿನ ಮೂಲಕ ಕಳುಹಿಸಬಹುದು. ಇದಕ್ಕೆ ರೈಲ್ವೆ ಇಲಾಖೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಕೇರಳದ ಪರಿಹಾರ ಕಾರ್ಯಕ್ಕೆ ವೇಗ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ಎಲ್ಲ ರೀತಿಯ ಸಹಾಯಕ್ಕೂ ಸಿದ್ಧ ಎಂದು ಘೋಷಣೆ ಮಾಡಿದೆ.
ಆಗಸ್ಟ್ 31ರವರೆಗೆ ರೈಲಿನ ಮೂಲಕ ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಕೇರಳಕ್ಕೆ ಕಳುಹಿಸಬಹುದಾಗಿದೆ. ಎಲ್ಲಾ ಪ್ರಯಾಣಿಕ ರೈಲುಗಳಲ್ಲಿ ಎಸ್ಎಲ್ಆರ್ ಅಥವಾ ಪಾರ್ಸೆಲ್ ವ್ಯಾನ್ ನಲ್ಲಿ ಪರಿಹಾರ ಸಾಮಗ್ರಿಯನ್ನು ಕಳುಹಿಸಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ.
ಆದಷ್ಟು ಬೇಗ ಪರಿಹಾರ ಸಾಮಗ್ರಿ ನಿರಾಶ್ರಿತರನ್ನು ತಲುಪಲಿ ಎನ್ನುವ ಕಾರಣಕ್ಕೆ ಹೆಚ್ಚುವರಿ ಬೋಗಿ ಅಥವಾ ಪಾರ್ಸಲ್ ವ್ಯಾನ್ ಅಳವಡಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ. ರೈಲಿನ ನಿರ್ದೇಶಕರು ಈ ಬಗ್ಗೆ ನಿರ್ಣಯ ಕೈಗೊಳ್ಳಬಹುದಾಗಿದೆ.
ಮುಂದಿನ ವರ್ಷ 2019ರಲ್ಲಿ ಸಾರ್ವಜನಿಕ ಚುನಾವಣೆ ನಡೆಯಲಿದೆ. ಇಡೀ ವಿಶ್ವವೇ ದೇಶದ ಚುನಾವಣೆಯನ್ನು ಎದುರು ನೋಡ್ತಿದೆ. ಬಿಜೆಪಿ ಗೆಲುವು ಸಾಧಿಸಲಿದ್ಯಾ ಇಲ್ಲ ಕಾಂಗ್ರೆಸ್ ಕೈಗೆ ಅಧಿಕಾರ ಹೋಗಲಿದ್ಯಾ ಎಂಬ ಪ್ರಶ್ನೆಗೆ ಫಲಿತಾಂಶದ ನಂತ್ರವೇ ಉತ್ತರ ಸಿಗಲಿದೆ.
ಚುನಾವಣೆ ದಿನಾಂಕ ಪ್ರಕಟಕ್ಕೂ ಮುನ್ನವೇ ಅನೇಕ ಸರ್ವೆಗಳು ನಡೆಯುತ್ತಿವೆ. ಇತ್ತೀಚಿಗೆ ನಡೆದ ಸರ್ವೆಯೊಂದರ ಫಲಿತಾಂಶ ಬಿಜೆಪಿಗೆ ಆಘಾತ ಹುಟ್ಟಿಸುವಂತಿದೆ. ಈಗ್ಲೇ ಚುನಾವಣೆ ನಡೆದ್ರೆ ಬಿಜೆಪಿ ನೇರವಾಗಿ 80 ಸೀಟುಗಳನ್ನು ಕಳೆದುಕೊಳ್ಳಲಿದೆಯಂತೆ. ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದ್ರೆ ಬಹುಮತ ಕಳೆದುಕೊಳ್ಳೋದು ನಿಶ್ಚಿತವೆಂದು ಸರ್ವೆಯಲ್ಲಿ ಹೇಳಲಾಗಿದೆ.
ಕಾರ್ವಿ ಇನ್ಸೈಟ್ಸ್ ಮತ್ತು ಇಂಡಿಯಾ ಟುಡೇ ಜೊತೆಗೂಡಿ ಮಾಡಿತ್ತು. ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಇರಾನ್ ನಲ್ಲಿ ಆಶ್ಚರ್ಯಕಾರಿ ಘಟನೆಯೊಂದು ನಡೆದಿದೆ. ಕೋಪದಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಬುರ್ಕಾ ತೆಗೆದು ವಿವಾದಕ್ಕೆ ಕಾರಣವಾಗಿದ್ದಾಳೆ. ಮುಸ್ಲಿಂ ಧರ್ಮಗುರು ಬುರ್ಕಾ ಸರಿಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದ್ರಿಂದ ಕೋಪಗೊಂಡ ಮಹಿಳೆ ಬುರ್ಕಾ ಕಿತ್ತೆಸೆದಿದ್ದಾಳೆ.
ವಿಡಿಯೋವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಲಾಗಿದ್ದು,ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಧರ್ಮಗುರು ಬುರ್ಕಾ ಸರಿ ಮಾಡಿಕೊಳ್ಳುವಂತೆ ಮಹಿಳೆಗೆ ಸಲಹೆ ನೀಡಿದ್ದಾರೆ. ಇಲ್ಲವಾದ್ರೆ ಶಿಕ್ಷೆ ನೀಡುವುದಾಗಿ ಹೇಳ್ತಿದ್ದಾರೆ. ಇದ್ರಿಂದ ಕೋಪಗೊಂಡ ಮಹಿಳೆ ಧರ್ಮಗುರುವಿಗೆ ಬೈಯ್ಯುವುದಲ್ಲದೆ ಬುರ್ಕಾ ತೆಗೆದೆಸೆಯುತ್ತಾಳೆ.
ಕಳೆದ 40 ವರ್ಷಗಳಿಂದ ಇರಾನ್ ನಲ್ಲಿ ಬುರ್ಕಾ ಅನಿವಾರ್ಯವಾಗಿದೆ.ಬುರ್ಕಾ ಧರಿಸದೆಯಿರುವ ಮಹಿಳೆಯರಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ವರ್ಷ ಫೆಬ್ರವರಿಯಿಂದ ಬುರ್ಕಾ ಧರಿಸದ 29 ಮಹಿಳೆಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ. ಇರಾನ್ ನಲ್ಲಿ ಕೆಲ ಮಹಿಳೆಯರು ಬುರ್ಕಾಗೆ ವಿರೋಧ ವ್ಯಕ್ತಪಡಿಸಿದ ಹೋರಾಟ ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಬುರ್ಕಾಕ್ಕೆ ವಿರೋಧ ವ್ಯಕ್ತವಾಗಿದೆ.